ಸರ್ಕಾರಿ ನೌಕರರ ಮೂಲ ವೇತನದಲ್ಲಿ ಹೆಚ್ಚಳ ! ಈ ನಿಯಮದ ಪ್ರಕಾರ 27,000 ರೂಪಾಯಿಗೆ ಏರುವುದು ಬೇಸಿಕ್ ಪೇ

DA Hike Latest Update:ಫಿಟ್‌ಮೆಂಟ್ ಅಂಶ ಹೆಚ್ಚಾದಂತೆ ವೇತನ ಕೂಡಾ ಹೆಚ್ಚಾಗುತ್ತಾ ಹೋಗುತ್ತದೆ. ಫಿಟ್‌ಮೆಂಟ್ ಅಂಶ ಮತ್ತು ಮೌಲ್ಯಮಾಪನವಿಲ್ಲದೆಯೇ ಈ ಬಾರಿ  ನೌಕರರ ಮೂಲ ವೇತನದಲ್ಲಿ ಭಾರಿ ಏರಿಕೆಯಾಗಲಿದೆ ಎನ್ನಲಾಗಿದೆ. 

Written by - Ranjitha R K | Last Updated : May 16, 2023, 12:21 PM IST
  • ಮಾರ್ಚ್ 2023 ರಲ್ಲಿ ತುಟ್ಟಿ ಭತ್ಯೆಯ ಹೆಚ್ಚಳ
  • ಡಿಎಯನ್ನು ಶೇ.38ರಿಂದ ಶೇ.42ಕ್ಕೆ ಹೆಚ್ಚಿಸಿದ ಸರ್ಕಾರ
  • ತುಟ್ಟಿಭತ್ಯೆಯನ್ನು ಆರು ತಿಂಗಳಿಗೊಮ್ಮೆ ಹೆಚ್ಚಿಸಲಾಗುತ್ತದೆ.
ಸರ್ಕಾರಿ ನೌಕರರ  ಮೂಲ ವೇತನದಲ್ಲಿ ಹೆಚ್ಚಳ ! ಈ ನಿಯಮದ ಪ್ರಕಾರ 27,000 ರೂಪಾಯಿಗೆ ಏರುವುದು ಬೇಸಿಕ್ ಪೇ  title=

DA Hike Latest Update : ಕೇಂದ್ರ ಉದ್ಯೋಗಿಗಳಿಗೆ ತುಟ್ಟಿ ಭತ್ಯೆಯ ಹೆಚ್ಚಳವನ್ನು ಮಾರ್ಚ್, 2023 ರಲ್ಲಿ ಘೋಷಿಸಲಾಯಿತು. ಆಗ ಸರ್ಕಾರ ಡಿಎಯನ್ನು ಶೇ.38ರಿಂದ ಶೇ.42ಕ್ಕೆ ಹೆಚ್ಚಿಸಿತ್ತು. ಈಗ ಮುಂದಿನ ತುಟ್ಟಿಭತ್ಯೆ ಜುಲೈ 1 ರಿಂದ ಅನ್ವಯವಾಗಲಿದೆ. ಈ ಹೆಚ್ಚಳ ಸೆಪ್ಟೆಂಬರ್ ವೇಳೆಗೆ ಘೋಷಣೆಯಾಗುವ ನಿರೀಕ್ಷೆ ಇದೆ. ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಆರು ತಿಂಗಳಿಗೊಮ್ಮೆ ಹೆಚ್ಚಿಸಲಾಗುತ್ತದೆ. ಹಣದುಬ್ಬರಕ್ಕೆ ಅನುಗುಣವಾಗಿ ಡಿಎ ಹೆಚ್ಚಳದಿಂದಾಗಿ, ವೇತನದಲ್ಲಿಯೂ ಏರಿಕೆ ಕಂಡು ಬರುತ್ತದೆ. ಫಿಟ್‌ಮೆಂಟ್ ಅಂಶ, ಮೌಲ್ಯಮಾಪನದ ಆಧಾರದ ಮೇಲೆ ಉದ್ಯೋಗಿಗಳ ವೇತನ ಹೆಚ್ಚಾಗುತ್ತದೆ. ಫಿಟ್‌ಮೆಂಟ್ ಅಂಶ ಹೆಚ್ಚಾದಂತೆ ವೇತನ ಕೂಡಾ ಹೆಚ್ಚಾಗುತ್ತಾ ಹೋಗುತ್ತದೆ. ಫಿಟ್‌ಮೆಂಟ್ ಅಂಶ ಮತ್ತು ಮೌಲ್ಯಮಾಪನವಿಲ್ಲದೆಯೇ ಈ ಬಾರಿ  ನೌಕರರ ಮೂಲ ವೇತನದಲ್ಲಿ ಭಾರಿ ಏರಿಕೆಯಾಗಲಿದೆ ಎನ್ನಲಾಗಿದೆ. 

ಡಿಎ ಬೇಸಿಕ್‌ನಲ್ಲಿ ವಿಲೀನವಾಗುವುದರಿಂದ ಹೆಚ್ಚಾಗುವುದು ವೇತನ :  
7ನೇ ವೇತನ ಆಯೋಗವನ್ನು ಸರ್ಕಾರ  2016ರಲ್ಲಿ ಜಾರಿಗೊಳಿಸಿತ್ತು. ಆ ಸಮಯದಲ್ಲಿ ತುಟ್ಟಿಭತ್ಯೆಯನ್ನು ಶೂನ್ಯಗೊಳಿಸಲಾಗಿತ್ತು. ಶೂನ್ಯ ಡಿಎ ಕಾರಣ, ನೌಕರರ ಹಿಂದಿನ ತುಟ್ಟಿಭತ್ಯೆಯನ್ನು ಮೂಲ ವೇತನಕ್ಕೆ ಸೇರಿಸಲಾಯಿತು. ಈಗ ಮತ್ತೊಮ್ಮೆ ಇದೇ ಪರಿಸ್ಥಿತಿ ಎದುರಾಗಲಿದೆ. ಇದರೊಂದಿಗೆ ನೌಕರರ ಕನಿಷ್ಠ ಮೂಲ ವೇತನ 18,000 ರೂ.ನಿಂದ 27000 ರೂ.ಗೆ ಏರಿಕೆಯಾಗಲಿದೆ. ತುಟ್ಟಿಭತ್ಯೆಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸುವುದರಿಂದ ಬೇಸಿಕ್ ಪೇ  ಹೆಚ್ಚಾಗುತ್ತದೆ.

ಇದನ್ನೂ ಓದಿ : ಇನ್ನು ಸಿಗುವುದಿಲ್ಲ ಪಿಂಚಣಿ ಮತ್ತು ಗ್ರಾಚ್ಯುಟಿ ! ಮುಖ್ಯ ನಿಯಮವನ್ನೇ ಬದಲಾಯಿಸಿದ ಸರ್ಕಾರ !

ವೇತನ ಪರಿಷ್ಕರಣೆಗಾಗಿ ನಿರೀಕ್ಷೆ : 
ತುಟ್ಟಿಭತ್ಯೆ ಶೇ 50ರಷ್ಟಾಗುವ ಹೊತ್ತಿಗೆ ಅದನ್ನು ಶೂನ್ಯಕ್ಕೆ ಇಳಿಸಲಾಗುವುದು ಎಂದು 2016ರ ಜ್ಞಾಪಕ ಪತ್ರದಲ್ಲಿ ಬರೆಯಲಾಗಿದೆ. ಅಂದರೆ, ಈಗ ಪಡೆಯುತ್ತಿರುವ ತುಟ್ಟಿಭತ್ಯೆ ಶೇ.42ರಷ್ಟಿದೆ. ಶೂನ್ಯದ ನಂತರ ಅದು 1 ಪ್ರತಿಶತ, 2 ಪ್ರತಿಶತದಿಂದ ಪ್ರಾರಂಭವಾಗುತ್ತದೆ. ವಾಸ್ತವವಾಗಿ, 50 ಪ್ರತಿಶತ ತುಟ್ಟಿಭತ್ಯೆ ಆದ ತಕ್ಷಣ ಅದನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ಈ ಹಿನ್ನೆಲಯಲ್ಲಿ ನೋಡಿದರೆ ನೌಕರರು ವೇತನ ಪರಿಷ್ಕರಣೆಗಾಗಿ ಹೆಚ್ಚು ಸಮಯ ಕಾಯಬೇಕಾಗಿಲ್ಲ.

ನೌಕರರ ಸಂಬಳ ಎಷ್ಟು ಹೆಚ್ಚಾಗುತ್ತದೆ? :
ಪ್ರಸ್ತುತ, ಪೇ ಬ್ಯಾಂಡ್ ಲೆವೆಲ್-1 ರಲ್ಲಿ 18000 ರೂ. ಮೂಲ ವೇತನವಿದೆ. ಪ್ರಸ್ತುತ, 7,560 ರೂ.ಗಳ ತುಟ್ಟಿಭತ್ಯೆ ಲಭ್ಯವಿದೆ. ಆದರೆ, 50 ಪ್ರತಿಶತ ತುಟ್ಟಿಭತ್ಯೆಯ ಮೇಲೆ, ಈ ಮೊತ್ತವು 9000 ರೂ. ಗೆ  ಹೆಚ್ಚಾಗುತ್ತದೆ.  ಡಿಎ 50 ಶೇಕಡಾದಷ್ಟಾದಾಗ ಅದನ್ನು ಮೂಲ ವೇತನದೊಂದಿಗೆ ಸೇರಿಸಿ ಶೂನ್ಯಕ್ಕೆ ಇಳಿಸುವುದು ನಿಯಮ. ಅಂದರೆ ಈಗ ಇರುವ ಮೂಲ ವೇತನ 18000 ರೂ.ಯಿಂದ 27000 ರೂಪಾಯಿಗೆ ಏರಿಕೆಯಾಗಲಿದೆ. ಇದರ ನಂತರ, ತುಟ್ಟಿ ಭತ್ಯೆಯನ್ನು 27000 ರೂಪಾಯಿ ಮೂಲ ವೇತನದ ಮೇಲೆ ಲೆಕ್ಕ ಹಾಕಲಾಗುತ್ತದೆ.

ಇದನ್ನೂ ಓದಿ : Edible Oil Price: ಮತ್ತೆ ಇಳಿಕೆಯಾಗಲಿದೆ ಖಾದ್ಯ ತೈಲ ಬೆಲೆ!

ಮೂಲ ವೇತನ ಹೆಚ್ಚಳ ಯಾವಾಗ? :
ಪ್ರಸ್ತುತ ಕೇಂದ್ರ ನೌಕರರು ಶೇ.42 ತುಟ್ಟಿಭತ್ಯೆಯ ಪ್ರಕಾರ ವೇತನ ಪಡೆಯುತ್ತಿದ್ದಾರೆ. ಜುಲೈ 2023 ರ ಪರಿಷ್ಕರಣೆಯ ಆಧಾರದ ಮೇಲೆ, ಇದು ಶೇಕಡಾ 4 ರಷ್ಟು ಹೆಚ್ಚಳವಾಗಿ ಶೇ 46 ರಷ್ಟು ಹೆಚ್ಚಾಗುತ್ತದೆ. ಇದರ ನಂತರ, 2024 ರ ಜನವರಿಯಲ್ಲಿ ಸಹ ತುಟ್ಟಿಭತ್ಯೆ ಶೇಕಡಾ 4 ರಷ್ಟು ಹೆಚ್ಚಾದರೆ, ಆಗ ಡಿಎ ಶೇಕಡಾ 50 ಆಗುತ್ತದೆ. 2024 ರ ಜನವರಿಯಿಂದಲೇ ತುಟ್ಟಿ ಭತ್ಯೆ ಶೂನ್ಯವಾಗುತ್ತದೆ. ಅಂದರೆ, ಜುಲೈ 2024 ರಿಂದ, ನೌಕರರ ಮೂಲ ವೇತನ ಹೆಚ್ಚಾಗಲಿದೆ. ನಂತರ ಮುಂದಿನ ಡಿಎ ಯನ್ನು ಈ ವೇತನದ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News