ಬ್ಯಾಂಕ್ ಸಾಲ ಪಾವತಿಸದಿದ್ದಲ್ಲಿ ದಂಡ ವಿಧಿಸುವಂತಿಲ್ಲ! ಆರ್‌ಬಿಐ ಹೊಸ ನಿಯಮ

ಬ್ಯಾಂಕ್‌ಗಳು, ಎನ್‌ಬಿಎಫ್‌ಸಿಗಳು ಸಾಲದ ಮೇಲಿನ ದಂಡದ ಬಡ್ಡಿಯನ್ನು ವಿಧಿಸುವುದನ್ನು ಆರ್‌ಬಿಐ  ನಿಷೇಧಿಸಿದೆ. ಸಾಲಗಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ ಹಣಕಾಸು ಸಂಸ್ಥೆಗಳ ಮೇಲಿನ ಕಟ್ಟುನಿಟ್ಟನ್ನು ಹೆಚ್ಚಿಸಿದೆ.

Written by - Ranjitha R K | Last Updated : Aug 21, 2023, 01:44 PM IST
  • ಹೊಸ ನಿಯಮಗಳನ್ನು ಹೊರಡಿಸಿದ ರಿಸರ್ವ್ ಬ್ಯಾಂಕ್ .
  • ಹೊಸ ನಿಯಮಗಳು ಜನವರಿ 1, 2024 ರಿಂದ ಜಾರಿಗೆ ಬರಲಿವೆ.
  • ಹೆಚ್ಚುವರಿ ಬಡ್ಡಿಯನ್ನು ಲೆಕ್ಕ ಹಾಕಲಾಗುವುದಿಲ್ಲ.
ಬ್ಯಾಂಕ್ ಸಾಲ ಪಾವತಿಸದಿದ್ದಲ್ಲಿ ದಂಡ ವಿಧಿಸುವಂತಿಲ್ಲ!  ಆರ್‌ಬಿಐ ಹೊಸ ನಿಯಮ  title=

Loan Rules Changed by RBI : ಭಾರತೀಯ ರಿಸರ್ವ್ ಬ್ಯಾಂಕ್ ಕೋಟ್ಯಂತರ ಗ್ರಾಹಕರಿಗೆ ದೊಡ್ಡ ಪರಿಹಾರವನ್ನು ನೀಡಿದೆ. ಆರ್‌ಬಿಐ ಸಾಲದ ಖಾತೆಗಳ (Loan Account) ಮೇಲಿನ ದಂಡ ಮತ್ತು ಬಡ್ಡಿದರಗಳ ನಿಯಮಗಳನ್ನು ಬದಲಾಯಿಸಿದೆ. ಸಾಲದ ಖಾತೆಗಳ ಮೇಲೆ ದಂಡವನ್ನು ವಿಧಿಸುವುದನ್ನು ಕೇಂದ್ರ ಬ್ಯಾಂಕ್ ನಿಷೇಧಿಸಿದೆ.  ಮುಂದಿನ ವರ್ಷದಿಂದ ಅಂದರೆ ಜನವರಿ 1, 2024 ರಿಂದ ಹೊಸ ನಿಯಮಾವಳಿಗಳನ್ನು ಜಾರಿಗೆ ತರಲಾಗುವುದು ಎಂದು ಆರ್‌ಬಿಐ ತಿಳಿಸಿದೆ. ಆರ್‌ಬಿಐನ ಈ ಹೊಸ ನಿಯಮ ಎಲ್ಲಾ ಬ್ಯಾಂಕ್‌ಗಳಿಗೂ ಅನ್ವಯಿಸುತ್ತದೆ. ಹೊಸ ನಿಯಮಗಳು ವಾಣಿಜ್ಯ, ಎನ್‌ಬಿಎಫ್‌ಸಿ, ಸಹಕಾರಿ ಬ್ಯಾಂಕ್, ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್, ನಬಾರ್ಡ್, ಎಸ್‌ಐಡಿಬಿಐ ಮುಂತಾದ ಎಲ್ಲಾ ಬ್ಯಾಂಕ್‌ಗಳಿಗೆ ಅನ್ವಯಿಸುತ್ತವೆ. ಈ ಮೂಲಕ ಮನೆ, ವಾಹನ ಅಥವಾ ಆಸ್ತಿಗಾಗಿ ಸಾಲ ಪಡೆಯುವವರ ಹಿತಾಸಕ್ತಿಯನ್ನು ಕಾಪಾಡಲು  ಭಾರತೀಯ ರಿಸರ್ವ್ ಬ್ಯಾಂಕ್ ದೊಡ್ಡ ಹೆಜ್ಜೆಯನ್ನೇ ಇಟ್ಟಿದೆ.  

ಹೊಸ ನಿಯಮ ಹೊರಡಿಸಿದ ಆರ್‌ಬಿಐ : 
ಬ್ಯಾಂಕ್‌ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ತಮ್ಮ ಗಳಿಕೆಯನ್ನು ಹೆಚ್ಚಿಸುವ ಸಾಧನವಾಗಿ 'ಪೆನಾಲ್ಟಿ ಬಡ್ಡಿ'ಯನ್ನು ಬಳಸುವ ಪ್ರವೃತ್ತಿಯ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್,  ಕಳವಳ ವ್ಯಕ್ತಪಡಿಸಿದೆ. ಕೇಂದ್ರ ಬ್ಯಾಂಕ್ ಈ ನಿಟ್ಟಿನಲ್ಲಿ ಪರಿಷ್ಕೃತ ನಿಯಮಗಳನ್ನು ಹೊರಡಿಸಿದೆ. ಹೊಸ ನಿಯಮಗಳ ಪ್ರಕಾರ, ಸಾಲದಲ್ಲಿ ಡೀಫಾಲ್ಟ್ ಆಗಿದ್ದಲ್ಲಿ ಬ್ಯಾಂಕ್‌ಗಳು ಗ್ರಾಹಕರಿಗೆ ಕೇವಲ 'ಸಮಂಜಸವಾದ' ಶುಲ್ಕವನ್ನು ಮಾತ್ರ ವಿಧಿಸಬಹುದು ಎಂದು ಹೇಳಿದೆ. 

ಇದನ್ನೂ ಓದಿ : ಇಂದಿನ ಅಡಿಕೆ ಧಾರಣೆ: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ..?

ಹೊಸ ನಿಯಮಗಳು ಜನವರಿ 1, 2024 ರಿಂದ ಜಾರಿ : 
ಸಾಲದ ಖಮೇಲಿನ ಬಡ್ಡಿ ಹೊರತುಪಡಿಸಿ ಬ್ಯಾಂಕ್ ವಿಧಿಸುವ ಪೆನಾಲ್ಟಿ ಇಂಟರೆಸ್ಟ್  ಕುರಿತು ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಇದರ ಅನ್ವಯ ಜನವರಿ 1, 2024 ರಿಂದ ಬ್ಯಾಂಕ್‌ಗಳು ಮತ್ತು ಸಾಲ ನೀಡುವ ಸಂಸ್ಥೆಗಳು ಬಾಕಿ ಮೇಲೆ ಮತ್ತೆ ಪೆನಾಲ್ಟಿ ಇಂಟರೆಸ್ಟ್ ಹಾಕುವಂತಿಲ್ಲ ಎಂದು  ಸ್ಪಷ್ಟವಾಗಿ ಹೇಳಿದೆ. 

ಬಡ್ಡಿ ದರದಲ್ಲಿ ಯಾವುದೇ ಹೆಚ್ಚುವರಿ ಅಂಶವನ್ನು ಸೇರಿಸದಂತೆ ಮತ್ತು ಈ ಮಾರ್ಗಸೂಚಿಗಳ ಅನುಸರಣೆಯನ್ನು ಸರಿಯಾಗಿ ಅನುಷ್ಠಾನಗೊಳಿಸುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿದೆ. ಬ್ಯಾಂಕ್ ಗ್ರಾಹಕರಿಗೆ ವಿಧಿಸುವ ದಂಡ ಶುಲ್ಕದ ಮೊತ್ತವು ಸಮಂಜಸವಾಗಿರಬೇಕು. ಇದು ನಿರ್ದಿಷ್ಟ ಸಾಲ ಅಥವಾ ಉತ್ಪನ್ನ ವರ್ಗದಲ್ಲಿ ತಾರತಮ್ಯವಿಲ್ಲದೆ ಸಾಲ ಒಪ್ಪಂದದ ನಿಯಮಗಳು ಮತ್ತು ಷರತ್ತುಗಳನ್ನು ಪಾಲಿಸದಿರುವಿಕೆಗೆ ಅನುಗುಣವಾಗಿರುತ್ತದೆ.

ಇದನ್ನೂ ಓದಿ ಸರ್ಕಾರಿ ನೌಕರರಿಗೆ ಡಬಲ್ ಜಾಕ್ ಪಾಟ್ ! ಸಿಗಲಿದೆ ಭರ್ಜರಿ ಬೋನಸ್, ಜೊತೆಗೆ ವೇತನದಲ್ಲಿಯೂ ಹೆಚ್ಚಳ

ವೈಯಕ್ತಿಕ ಸಾಲ, ಗೃಹ ಸಾಲ ಇತ್ಯಾದಿ ವ್ಯವಹಾರಗಳನ್ನು ಹೊರತುಪಡಿಸಿ ಇತರ ಉದ್ದೇಶಗಳಿಗಾಗಿ ಮಂಜೂರಾದ ಸಾಲಗಳಿಗೆ ಅನ್ವಯವಾಗುವ ದಂಡದ ಶುಲ್ಕಗಳು ಮಿತಿಯನ್ನು ಮೀರುವಂತಿಲ್ಲ. ದಂಡದ ಶುಲ್ಕದ ಮೊತ್ತ ಮತ್ತು ಕಾರಣಗಳನ್ನು ಬ್ಯಾಂಕ್‌ಗಳು ಸಾಲ ಒಪ್ಪಂದದಲ್ಲಿ ಗ್ರಾಹಕರಿಗೆ ಸ್ಪಷ್ಟವಾಗಿ ನಮೂದಿಸುತ್ತವೆ. ಬಡ್ಡಿದರಗಳು ಮತ್ತು ಸೇವಾ ಶುಲ್ಕಗಳ ಅಡಿಯಲ್ಲಿ ಬ್ಯಾಂಕ್‌ಗಳ ವೆಬ್‌ಸೈಟ್‌ಗಳಲ್ಲಿ ಅನ್ವಯವಾಗುವಂತೆ ಹೆಚ್ಚಿನ ಪ್ರಮುಖ ನಿಯಮಗಳು ಮತ್ತು ಷರತ್ತುಗಳನ್ನು ಪ್ರದರ್ಶಿಸಬೇಕು.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಕೆಲವು ದಿನಗಳ ಹಿಂದೆ 44 ನೇ ಹಣಕಾಸು ನೀತಿ ಪರಿಶೀಲನಾ ಸಭೆಯಲ್ಲಿ (MBC ಸಭೆ) ರೆಪೊ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಿಲ್ಲ. ಈ ಕುರಿತು ರಿಸರ್ವ್ ಬ್ಯಾಂಕ್ ಅಧಿಸೂಚನೆ ಹೊರಡಿಸಿದೆ. ಏಪ್ರಿಲ್ ಮತ್ತು ಜೂನ್ ನಂತರ, ಆರ್‌ಬಿಐ ಆಗಸ್ಟ್‌ನಲ್ಲಿ ಮೂರನೇ ಬಾರಿಗೆ ರೆಪೊ ದರವನ್ನು ಬದಲಾಯಿಸದೆ ಇರಿಸಿದೆ. ಜೂನ್‌ನಲ್ಲಿ, ಆರ್‌ಬಿಐ ರೆಪೊ ದರವನ್ನು ಯಥಾಸ್ಥಿತಿಯಲ್ಲಿ 6.5 ಶೇಕಡಾದಲ್ಲಿ ಇರಿಸಿತ್ತು. ಈಗ ಮತ್ತೆ ಅದೇ ಪ್ರಮಾಣದಲ್ಲಿ ವಿಸ್ತರಣೆ ಮಾಡಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News