Instagram Earning by Reels: ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಂ ರೀಲ್ಸ್ ಮನರಂಜನೆಯ ಸಾಧನವಾಗಿದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಮನರಂಜನೆಯ ಸಾಧನದಿಂದಲೇ ಮನೆಯಲ್ಲಿ ಕುಳಿತು ಲಕ್ಷಾಂತರ ರೂಪಾಯಿಗಳನ್ನು ಗಳಿಸಬಹುದು ಎಂದರೆ ನಿಮಗೆ ನಂಬಲು ಸಾಧ್ಯವೇ?


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸಂಶಯಾಸ್ಪದ ವಾಂತಿ ಬೇಧಿ ಪ್ರಕರಣ: ಮೈಲಾಪುರ ಗ್ರಾಮಕ್ಕೆ ಡಿ.ಹೆಚ್.ಓ ಭೇಟಿ


ಹೌದು… ಯಾವುದೇ ಹಣವನ್ನು ಖರ್ಚು ಮಾಡದೆ, ಹೆಚ್ಚು ಶ್ರಮವಿಲ್ಲದೆ ಹಣವನ್ನು ಸಂಪಾದನೆ ಮಾಡಬಹುದು. Instagram ಇತ್ತೀಚಿಗೆ ಬಂದ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್. ಆದರೆ ಇದರ ಪ್ರಸಿದ್ಧಿ ಮಾತ್ರ ಇಡೀ ಜಗತ್ತಿನಲ್ಲಿಯೇ ಪಸರಿಸಿದೆ. ಇನ್ನು ಕೆಲವು ವರ್ಷಗಳಿಂದೀಚೆಗೆ ಹಿಂದೆ ರೀಲ್‌ ಗಳನ್ನು ಪ್ರಾರಂಭಿಸಿತು. ಟಿಕ್ ಟಾಕ್ ಬ್ಯಾನ್ ಆಗುತ್ತಿದ್ದಂತೆ ಇದರ ಪ್ರಸಿದ್ಧಿ ಮತ್ತಷ್ಟು ಹೆಚ್ಚಾಗುತ್ತಾ ಹೋಯಿತು.


ಇನ್ನು ರೀಲ್ಸ್ ಗಳನ್ನು ಜನರು ತುಂಬಾ ಇಷ್ಟಪಡುತ್ತಾರೆ. ಇದೀಗ ಅದೇ ರೀಲ್ಸ್ ನಿಂದ ಜನರು ಹಣವನ್ನು ಗಳಿಸುವ ಮಾರ್ಗವನ್ನು ಸಹ ಕಂಡುಕೊಂಡಿದ್ದಾರೆ. ಇದು ಆಶ್ಚರ್ಯವಾದರೂ ಸತ್ಯ. ಮನೆಯಲ್ಲಿ ಕುಳಿತು ಮಿಲಿಯನೇರ್ ಆಗಬಹುದು. ನಿಮಗೆ ಇದರ ಬಗ್ಗೆ ಯಾವುದೇ ಕಲ್ಪನೆ ಇಲ್ಲದಿದ್ದರೆ, ಇಂದು ನಾವು ಅದರ ಬಗ್ಗೆ ನಿಮಗೆ ವಿವರವಾಗಿ ಹೇಳಲಿದ್ದೇವೆ. ಇದರಿಂದ ನೀವು ಮನೆಯಲ್ಲಿ ಕುಳಿತು ಹೇಗೆ ಉತ್ತಮ ಗಳಿಕೆ ಮಾಡಬಹುದು ಎಂಬುದನ್ನು ಸಹ ತಿಳಿಯಬಹುದು.


ಜನರು Instagram ನಲ್ಲಿ 60 ಸೆಕೆಂಡುಗಳ ರೀಲ್‌ ಗಳನ್ನು ಅಪ್‌ಲೋಡ್ ಮಾಡುತ್ತಾರೆ.. ಈ ರೀಲ್‌ ಗಳಿಗೆ ಉತ್ತಮ ವೀಕ್ಷಣೆಗಳು ಬಂದರೆ, ಹೆಚ್ಚು ಹೆಚ್ಚು ಜನರು ನಿಮ್ಮ ಪ್ರೊಫೈಲ್‌ ನ್ನು ಫಾಲೋ ಮಾಡುತ್ತಾರೆ. ನಿಮ್ಮ ರೀಲ್ ವೈರಲ್ ಆಗಿದ್ದರೆ, ಪ್ರೊಫೈಲ್ ಮತ್ತು ರೀಲ್ಸ್ ಗೆ ಹೆಚ್ಚೆಚ್ಚು ಎಂಗೇಜ್’ಮೆಂಟ್ ಆಗುತ್ತದೆ.


ಇತ್ತೀಚಿನ ದಿನಗಳಲ್ಲಿ ನಿಮಗೆ ವರ್ಚುವಲ್ ಆಂಕರ್ ಮತ್ತು ಗಣಕೀಕೃತ ಧ್ವನಿಯ ಆಯ್ಕೆಯನ್ನು ನೀಡುವ ಅನೇಕ AI ಪರಿಕರಗಳು ಮಾರುಕಟ್ಟೆಯಲ್ಲಿ ಬಂದಿವೆ. ಇದು ಸಂಪೂರ್ಣವಾಗಿ ಉಚಿತವಾಗಿದೆ. ಇನ್ನು ನೀವು ಮಾಡಬೇಕಾಗಿರುವುದು ಇಷ್ಟೇ… ಈ ಪರಿಕರಗಳಲ್ಲಿ ರೀಲ್ಸ್’ಗಳನ್ನು ಅಪ್ಲೋಡ್ ಮಾಡಬೇಕು. ಅದನ್ನು AI ಪರಿಶೀಲಿಸಿ, ಓದುತ್ತದೆ. ಸೇಮ್ ಮನುಷ್ಯರು ಓದಿದಂತೆ ನೈಜವಾಗಿ ಕಾಣುತ್ತದೆ.


ಇದನ್ನೂ ಓದಿ: ಬಿಜೆಪಿ ಸೋತಿದ್ದಕ್ಕೆ ಬೇಜಾರಿಲ್ಲ, ಕಾಂಗ್ರೆಸ್ ಬಂದದ್ದಕ್ಕೆ ಹೆಚ್ಚು ಬೇಸರ: ಮಾಜಿ ಸಿಎಂ ಡಿವಿಎಸ್


ಸಾವಿರಾರು ಬಳಕೆದಾರರು ತಮ್ಮ Instagram ರೀಲ್‌ ಗಳಲ್ಲಿ ಈ ಟಿಪ್ಸ್ ಬಳಕೆ ಮಾಡುವ ಮೂಲಕ ಉತ್ತಮ ಎಂಗೇಜ್‌ ಮೆಂಟ್ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಸಹ ಫಾಲೋವರ್ಸ್ ಹೆಚ್ಚಾಗುತ್ತಿದ್ದಾರೆ. ನಂತರ ಕಂಪನಿಗಳು ರೀಲ್ಸ್ ಗೆ ಲಕ್ಷ ರೂಪಾಯಿಗಳನ್ನು ಪಾವತಿಸುತ್ತಿವೆ. ಅದೂ 2 ರಿಂದ 3 ರೀಲ್‌ಗಳಿಗೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.