ಜನವರಿ 1 ರಿಂದ ವರ್ಷವಷ್ಟೇ ಅಲ್ಲ ನಿಮ್ಮ ಜೀವನಕ್ಕೆ ಸಂಬಂಧಿಸಿದ ಈ ಮಹತ್ವದ ಸಂಗತಿಗಳು ಕೂಡ ಬದಲಾಗಲಿವೆ!

January 2024 Changes: ನಿಮ್ಮ ದೈನಂದಿನ ಜೀವನದ ಜೊತೆಗೆ ಸಂಬಂಧ ಹೊಂದಿರುವ ಹಲವು ನಿಯಮಗಳು ಜನವರಿ 1, 2024 ರಿಂದ ಬದಲಾಗುತ್ತಿವೆ. ಆಧಾರ್ ಕಾರ್ಡ್‌ನಿಂದ ಆದಾಯ ತೆರಿಗೆ, ಸಿಮ್ ಕಾರ್ಡ್‌ನಿಂದ ಯುಪಿಐ ಪಿನ್‌ವರೆಗೆ ಹಲವು ನಿಯಮಗಳು ನಾಳೆಯಿಂದ ಬದಲಾಗುತ್ತಿವೆ (Business News In Kannada).  

Written by - Nitin Tabib | Last Updated : Dec 31, 2023, 04:32 PM IST
  • ಕೆಲವು ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರುತ್ತವೆ ಮತ್ತು ಕೆಲವು ನಿಮಗೆ ಪರಿಹಾರವನ್ನು ನೀಡುತ್ತವೆ.
  • ಗ್ಯಾಸ್ ಸಿಲಿಂಡರ್‌ನಿಂದ ಸಿಮ್ ಕಾರ್ಡ್‌ವರೆಗೆ, ಜನವರಿ 1, 2024 ರಿಂದ ನಿಮ್ಮ ಸುತ್ತಲಿನ ಹಲವು ನಿಯಮಗಳು ಬದಲಾಗುತ್ತವೆ.
  • ವರ್ಷದ ಆರಂಭದ ಮೊದಲು ನೀವು ಈ ನಿಯಮಗಳ ಬಗ್ಗೆ ಒಮ್ಮೆ ತಿಳಿದುಕೊಳ್ಳಬೇಕು
ಜನವರಿ 1 ರಿಂದ ವರ್ಷವಷ್ಟೇ ಅಲ್ಲ ನಿಮ್ಮ ಜೀವನಕ್ಕೆ ಸಂಬಂಧಿಸಿದ ಈ ಮಹತ್ವದ ಸಂಗತಿಗಳು ಕೂಡ ಬದಲಾಗಲಿವೆ! title=

ನವದೆಹಲಿ: ವರ್ಷ 2023 ರ ಮುಕ್ತಾಯಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ರಾತ್ರಿ 12 ಗಂಟೆಗೆ ಹೊಸ ವರ್ಷದ ಆಚರಣೆಯೊಂದಿಗೆ 2024 ವರ್ಷವು ಪ್ರಾರಂಭವಾಗುತ್ತದೆ. ಆದರೆ ನಾಳೆಯಿಂದ ವರ್ಷ ಮಾತ್ರ ಬದಲಾಗುವುದಿಲ್ಲ, ನಿಮ್ಮ ಸುತ್ತಲೂ ಇರುವ ಅನೇಕ ನಿಯಮಗಳು ಬದಲಾಗುತ್ತವೆ. ಈ ನಿಯಮಗಳು ನಿಮ್ಮ ಜೀವನದ ಜೊತೆಗೆ ನೇರ ಸಂಬಂಧವನ್ನು ಹೊಂದಿವೆ. ಕೆಲವು ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರುತ್ತವೆ ಮತ್ತು ಕೆಲವು ನಿಮಗೆ ಪರಿಹಾರವನ್ನು ನೀಡುತ್ತವೆ. ಗ್ಯಾಸ್ ಸಿಲಿಂಡರ್‌ನಿಂದ ಸಿಮ್ ಕಾರ್ಡ್‌ವರೆಗೆ, ಜನವರಿ 1, 2024 ರಿಂದ ನಿಮ್ಮ ಸುತ್ತಲಿನ ಹಲವು ನಿಯಮಗಳು ಬದಲಾಗುತ್ತವೆ. ವರ್ಷದ ಆರಂಭದ ಮೊದಲು ನೀವು ಈ ನಿಯಮಗಳ ಬಗ್ಗೆ ಒಮ್ಮೆ ತಿಳಿದುಕೊಳ್ಳಬೇಕು (Business News In Kannada).

ಗ್ಯಾಸ್ ಸಿಲಿಂಡರ್‌ಗಳ ವಿವಿಧ ಬೆಲೆಗಳನ್ನು ಜನವರಿ 1 ರಂದು ಪ್ರಕಟಿಸಲಾಗುವುದು. ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಗ್ಯಾಸ್ ಸಿಲಿಂಡರ್‌ನ ಹೊಸ ಬೆಲೆಯನ್ನು ಬಿಡುಗಡೆ ಮಾಡುತ್ತವೆ. ಈಗ ವರ್ಷದ ಮೊದಲ ದಿನವೇ ನಿಮಗೆ ರಿಲೀಫ್ ಸಿಗುತ್ತೋ ಅಥವಾ ಶಾಕ್ ಆಗುತ್ತೋ ಅನ್ನೋದು ನಾಳೆಯಷ್ಟೇ ಗೊತ್ತಾಗಲಿದೆ. ಚುನಾವಣಾ ಭರವಸೆಯಂತೆ ರಾಜಸ್ಥಾನ ಸರ್ಕಾರ ಉಜ್ವಲ ಫಲಾನುಭವಿಗಳಿಗೆ 450 ರೂ.ಗೆ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಘೋಷಿಸಿದೆ. ಇದು ಜನವರಿ 1 ರಿಂದ ಜಾರಿಗೆ ಬರಲಿದೆ.

ಸಣ್ಣ ಉಳಿತಾಯ ಯೋಜನೆಯಲ್ಲಿ ಬದಲಾವಣೆ
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಮೋದಿ ಸರ್ಕಾರವು ಸಣ್ಣ ಉಳಿತಾಯ ಯೋಜನೆಯ ಬಡ್ಡಿದರಗಳನ್ನು ಬದಲಾಯಿಸಿದೆ. ನಾಲ್ಕನೇ ತ್ರೈಮಾಸಿಕಕ್ಕೆ ಅಂದರೆ ಜನವರಿಯಿಂದ ಮಾರ್ಚ್ 2024 ರವರೆಗೆ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರವನ್ನು ಸರ್ಕಾರವು 0.20% ರಷ್ಟು 8 ರಿಂದ 8.02 ಕ್ಕೆ ಹೆಚ್ಚಿಸಿದೆ. ಅದೇ ರೀತಿ, ಮೂರು ವರ್ಷಗಳ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇಕಡಾ 0.10 ರಿಂದ ಶೇಕಡಾ 7 ರಿಂದ ಶೇಕಡಾ 7.10 ಕ್ಕೆ ಹೆಚ್ಚಿಸಲಾಗಿದೆ.

ಕಾರು ಖರೀದಿ ದುಬಾರಿಯಾಗಲಿದೆ
ಹೊಸ ವರ್ಷದಲ್ಲಿ ಹೊಸ ಕಾರು ಖರೀದಿಸುವುದು ನಿಮಗೆ ದುಬಾರಿಯಾಗಲಿದೆ. ಮಾರುತಿ ಸುಜುಕಿ, ಹ್ಯುಂಡೈ, ಮರ್ಸಿಡಿಸ್‌ನಂತಹ ಆಟೋಮೊಬೈಲ್ ಕಂಪನಿಗಳು ಜನವರಿ 1 ರಿಂದ ವಾಹನಗಳ ಬೆಲೆಯನ್ನು ಹೆಚ್ಚಿಸಿವೆ. ಜನವರಿ 1, 2024 ರಿಂದ ಭಾರತದಲ್ಲಿ ತನ್ನ ವಾಹನಗಳ ಬೆಲೆಗಳನ್ನು ಶೇಕಡಾ 2 ರಷ್ಟು ಹೆಚ್ಚಿಸುವುದಾಗಿ ಆಡಿ ಘೋಷಿಸಿದೆ.

Google Pay, Phone Pay, Paytm ನಿಷ್ಕ್ರಿಯವಾಗಲಿವೆ
ನೀವು ದೀರ್ಘಕಾಲದವರೆಗೆ UPI ಅನ್ನು ಬಳಸದಿದ್ದರೆ, ನಿಮ್ಮ ಖಾತೆಯು ನಿಷ್ಕ್ರಿಯವಾಗಲಿದೆ. ಒಂದು ವರ್ಷದಿಂದ ನಿಷ್ಕ್ರಿಯವಾಗಿರುವ GooglePay, PhonePe, Paytm ನಂತಹ ಪಾವತಿ ಅಪ್ಲಿಕೇಶನ್‌ಗಳನ್ನು ಜನವರಿ 1 ರಿಂದ ನಿಷ್ಕ್ರಿಯಗೊಳಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ತಿಳಿಸಿದೆ. ಕಳೆದ ಒಂದು ವರ್ಷದಿಂದ ನಿಮ್ಮ UPI ಐಡಿಯನ್ನು ನೀವು ಬಳಸದೇ ಇದ್ದರೆ, ಯಾವುದೇ ವಿಳಂಬವಿಲ್ಲದೆ ಕನಿಷ್ಠ ಒಂದು ವಹಿವಾಟನ್ನಾದರೂ ಮಾಡಿ.

ಲಾಕರ್ ಒಪ್ಪಂದ
ಪರಿಷ್ಕೃತ ಬ್ಯಾಂಕ್ ಲಾಕರ್ ಒಪ್ಪಂದವನ್ನು ಸಲ್ಲಿಸಲು RBI ಗಡುವನ್ನು 31 ಡಿಸೆಂಬರ್ 2023 ಎಂದು ನಿಗದಿಪಡಿಸಿದೆ. ನೀವು ಡಿಸೆಂಬರ್ 31 ರೊಳಗೆ ಬ್ಯಾಂಕ್ ಲಾಕರ್ ಒಪ್ಪಂದವನ್ನು ಸಲ್ಲಿಸದಿದ್ದರೆ, ಜನವರಿ 1 ರಿಂದ ಲಾಕರ್ ಅನ್ನು ಫ್ರೀಜ್ ಮಾಡಬಹುದು.

ಡಿಮ್ಯಾಟ್  ಖಾತೆ ನಿಯಮ ಬದಲಾವಣೆ
ನೀವು ಷೇರುಗಳಲ್ಲಿ ಹೂಡಿಕೆ ಮಾಡುತ್ತಿದ್ದರೆ  ನೀವು ಡಿಮ್ಯಾಟ್ ಖಾತೆಯನ್ನು ಹೊಂದಿರಬೇಕು. ಹೊಸ ವರ್ಷದಲ್ಲಿ ಡಿಮ್ಯಾಟ್ ಖಾತೆಗೆ ಸಂಬಂಧಿಸಿದ ನಿಯಮಗಳು ಬದಲಾಗುತ್ತವೆ. ಡಿಮ್ಯಾಟ್ ಖಾತೆಗೆ SEBI ನಾಮಿನಿಯನ್ನು ಕಡ್ಡಾಯಗೊಳಿಸಿದೆ. ನೀವು ಡಿಮ್ಯಾಟ್ ಖಾತೆಯನ್ನು ಹೊಂದಿದ್ದರೆ, ನಾಮಿನಿ ಹೆಸರನ್ನು  ತಕ್ಷಣವೇ ಅದಕ್ಕೆ ಸೇರಿಸಿ. ನೀವು ಇದನ್ನು ಮಾಡದಿದ್ದರೆ, ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

ಸಿಮ್ ಕಾರ್ಡ್ ನಿಯಮ
ಜನವರಿ 1 ರಿಂದ ಸಿಮ್ ಕಾರ್ಡ್‌ಗಳಿಗೆ ಸಂಬಂಧಿಸಿದ ನಿಯಮಗಳು ಬದಲಾಗುತ್ತವೆ. ಹೊಸ ನಿಯಮದ ಪ್ರಕಾರ, ಜನವರಿ 1 ರಿಂದ ಸಿಮ್ ಕಾರ್ಡ್‌ಗಳನ್ನು ಖರೀದಿಸಲು ಡಿಜಿಟಲ್ ಕೆವೈಸಿ ಮಾತ್ರ ಇರುತ್ತದೆ. ಪ್ರಸ್ತುತ, ಸಿಮ್ ಕಾರ್ಡ್ ಖರೀದಿಸಲು ಆಫ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡಲಾಗುತ್ತದೆ, ಅದನ್ನು ಹೊಸ ವರ್ಷದಲ್ಲಿ ರದ್ದುಗೊಳಿಸಲಾಗುತ್ತದೆ.

ಇದನ್ನೂ ಓದಿ-ಗೂಗಲ್ ಪೇನಿಂದ ಹಿಡಿದು ಪೇಟಿಎಂವರೆಗಿನ ಈ ಬಳಕೆದಾರರ ಖಾತೆಗಳು ಜನವರಿ 1 ರಿಂದ ಸ್ಥಗಿತ! ಕಾರಣ ಇಲ್ಲಿದೆ

ಆಧಾರ್ ನವೀಕರಣಕ್ಕೆ ಶುಲ್ಕ
ಆಧಾರ್ ಅನ್ನು ಆನ್‌ಲೈನ್‌ನಲ್ಲಿ ನವೀಕರಿಸಲು ಉಚಿತ ಸೌಲಭ್ಯವನ್ನು ಡಿಸೆಂಬರ್ 31 ರವರೆಗೆ ಒದಗಿಸಲಾಗಿದೆ. ಜನವರಿ 1, 2024 ರಿಂದ ಆಧಾರ್ ಅನ್ನು ನವೀಕರಿಸಲು, ನೀವು ರೂ 50 ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ-ವರ್ಷ 2023ರ ಈ ಬದಲಾವಣೆಗಳು 2024ರಲ್ಲಿ ನಿಮ್ಮ ಜೀವನದ ಮೇಲೆ ಭಾರಿ ಪ್ರಭಾವ ಬೀರಲಿವೆ!

ಆದಾಯ ತೆರಿಗೆಗೆ ಸಂಬಂಧಿಸಿದ ನಿಯಮಗಳು
2022-23ನೇ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 31 ಕ್ಕೆ ಕೊನೆಗೊಳ್ಳುತ್ತದೆ. ನೀವು ಡಿಸೆಂಬರ್ 31 ರ ಗಡುವನ್ನು ತಪ್ಪಿಸಿಕೊಂಡರೆ, ನಿಮ್ಮ ತೊಂದರೆಗಳು ಹೆಚ್ಚಾಗಬಹುದು. ತಡವಾದ ಮತ್ತು ಪರಿಷ್ಕೃತ ITR ಅನ್ನು ಸಲ್ಲಿಸಲು ಕೊನೆಯ ದಿನಾಂಕ 31 ಡಿಸೆಂಬರ್ 2023 ಆಗಿದೆ. ನೀವು ಈ ಅವಕಾಶವನ್ನು ಕಳೆದುಕೊಂಡರೆ ಮತ್ತು ಐಟಿಆರ್ ಅನ್ನು ತಡವಾಗಿ ಸಲ್ಲಿಸಿದರೆ, ನಿಮಗೆ ರೂ 5,000 ದಂಡ ಬೀಳುವ ಸಾಧ್ಯತೆ ಇದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News