Edible Oil ಹಾಗೂ ಚಿನ್ನ-ಬೆಳ್ಳಿ ಬೆಲೆಯಲ್ಲಿ ಶೀಘ್ರ ಇಳಿಕೆ, ಬೇಸ್ ಇಂಪೋರ್ಟ್ ಪ್ರೈಸ್ ಕಡಿತಗೊಳಿಸಿದ ಸರ್ಕಾರ
Edible Oil Base Price Cut: ಸರ್ಕಾರವು ಕಚ್ಚಾ ತಾಳೆ ಎಣ್ಣೆಯ ಮೂಲ ಬೆಲೆಯನ್ನು ಪ್ರತಿ ಟನ್‌ಗೆ $ 996 ರಿಂದ $ 937 ಕ್ಕೆ ಇಳಿಕೆ ಮಾಡಿದೆ . ಇದಲ್ಲದೆ, ಚಿನ್ನ ಮತ್ತು ಬೆಳ್ಳಿಯ ಮೂಲ ಆಮದು ಸುಂಕವನ್ನು ಸಹ ಕಡಿತಗೊಳಿಸಲಾಗಿದೆ, ಹೀಗಾಗಿ ಇನ್ಮುಂದೆ ಈ ಮೂರು ಸರಕುಗಳ ಬೆಲೆ ಕಡಿಮೆಯಾಗಲಿದೆ ಎಂಬುದರ ಸಂಕೇತ ಇದಾಗಿದೆ.
Edible Oil Price Cut: ಮುಂಬರುವ ದಿನಗಳಲ್ಲಿ ಖಾದ್ಯ ತೈಲ ಮತ್ತು ಚಿನ್ನದ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ. ಏಕೆಂದರೆ ಈ ಅರ್ಧ ಮಾಸಿಕದಲ್ಲಿ ಖಾದ್ಯ ತೈಲಗಳು, ಚಿನ್ನ ಮತ್ತು ಬೆಳ್ಳಿಯ ಮೂಲ ಆಮದು ಬೆಲೆಗಳ ಬೆಲೆಯನ್ನು ಸರ್ಕಾರ ಕಡಿತಗೊಳಿಸಿದೆ. ಕಳೆದ ಹದಿನೈದು ದಿನಗಳ ಹಿಂದೆ ಜಾಗತಿಕ ಮಾರುಕಟ್ಟೆಯ ಬೆಲೆಯಲ್ಲಿ ಸುಧಾರಣೆಯಾಗಿದೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಆಂಗ್ಲ ಮಾಧ್ಯಮದ ವಾಣಿಜ್ಯ ದಿನಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ , ಭಾರತ ಸರ್ಕಾರ ಶುಕ್ರವಾರ ತಡರಾತ್ರಿ ಈ ಕುರಿತು ಹೇಳಿಕೆಯನ್ನು ನೀಡಿದೆ. ಈ ವರದಿಯ ಪ್ರಕಾರ, ಸರ್ಕಾರವು ಕಚ್ಚಾ ತಾಳೆ ಎಣ್ಣೆಯ ಮೂಲ ಬೆಲೆಯನ್ನು ಪ್ರತಿ ಟನ್‌ಗೆ $ 996 ರಿಂದ $ 937 ಕ್ಕೆ ಇಳಿಸಿದೆ. ಹೀಗಾಗಿ ತಾಳೆ ಎಣ್ಣೆಯ ಮೂಲ ಬೆಲೆ ಇಳಿಕೆಯಿಂದ ನಂತರ ಖಾದ್ಯ ತೈಲಗಳ ಬೆಲೆ ಕಡಿಮೆಯಾಗಬಹುದು ಎಂದು ಊಹಿಸಲಾಗುತ್ತಿದೆ. ಇದರ ಆಧಾರದ ಮೇಲೆ ಆಮದುದಾರರು ಎಷ್ಟು ತೆರಿಗೆ ಪಾವತಿಸಬೇಕು ಎಂಬುದು ಲೆಕ್ಕ ಹಾಕಲಾಗುತ್ತದೆ.
ಇದನ್ನೂ ಓದಿ-ಇನ್ನು ಮುಂದೆ ಈ ನಂಬರ್ ಇಲ್ಲ ಎಂದಾದರೆ ಎಟಿಎಂ ನಿಂದ ಹಣ ತೆಗೆಯುವುದು ಸಾಧ್ಯವೇ ಇಲ್ಲ .!
ಯಾವುದರ ಮೂಲ ಆಮದು ಬೆಲೆಯನ್ನು ಎಷ್ಟು ಕಡಿತಗೊಳಿಸಲಾಗಿದೆ
ಇದಲ್ಲದೆ, RBD ಪಾಮ್ ಎಣ್ಣೆಯ ಮೂಲ ಬೆಲೆ ಪ್ರತಿ ಟನ್‌ಗೆ $ 1,019 ರಿಂದ $ 982 ಕ್ಕೆ ಇಳಿದಿದೆ, RBD ಪಾಮೊಲಿನ್ ಮೂಲ ಬೆಲೆ ಪ್ರತಿ ಟನ್‌ಗೆ $ 1,035 ರಿಂದ $ 998 ಕ್ಕೆ ಇಳಿದಿದೆ, ಕಚ್ಚಾ ಸೋಯಾಬೀನ್ ತೈಲದ ಮೂಲ ಬೆಲೆ ಟನ್‌ಗೆ $ 1,362 ರಿಂದ $ 1,257 ಕ್ಕೆ ಇಳಿದಿದೆ, ಚಿನ್ನದ ಮೂಲ ಬೆಲೆ ಪ್ರತಿ 10 ಗ್ರಾಂಗೆ $549 ರಿಂದ $553ಕ್ಕೆ ಮತ್ತು ಬೆಳ್ಳಿಯ ಮೂಲ ಬೆಲೆಯನ್ನು ಪ್ರತಿ ಕೆಜಿಗೆ $ 635 ರಿಂದ $ 608 ಕ್ಕೆ ಇಳಿಸಲಾಗಿದೆ.
ಇದನ್ನೂ ಓದಿ-ಎಟಿಎಂನಿಂದ ಹರಿದ ನೋಟುಗಳು ಬಂದರೆ ಚಿಂತೆ ಬೇಡ, ಕ್ಷಣ ಮಾತ್ರದಲ್ಲಿ ಬದಲಿಸುವುದು ಸಾಧ್ಯ
ಭಾರತವು ವಿಶ್ವದಲ್ಲೇ ಖಾದ್ಯ ತೈಲಗಳು ಮತ್ತು ಬೆಳ್ಳಿಯ ಅತಿ ದೊಡ್ಡ ಗ್ರಾಹಕ ಮತ್ತು ಚಿನ್ನದ ಎರಡನೇ ಅತಿದೊಡ್ಡ ಗ್ರಾಹಕ ದೇಶವಾಗಿದೆ. ಮೂಲ ಆಮದು ಬೆಲೆಯಲ್ಲಿನ ಕಡಿತವು ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡುತ್ತದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಖಾದ್ಯ ತೈಲದ ಜೊತೆಗೆ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.