DL New Rules : ಹೊಸ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯೋಜಿಸುತ್ತಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ.ಈಗ ಡ್ರೈವಿಂಗ್ ಲೈಸೆನ್ಸ್ (DL) ಪಡೆಯುವುದು ಮೊದಲಿಗಿಂತ ಹೆಚ್ಚು ಸುಲಭವಾಗಲಿದೆ.ಹೊಸ ನಿಯಮದ ಅನುಷ್ಠಾನದ ನಂತರ,ಡಿಎಲ್ ಮಾಡಿಸುವ ದೀರ್ಘ ಮತ್ತು ಸಂಕೀರ್ಣ ಪ್ರಕ್ರಿಯೆಯಿಂದ ಮುಕ್ತಿ ದೊರೆಯಲಿದೆ.ಪ್ರಸ್ತುತ,ಡಿಎಲ್ ಮಾಡಲು, ಕಚೇರಿಗಳಿಗೆ ಭೇಟಿ ನೀಡಿ ಸಾಕಷ್ಟು ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗುತ್ತದೆ.ಈ ಪ್ರಕ್ರಿಯೆಯಲ್ಲಿ ಹಲವಾರು ಬಾರಿ ತಪ್ಪುಗಳಾಗುವುದೂ ಇದೆ. 


COMMERCIAL BREAK
SCROLL TO CONTINUE READING

ಡಿಎಲ್ ಮಾಡಿಸುವ ಪ್ರಕ್ರಿಯೆ ಹೆಚ್ಚು ಸುಲಭವಾಗಲಿದೆ :
ಡಿಎಲ್ ಮಾಡಿಸುವಾಗ ಎದುರಾಗುವ ಸಮಸ್ಯೆಗಳನ್ನು ಹೋಗಲಾಡಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಚಾಲನಾ ಪರವಾನಗಿಗೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ ನಿಯಮಗಳಲ್ಲಿ ಬದಲಾವಣೆಗಳನ್ನು ಪ್ರಕಟಿಸಿದೆ.ಹೊಸ ನಿಯಮಗಳ ಅನುಷ್ಠಾನದ ನಂತರ,ಡ್ರೈವಿಂಗ್ ಲೈಸೆನ್ಸ್ ಪಡೆಯುವ ಪ್ರಕ್ರಿಯೆಯು ಹೆಚ್ಚು ಸುಲಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.ಜೂನ್ 1 ರಿಂದ ಡಿಎಲ್ ನಿಯಮಗಳಲ್ಲಿ ಏನು ಬದಲಾವಣೆ ಮತ್ತು ಇಲಾಖೆಯಿಂದ ಯಾವ ಬದಲಾವಣೆಗಳನ್ನು ಮಾಡಲಾಗಿದೆ ಎನ್ನುವ ಮಾಹಿತಿ ಇಲ್ಲಿದೆ. 


ಇದನ್ನೂ ಓದಿ : ಬಲು ದುಬಾರಿಯಾದ ತರಕಾರಿ : ಹೆಚ್ಚಾಯಿತು ಅಡುಗೆ ಮನೆ ಖರ್ಚು


ಸರ್ಕಾರಿ ಕಚೇರಿಗಳಲ್ಲಿ ಚಾಲನಾ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ : 
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಚಾಲನಾ ಪರವಾನಗಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿದೆ.ಜೂನ್ 1 ರಿಂದ ಜಾರಿಗೆ ಬರಲಿರುವ ನಿಯಮಗಳ ಪ್ರಕಾರ ಇನ್ನು ಮುಂದೆ ಸರ್ಕಾರಿ ಕಚೇರಿಗಳಲ್ಲಿ ಡ್ರೈವಿಂಗ್ ಟೆಸ್ಟ್ ನೀಡಬೇಕಾಗಿಲ್ಲ.ನೀವು ಯಾವುದೇ ಖಾಸಗಿ ಡ್ರೈವಿಂಗ್  ಸ್ಕೂಲ್ ಗೆ ಹೋಗಿ ಡ್ರೈವಿಂಗ್ ಟೆಸ್ಟ್ ನೀಡಬಹುದು.ಈ ಡ್ರೈವಿಂಗ್  ಸ್ಕೂಲ್ ಗಳಿಗೆ ಟೆಸ್ಟ್  ತೆಗೆದುಕೊಳ್ಳಲು ಮತ್ತು ಲೈಸೆನ್ಸ್ ನೀಡುವ ಅಧಿಕಾರ ನೀಡಲಾಗುತ್ತದೆ.


ಕಡಿಮೆ ಪೇಪರ್ ವರ್ಕ್ :  
ಈಗ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೆಚ್ಚು ದಾಖಲೆಗಳ ಅಗತ್ಯವಿಲ್ಲ.ಡ್ರೈವಿಂಗ್ ಕಲಿಯಲು ಬಯಸುವ ವಾಹನದ ದಾಖಲೆ ನಿಮ್ಮ ಬಳಿ ಇದ್ದರೆ ಸಾಕು.ಇದರಿಂದ ಆರ್‌ಟಿಒ ಕಚೇರಿಗೆ ಭೇಟಿ ನೀಡುವ ಅಗತ್ಯ ಕಡಿಮೆಯಾಗುತ್ತದೆ.


ಡ್ರೈವಿಂಗ್ ಸ್ಕೂಲ್ ಗೆ ಅಗತ್ಯ ನಿಯಮಗಳು:
ಡ್ರೈವಿಂಗ್ ಸ್ಕೂಲ್ ಬಳಿ ಕನಿಷ್ಠ 1 ಎಕರೆ ಜಮೀನು ಇರಬೇಕು. ಇದಲ್ಲದೇ ನಾಲ್ಕು ಚಕ್ರದ ವಾಹನಗಳ ತರಬೇತಿಗಾಗಿ 2 ಎಕರೆ ಜಮೀನಿನ ಅವಶ್ಯಕತೆ ಇದೆ. ಡ್ರೈವಿಂಗ್ ಸ್ಕೂಲ್ ನಲ್ಲಿ ಡ್ರೈವಿಂಗ್ ಟೆಸ್ಟ್ ಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಚಾಲನಾ ತರಬೇತಿ ನೀಡುವ ವ್ಯಕ್ತಿ 10ನೇ ತರಗತಿ ಪ್ರಮಾಣಪತ್ರ ಮತ್ತು ಐದು ವರ್ಷಗಳ ಚಾಲನಾ ಅನುಭವವನ್ನು ಹೊಂದಿರಬೇಕು. ಬಯೋಮೆಟ್ರಿಕ್ಸ್ ಮತ್ತು ಚಾಲನೆಯಲ್ಲಿರುವ ಐಟಿ ವ್ಯವಸ್ಥೆಗಳ ಜ್ಞಾನವನ್ನು ಹೊಂದಿರಬೇಕು.


ಇದನ್ನೂ ಓದಿ :HSRP Number Plat: ವಾಹನ ಸವಾರರಿಗೆ ಗುಡ್ ನ್ಯೂಸ್


ಚಾಲನಾ ಸಮಯ:
4 ವಾರಗಳಲ್ಲಿ ಮಿನಿ ವೆಹಿಕಲ್ಸ್ (LMV) ಗಾಗಿ 29 ಗಂಟೆಗಳ ತರಬೇತಿ, ಇದು 8 ಗಂಟೆಗಳ ಥಿಯೇರಿ ಮತ್ತು 21 ಗಂಟೆಗಳ ಪ್ರಾಕ್ಟಿಕಲ್ ಚಾಲನಾ ತರಬೇತಿಯನ್ನು ಒಳಗೊಂಡಿರುತ್ತದೆ. ಆದರೆ ದೊಡ್ಡ ವಾಹನಗಳಿಗೆ (HMV), ಇದು 6 ವಾರಗಳಲ್ಲಿ 38 ಗಂಟೆಗಳ ತರಬೇತಿ ಮತ್ತು 8 ಗಂಟೆಗಳ ಥಿಯೇರಿ ಮತ್ತು 31 ಗಂಟೆಗಳ ಪ್ರಾಕ್ಟಿಕಲ್ ತರಬೇತಿಯನ್ನು ಚಾಲನೆಗೆ ಒಳಗೊಂಡಿದೆ. ಖಾಸಗಿ ಡ್ರೈವಿಂಗ್ ಸ್ಕೂಲ್‌ಗಳಲ್ಲಿ ಡ್ರೈವಿಂಗ್ ಕಲಿಯುವ ಹೊಸ ಚಾಲಕರು ಉತ್ತಮ ತರಬೇತಿಯನ್ನು ಪಡೆದು, ರಸ್ತೆಯಲ್ಲಿ ಸುರಕ್ಷಿತವಾಗಿ ಚಾಲನೆ ಮಾಡಬಹುದು ಎನ್ನುವುದನ್ನು  ಖಚಿತಪಡಿಸಿಕೊಳ್ಳಲು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. 


ಅರ್ಜಿ ಸಲ್ಲಿಸುವುದು ಹೇಗೆ ?:
ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಒಂದೇ ಆಗಿರುತ್ತದೆ. https://parivahan.gov.in/ ಮೂಲಕ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು . ಅರ್ಜಿ ಶುಲ್ಕವು ಪರವಾನಗಿಯ ಪ್ರಕಾರವನ್ನು ಅವಲಂಬಿಸಿ ಬದಲಾಗುತ್ತದೆ. ಪರವಾನಗಿಯನ್ನು ಅನುಮೋದಿಸಲು ದಾಖಲೆಗಳನ್ನು ಸಲ್ಲಿಸಲು ಮತ್ತು ಚಾಲನಾ ಕೌಶಲ್ಯವನ್ನು ಪ್ರದರ್ಶಿಸಲು ಆರ್‌ಟಿಒ ಕಚೇರಿಗೆ ಭೇಟಿ ನೀಡುವುದು ಈಗಲೂ ಅಗತ್ಯವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.