Ration Card: ಪಡಿತರ ಚೀಟಿಯು ಭಾರತ ಸರ್ಕಾರವು ತನ್ನ ನಾಗರಿಕರಿಗೆ ನೀಡುವ ಅತ್ಯಗತ್ಯ ಕಾನೂನು ದಾಖಲೆಯಾಗಿದೆ. ಪಡಿತರ ಚೀಟಿಯು ನಾಗರಿಕನ ಗುರುತು ಮತ್ತು ನಿವಾಸದ ಪುರಾವೆಯನ್ನು ಒದಗಿಸುತ್ತದೆ.  ಪಡಿತರ ಚೀಟಿಯು ಮಾನ್ಯವಾದ ಗುರುತಿನ ಮತ್ತು ನಿವಾಸ ಪ್ರಮಾಣಪತ್ರವಾಗಿದೆ. ಇದನ್ನು ನೀವು ಬ್ಯಾಂಕ್ ಖಾತೆ ತೆರೆಯಲು, ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಮತ್ತು ಇತರ ಸರ್ಕಾರಿ ಸೇವೆಗಳನ್ನು ಪಡೆಯಲು ಬಳಸಬಹುದಾಗಿದೆ. 


COMMERCIAL BREAK
SCROLL TO CONTINUE READING

ರೇಷನ್ ಕಾರ್ಡ್‌ನಲ್ಲಿ ನಮೂದಿಸಿರುವ ಮಾಹಿತಿಯ ಆಧಾರದ ಮೇಲೆ ಪಡಿತರ ವಿತರಣೆ ಮಾಡಲಾಗುತ್ತದೆ. ಪಡಿತರ ಚೀಟಿ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು  ಪಡೆಯಲು ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಾಗಿ ನೀವು ಪಡಿತರ ಚೀಟಿಯಲ್ಲಿ ಕುಟುಂಬದ ಎಲ್ಲ ಸದಸ್ಯರ ಹೆಸರುಗಳನ್ನು ನಮೂದಿಸುವುದು ಅತ್ಯಗತ್ಯ.


ಯಾವುದೇ ಒಂದು ಕುಟುಂಬದಲ್ಲಿ ಹೊಸ ಸದಸ್ಯರ ಆಗಮನವಾದಾಗ ಅವರ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರಿಸುವುದು ತುಂಬಾ ಅಗತ್ಯ. ಮಕ್ಕಳ ಮದುವೆಯ ಬಳಿಕ ಮನೆಗೆ ಬರುವ ಸೊಸೆಯ ಹೆಸರನ್ನು ಮೊದಲು ರೇಷನ್ ಕಾರ್ಡ್‌ನಲ್ಲಿ ಸೇರಿಸಿ. ಅಂತೆಯೇ, ಮನೆಗೆ ಹೊಸ ಮಗುವಿನ ಆಗಮನವಾದಾಗ ಎಂದರೆ, ಮನೆಯಲ್ಲಿ ಮಗು ಜನಿಸಿದಾಗ, ಇಲ್ಲವೇ ನೀವು ಯಾವುದೇ ಮಗುವನ್ನು ದತ್ತು ಪಡೆದಾಗಲೂ ಸಹ ಪಡಿತರ ಚೀಟಿಯಲ್ಲಿ ನಿಮ್ಮ ಮಗುವಿನ ಹೆಸರನ್ನು ಸೇರಿಸುವುದು ತುಂಬಾ ಮುಖ್ಯ. 


ಇದನ್ನೂ ಓದಿ- ಇವರು ಇನ್ನು ಮುಂದೆ UPI ಮೂಲಕ ಹಣ ವರ್ಗಾಯಿಸಲು ಸಾಧ್ಯವಿಲ್ಲ : ನಿಮ್ಮ ಖಾತೆಯನ್ನೊಮ್ಮೆ ಚೆಕ್ ಮಾಡಿಕೊಳ್ಳಿ


ಮದುವೆಯ ನಂತರ ಹೊಸ ಸದಸ್ಯರ ಹೆಸರನ್ನು ಸೇರಿಸಲು ಏನು ಮಾಡಬೇಕು? 
ಮದುವೆಯಾದ ಮೇಲೆ ಸೊಸೆ ಮನೆಗೆ ಬಂದಾಗ ಮೊದಲು ಅವರ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಿ ವಿಲಾಸವನ್ನು ಬದಲಾಯಿಸಬೇಕು. ಇದಕ್ಕಾಗಿ, ಹುಡುಗಿ ತನ್ನ ಆಧಾರ್ ಕಾರ್ಡ್‌ನಲ್ಲಿ ತಂದೆಯ ಹೆಸರಿನ ಬದಲಿಗೆ ತನ್ನ ಗಂಡನ ಹೆಸರನ್ನು ನಮೂದಿಸಬೇಕಾಗುತ್ತದೆ.  


ಆಧಾರ್ ಕಾರ್ಡ್ ಅನ್ನು ನವೀಕರಿಸಿದ ನಂತರ, ಪರಿಷ್ಕೃತ ಆಧಾರ್ ಕಾರ್ಡ್‌ನ ಪ್ರತಿಯೊಂದಿಗೆ, ನೀವು ಹೆಸರು ಸೇರಿಸಲು ಆಹಾರ ಇಲಾಖೆ ಅಧಿಕಾರಿಗೆ ಅರ್ಜಿಯನ್ನು ಕಳುಹಿಸಬೇಕಾಗುತ್ತದೆ.


ಪಡಿತರ ಚೀಟಿಗೆ ಮಗುವಿನ ಹೆಸರನ್ನು ಹೇಗೆ ಸೇರಿಸಬಹುದು?
ಒಂದು ಮಗು ಜನಿಸಿದರೆ ಅಥವಾ ದತ್ತು ಪಡೆದರೆ, ನಂತರ ಅವರ / ಅವಳ ಹೆಸರನ್ನು ಪಡಿತರ ಚೀಟಿಯಲ್ಲಿ ನೋಂದಾಯಿಸಲು, ಮೊದಲಿಗೆ ಅವರ ಆಧಾರ್ ಕಾರ್ಡ್ ಅನ್ನು ಮಾಡಿಸಬೇಕು. 


ಇದನ್ನೂ ಓದಿ- ವರ್ಷದ ಆರಂಭದಲ್ಲಿಯೇ ಇಳಿದ ಗ್ಯಾಸ್ ದರ : ಹೊಸ ದರ ಇಂದಿನಿಂದಲೇ ಜಾರಿ


ಆನ್‌ಲೈನ್‌ನಲ್ಲಿ ರೇಷನ್ ಕಾರ್ಡ್‌ನಲ್ಲಿ ಹೊಸ ಸದಸ್ಯರ ಹೆಸರನ್ನು ಸೇರಿಸುವ ಸುಲಭ ವಿಧಾನ:- 
ಮೊದಲೆಲ್ಲಾ ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಹೆಸರನ್ನು ಸೇರಿಸಲು ಪದೇ ಪದೇ ಸರ್ಕಾರದ ಕಚೇರಿಗಳಿಗೆ ಸುತ್ತಬೇಕಾಗಿತ್ತು. ಆದರೀಗ ಅಗತ್ಯ ದಾಖಲೆಗಳ ನೆರವಿನೊಂದಿಗೆ ನೀವು ಆನ್‌ಲೈನ್‌ ಮೂಲಕ ಸುಲಭವಾಗಿ ನಿಮ್ಮ ರೇಷನ್ ಕಾರ್ಡ್‌ನಲ್ಲಿ ಹೊಸ ಸದಸ್ಯರ ಹೆಸರನ್ನು ಸೇರಿಸಬಹುದು. 


ಈಗ ಪಡಿತರ ಚೀಟಿಯಲ್ಲಿ ಸೊಸೆ, ಮಗುವಿನ ಹೆಸರನ್ನು ಸೇರಿಸಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣ, ಪಂಜಾಬ್, ದೆಹಲಿ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ಛತ್ತೀಸ್‌ಗಢ, ಗೋವಾ, ಗುಜರಾತ್, ಅಸ್ಸಾಂನಲ್ಲಿ ಈ ಸೌಲಭ್ಯ ಲಭ್ಯವಿದೆ. ಮೇಘಾಲಯ, ತ್ರಿಪುರಾ, ಸಿಕ್ಕಿಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಿಜೋರಾಂ ಮತ್ತು ಮಣಿಪುರದಂತಹ ರಾಜ್ಯಗಳಲ್ಲಿ ಈ ಸೇವೆ ಲಭ್ಯವಿದೆ. 


ಪಡಿತರ ಚೀಟಿಗೆ ಆನ್‌ಲೈನ್‌ನಲ್ಲಿ ಹೊಸ ಸದಸ್ಯರ ಹೆಸರನ್ನು ಸೇರಿಸಲು ಹಂತ-ಹಂತದ ಪ್ರಕ್ರಿಯೆ: 
1. ನಿಮ್ಮ ರಾಜ್ಯದ ಆಹಾರ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ.
2. "ಪಡಿತರ ಕಾರ್ಡ್‌ಗೆ ಸದಸ್ಯರನ್ನು ಸೇರಿಸಿ" ಅಥವಾ "ರೇಷನ್ ಕಾರ್ಡ್‌ಗೆ ಹೆಸರನ್ನು ಸೇರಿಸಿ" ನಂತಹ ಲಿಂಕ್‌ಗಾಗಿ ಹುಡುಕಿ.
3. ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಅರ್ಜಿ ನಮೂನೆಯನ್ನು ತೆರೆಯಿರಿ.
4. ನಿಮ್ಮ ಹೆಸರು, ರೇಷನ್ ಕಾರ್ಡ್ ಸಂಖ್ಯೆ, ಮನೆಯ ಹೊಸ ಸದಸ್ಯರ ಹೆಸರು (ಸೊಸೆ/ಮಗು), ಹುಟ್ಟಿದ ದಿನಾಂಕ, ನಿವಾಸ ಪ್ರಮಾಣಪತ್ರ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಸಂಖ್ಯೆಯಂತಹ ಅಗತ್ಯವಿರುವ ಮಾಹಿತಿಯನ್ನು ಫಾರ್ಮ್‌ನಲ್ಲಿ ಭರ್ತಿ ಮಾಡಿ.
5. ನಿಮ್ಮ ಅರ್ಜಿಯೊಂದಿಗೆ ಅಗತ್ಯವಿರುವ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
6.ಅರ್ಜಿ ಶುಲ್ಕವನ್ನು ಪಾವತಿಸಿ.
7.ಅರ್ಜಿಯನ್ನು ಸಲ್ಲಿಸಿ.


ಅರ್ಜಿಯನ್ನು ಸಲ್ಲಿಸಿದ ನಂತರ, ನೀವು ಅಪ್ಲಿಕೇಶನ್ ಸಂಖ್ಯೆಯನ್ನು ಸ್ವೀಕರಿಸುತ್ತೀರಿ. ನಿಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಲು ನೀವು ಈ ಅಪ್ಲಿಕೇಶನ್ ಸಂಖ್ಯೆಯನ್ನು ಬಳಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.