Gold Price 7th September : ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ನಿರಂತರ ಇಳಿಕೆ ಕಂಡುಬರುತ್ತಿದೆ. ಕಳೆದ ಕೆಲವು ದಿನಗಳಿಂದ ಎರಡೂ ಬೆಲೆಬಾಳುವ ಲೋಹಗಳ ದರದಲ್ಲಿ ಭಾರೀ ಮಟ್ಟದಲ್ಲಿ ಇಳಿಕೆ ಕಂಡು ಬರುತ್ತಿದೆ. ಗುರುವಾರ, ಬುಲಿಯನ್ ಮಾರುಕಟ್ಟೆಯೊಂದಿಗೆ, ಮಲ್ಟಿ-ಕಮೊಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್) ನಲ್ಲಿಯೂ ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬಂದಿದೆ. 


COMMERCIAL BREAK
SCROLL TO CONTINUE READING

ಎಂಸಿಎಕ್ಸ್ ನಲ್ಲಿ ಕಂಡು ಬಂದ ಕುಸಿತ : 
ಗುರುವಾರದ ವಹಿವಾಟಿನ ಅವಧಿಯಲ್ಲಿ, ಬಹು ಸರಕು ವಿನಿಮಯ ಕೇಂದ್ರದಲ್ಲಿ (MCX) ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಕುಸಿತ ಕಂಡುಬಂದಿದೆ. ಮಧ್ಯಾಹ್ನದ ವೇಳೆಗೆ ಪ್ರತಿ 10 ಗ್ರಾಂ ಚಿನ್ನ 112 ರೂ.ನಷ್ಟು ಕುಸಿದು ಬಂಗಾರದ ಬೆಲೆ 58976 ರೂ.ಗೆ ತಲುಪಿದೆ. ಇನ್ನು ಬೆಳ್ಳಿ ಪ್ರತಿ ಕೆಜಿಗೆ 292 ರೂ. ಇಳಿಕೆಯಾಗಿ 
72180 ರೂ. ಆಗಿದೆ. ಬುಧವಾರದಂದು ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ  
59088  ರೂಪಾಯಿ ಆಗಿದ್ದರೆ, ಬೆಳ್ಳಿ ಪ್ರತಿ ಕೆಜಿಗೆ 72472 ರೂ. ಆಗಿದೆ. 


ಇದನ್ನೂ ಓದಿ : ಭಾರತೀಯ ರೈಲ್ವೆಯ ಸ್ಪೆಷಲ್ ಆಫರ್ ! ಕಡಿಮೆ ದರದಲ್ಲಿ ದಕ್ಷಿಣದ ತೀರ್ಥ ಕ್ಷೇತ್ರಗಳ ಪ್ರವಾಸ


ಬುಲಿಯನ್ ಮಾರುಕಟ್ಟೆಯಲ್ಲಿಯೂ ಕುಸಿತ : 
ಬುಲಿಯನ್ ಮಾರುಕಟ್ಟೆಯ ದರಗಳನ್ನು ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​(ಐಬಿಜೆಎ) ಬಿಡುಗಡೆ ಮಾಡುತ್ತದೆ. ಗುರುವಾರ ಮಧ್ಯಾಹ್ನ IBJA ವೆಬ್‌ಸೈಟ್ https://ibjarates.com ನಲ್ಲಿ ಬಿಡುಗಡೆ ಮಾಡಿದ ದರದ ಪ್ರಕಾರ , ಚಿನ್ನ ಮತ್ತು ಬೆಳ್ಳಿಯಲ್ಲಿ ಇಳಿಕೆಯಾಗಿದೆ. ಗುರುವಾರ ಪ್ರತಿ 10 ಗ್ರಾಂ ಚಿನ್ನದ ಬೆಲೆ 200 ರೂ.ಗಿಂತ ಹೆಚ್ಚು ಕುಸಿದು 59,125 ರೂ.ಗೆ ಆಗಿದೆ. ಬೆಳ್ಳಿ ಕೆಜಿಗೆ 900 ರೂ.ಯಷ್ಟು ಕಡಿಮೆಯಾಗಿದೆ. 


ಬುಧವಾರದಂದು ಪ್ರತಿ 10 ಗ್ರಾಂ ಚಿನ್ನ 59,329 ರೂ. ಮತ್ತು ಬೆಳ್ಳಿ ಕೆಜಿಗೆ 72,065 ಆಗಿತ್ತು.  ಗುರುವಾರದಂದು  ಪ್ರತಿ 10ಗ್ರಾಂ. ನಂತೆ 23ಕ್ಯಾರೆಟ್ ಚಿನ್ನದ ಬೆಲೆ 58,888, 22ಕ್ಯಾರೆಟ್ ಚಿನ್ನ 54,159, 20ಕ್ಯಾರೆಟ್ ಚಿನ್ನ 44,344 ಮತ್ತು 18ಕ್ಯಾರೆಟ್ ಚಿನ್ನ 34,588 ರೂಪಾಯಿ ಆಗಿದೆ. 


ಇದನ್ನೂ ಓದಿ : ಯಾವುದೇ ಹೂಡಿಕೆ ಇಲ್ಲದೆ ಸರ್ಕಾರ ನೀಡುತ್ತದೆ ಮಾಸಿಕ 3 ಸಾವಿರ ರೂ ಪಿಂಚಣಿ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.