ಮತ್ತೆ ಕುಸಿಯಿತು ಬಂಗಾರದ ಬೆಲೆ ! ಖರೀದಿಗೆ ಸರಿಯಾದ ಸಮಯ ಇದುವೇ
Gold Price Today : ಕಳೆದ ಕೆಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇದೇ ರೀತಿಯ ಏರಿಳಿತಗಳು ಕಾಣುತ್ತಲೇ ಇದೆ. ಬುಧವಾರ ಮತ್ತೊಮ್ಮೆ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಕುಸಿತ ಕಾಣುತ್ತಿದೆ.
ಬೆಂಗಳೂರು : ಕಳೆದ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯಲ್ಲಿ ಭಾರೀ ಏರಿಕೆಯ ನಂತರ, ಈಗ ಮತ್ತೆ ಎರಡೂ ಲೋಹಗಳ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಕಳೆದ ಕೆಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇದೇ ರೀತಿಯ ಏರಿಳಿತಗಳು ಕಾಣುತ್ತಲೇ ಇದೆ. ಬುಧವಾರ ಮತ್ತೊಮ್ಮೆ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಕುಸಿತ ಕಾಣುತ್ತಿದೆ. ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತೆ 61,000 ರೂ.ಗಿಂತ ಕೆಳಗೆ ಕುಸಿದಿದೆ. ಅದೇ ರೀತಿ ಬೆಳ್ಳಿಯ ದರವೂ 72,000ಕ್ಕಿಂತ ಕೆಳಗಿದೆ. ಕೆಲ ದಿನಗಳ ಹಿಂದಷ್ಟೇ ಬೆಳ್ಳಿ 74,000 ಮತ್ತು ಚಿನ್ನ 61,000 ರೂಪಾಯಿ ದಾಟಿತ್ತು.
ಎಂಸಿಎಕ್ಸ್ ನಲ್ಲಿ ಮಿಶ್ರ ಪ್ರವೃತ್ತಿ :
ಚಿನ್ನ-ಬೆಳ್ಳಿ ಅಥವಾ ಅದರಿಂದ ಮಾಡಿದ ಆಭರಣಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ಇದು ಸರಿಯಾದ ಸಮಯ. ಬುಧವಾರ, ಬುಲಿಯನ್ ಮಾರುಕಟ್ಟೆಯಲ್ಲಿ ಲೋಹದ ಬೆಲೆಯಲ್ಲಿ ಕುಸಿತ ಮತ್ತು ಮಲ್ಟಿ-ಕಮಾಡಿಟಿ ಎಕ್ಸ್ಚೇಂಜ್ ನಲ್ಲಿ ಮಿಶ್ರ ಪ್ರವೃತ್ತಿ ಕಂಡುಬರುತ್ತಿದೆ. ಕಳೆದ ಕೆಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿತ್ತು. ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ಚಿನ್ನದ ದರ 10 ಗ್ರಾಂಗೆ 65,000 ರೂ.ವರೆಗೆ ಏರಿಕೆ ಕಾಣಬಹುದು ಎಂದು ಹೇಳಲಾಗುತ್ತಿದೆ. ಅದೇ ರೀತಿ ಬೆಳ್ಳಿ ದರ ಕೆ.ಜಿಗೆ 80,000 ರೂ.ಗೆ ಏರುವ ನಿರೀಕ್ಷೆಯಿದೆ.
ಇದನ್ನೂ ಓದಿ : Arecanut today price: ರಾಜ್ಯದ ಅಡಿಕೆ ಮಾರುಕಟ್ಟೆಯ ಇಂದಿನ ಧಾರಣೆ ಹೇಗಿದೆ..?
ಎಂಸಿಎಕ್ಸ್ನಲ್ಲಿ ಮಿಶ್ರ ಪ್ರವೃತ್ತಿ :
ಬುಧವಾರ, ಮಲ್ಟಿ-ಕಮೊಡಿಟಿ ಎಕ್ಸ್ಚೇಂಜ್ನಲ್ಲಿ (ಎಂಸಿಎಕ್ಸ್) ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಮಿಶ್ರ ಪ್ರವೃತ್ತಿ ಕಂಡುಬಂದಿದೆ. ಬುಧವಾರ, ಎಂಸಿಎಕ್ಸ್ನಲ್ಲಿ ಬೆಳ್ಳಿ ಪ್ರತಿ ಕೆಜಿಗೆ 204 ರೂ. ಕುಸಿದು 72381 ರೂ.ಗೆ ಇಳಿದಿದೆ. ಚಿನ್ನದ ಬೆಲೆಯಲ್ಲಿ 50 ರೂಪಾಯಿ ಏರಿಕೆಯೊಂದಿಗೆ 60294 ರೂಪಾಯಿಯಲ್ಲಿ ವಹಿವಾಟು ನಡೆಸಿತು.
ಬುಲಿಯನ್ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಕುಸಿತ:
ಬುಲಿಯನ್ ಮಾರುಕಟ್ಟೆಯ ದರವನ್ನು ಪ್ರತಿದಿನ https://ibjarates.com ನಿಂದ ನೀಡಲಾಗುತ್ತದೆ . ಬುಧವಾರ ಬಿಡುಗಡೆಯಾದ ದರದ ಪ್ರಕಾರ, ಚಿನ್ನವು 500 ರೂ.ಗಿಂತ ಹೆಚ್ಚು ಕುಸಿದು 10 ಗ್ರಾಂಗೆ 60618 ರೂ.ಗೆ ತಲುಪಿದೆ. ಅದೇ ರೀತಿ ಬೆಳ್ಳಿ ಪ್ರತಿ ಕೆಜಿಗೆ ಸುಮಾರು 200 ರೂಪಾಯಿ ಇಳಿಕೆಯಾಗಿ 71739 ರೂಪಾಯಿಗಳಿಗೆ ತಲುಪಿದೆ.
ಇದನ್ನೂ ಓದಿ : PF Rules : ಕಂಪನಿ ಬದಲಾಯಿಸಿದ ತಕ್ಷಣ ಈ ಕೆಲಸ ಮಾಡದಿದ್ದಲ್ಲಿ ಆಗುವುದು ಭಾರೀ ನಷ್ಟ !
ಬುಧವಾರ ಬುಲಿಯನ್ ಮಾರುಕಟ್ಟೆಯಲ್ಲಿ 23 ಕ್ಯಾರೆಟ್ ಚಿನ್ನದ ದರ 60375 ರೂ., 22 ಕ್ಯಾರೆಟ್ ಚಿನ್ನ 55526 ರೂ., 20 ಕ್ಯಾರೆಟ್ ಚಿನ್ನ 10 ಗ್ರಾಂಗೆ 45464 ರೂ. ಆಗಿದೆ. ಕೆಲ ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ನಿರಂತರ ಏರಿಳಿತ ಕಂಡುಬಂದಿದೆ. ಫೆಬ್ರವರಿಯಲ್ಲಿ, ಚಿನ್ನದ ಬೆಲೆ 10 ಗ್ರಾಂಗೆ 55,000 ರೂ. ಆಗಿತ್ತು. ಕೇವಲ ಎರಡೂವರೆ ತಿಂಗಳಲ್ಲಿ 10 ಗ್ರಾಂ ಚಿನ್ನದ ಬೆಲೆ 60000 ರೂ.ವರೆಗೆ ಏರಿಕೆಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ