ಎಟಿಎಂನಿಂದ ಹರಿದ ನೋಟುಗಳು ಬಂದರೆ ಚಿಂತೆ ಬೇಡ, ಕ್ಷಣ ಮಾತ್ರದಲ್ಲಿ ಬದಲಿಸುವುದು ಸಾಧ್ಯ

ಎಟಿಎಂನಿಂದ ಹರಿದ ನೋಟುಗಳು ಬಂದರೆ,  ಯಾವ ಬ್ಯಾಂಕ್  ಎಟಿಎಂನಿಂದ ಹರಿದ ನೋಟ್ ಬಂದಿದೆಯೋ, ಅದೇ  ಬ್ಯಾಂಕ್‌ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. 

Written by - Ranjitha R K | Last Updated : Oct 3, 2022, 02:52 PM IST
  • ಹರಿದ ನೋಟುಗಳನ್ನು ಬದಲಾಯಿಸುವುದು ಹೇಗೆ?
  • ಟ್ವೀಟ್ ಮೂಲಕ ಬ್ಯಾಂಕ್ ನೀಡಿದೆ ಮಾಹಿತಿ
  • ಬ್ಯಾಂಕ್ ಗೆ ದೂರು ಸಲ್ಲಿಸುವುದು ಹೇಗೆ
ಎಟಿಎಂನಿಂದ  ಹರಿದ ನೋಟುಗಳು ಬಂದರೆ ಚಿಂತೆ  ಬೇಡ,  ಕ್ಷಣ ಮಾತ್ರದಲ್ಲಿ ಬದಲಿಸುವುದು ಸಾಧ್ಯ  title=
how to replace tored notes (file photo)

ಬೆಂಗಳೂರು : ಹಲವು ಬಾರಿ ಎಟಿಎಂನಿಂದ ಹಣ ತೆಗೆಯುವಾಗ ಹರಿದ ನೋಟುಗಳು ಹೊರಬರುವ ಸಮಸ್ಯೆ ಉಂಟಾಗುತ್ತಿದೆ. ಈ ಹರಿದ ನೋಟುಗಳನ್ನು  ಉಪಯೋಗಿಸುವುದು ಸಾಧ್ಯವಾಗುವುದಿಲ್ಲ. ಆದರೆ ಈಗ ಈ ಸಮಸ್ಯೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಎಟಿಎಂನಿಂದ ಹರಿದ ನೋಟುಗಳು ಹೊರ ಬಂದರೆ ಆ ನೋಟುಗಳನ್ನು ಬಹಳ ಸುಲಭವಾಗಿ ಬದಲಾಯಿಸಬಹುದು. 

ಹರಿದ ನೋಟುಗಳನ್ನು ಬದಲಾಯಿಸುವುದು ಹೇಗೆ? :
ಎಟಿಎಂನಿಂದ ಹರಿದ ನೋಟುಗಳು ಬಂದರೆ,  ಯಾವ ಬ್ಯಾಂಕ್  ಎಟಿಎಂನಿಂದ ಹರಿದ ನೋಟ್ ಬಂದಿದೆಯೋ, ಅದೇ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಅಪ್ಲಿಕೇಶನ್‌ನಲ್ಲಿ, ಎಟಿಎಂನಿಂದ ಹಣ ತೆಗೆದ ದಿನಾಂಕ, ಸಮಯ ಮತ್ತು ಸ್ಥಳವನ್ನು ಬರೆಯಬೇಕಾಗುತ್ತದೆ.  ಅಲ್ಲದೆ, ಟ್ರಾನ್ಸಾಕ್ಶನ್ ಸ್ಲಿಪ್ ಅನ್ನು ಸಹ ಲಗತ್ತಿಸಬೇಕು. ಒಂದು ವೇಳೆ ನಿಮ್ಮ ಬಳಿ ಸ್ಲಿಪ್ ಇಲ್ಲದಿದ್ದರೆ, ನಿಮ್ಮ ಮೊಬೈಲ್‌ಗೆ ಬಂದ ಸಂದೇಶದ ವಿವರಗಳನ್ನು ನೀಡಬೇಕಾಗುತ್ತದೆ. RBI ಮಾರ್ಗಸೂಚಿಗಳ ಪ್ರಕಾರ, ಸರ್ಕಾರಿ ಬ್ಯಾಂಕ್ ನೋಟುಗಳನ್ನು ಬದಲಾಯಿಸಲು ನಿರಾಕರಿಸುವಂತಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈಗ ಸುಲಭವಾಗಿ ಹರಿದ ನೋಟುಗಳನ್ನು ಬದಲಾಯಿಸಬಹುದು. ಈ ಪ್ರಕ್ರಿಯೆಯು ಹೆಚ್ಚು ಸಮಯವನ್ನು ಕೂಡಾ  ತೆಗೆದುಕೊಳ್ಳುವುದಿಲ್ಲ.

ಇದನ್ನೂ ಓದಿ : Driving License : ವಾಹನ ಸವಾರರಿಗೆ ಸಿಹಿ ಸುದ್ದಿ : ಇನ್ನು 7 ದಿನದಲ್ಲಿ ಮನೆಗೆ ಬರಲಿದೆ 'DL'

ಟ್ವೀಟ್ ಮೂಲಕ ಬ್ಯಾಂಕ್ ನೀಡಿದೆ ಮಾಹಿತಿ :
ಟ್ವಿಟರ್‌ನಲ್ಲಿ ಗ್ರಾಹಕರ ದೂರಿನ ಕುರಿತು ಮಾಹಿತಿ ನೀಡಿದ ಬ್ಯಾಂಕ್,  ಎಟಿಎಂ  ನಿಂದ ಹರಿದ ನೋಟ್ ಬಂದರೆ  ಗ್ರಾಹಕರು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದೆ. ಎಸ್‌ಬಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಮಾಹಿತಿಯನ್ನು ನೀಡಿದೆ. 

 ದೂರು ಸಲ್ಲಿಸುವುದು ಹೇಗೆ ? :
ಅಂಡರ್ ಜನರಲ್ ಬ್ಯಾಂಕಿಂಗ್ //  ಕ್ಯಾಶ್ ರಿಲೇಟೆಡ್ ಕ್ಯಾಟಗಿರಿ ಅಡಿಯಲ್ಲಿ https://crcf.sbi.co.in/ccf/ ನಲ್ಲಿ ಇದರ ಬಗ್ಗೆ ದೂರು ನೀಡಬಹುದು ಎಂದು ಬ್ಯಾಂಕ್ ತಿಳಿಸಿದೆ . ಈ ಲಿಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗೆ ಸಂಬಂಧಿಸಿದ್ದಾಗಿದೆ. ವರದಿಗಳ ಪ್ರಕಾರ, ಎಟಿಎಂಗಳಿಂದ ಬಂದ ಹರಿದ ನೋಟುಗಳನ್ನು ಬದಲಾಯಿಸಲು ಯಾವುದೇ ಬ್ಯಾಂಕ್ ನಿರಾಕರಿಸುವಂತಿಲ್ಲ. ಅಲ್ಲದೆ, ಇದರ ಹೊರತಾಗಿಯೂ, ಬ್ಯಾಂಕ್‌ಗಳು ನಿಯಮಗಳನ್ನು ಉಲ್ಲಂಘಿಸಿದರೆ, ಬ್ಯಾಂಕ್ ಉದ್ಯೋಗಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದು. ಗ್ರಾಹಕರ ದೂರಿನ ಆಧಾರದ ಮೇಲೆ, ಬ್ಯಾಂಕ್ 10 ಸಾವಿರದವರೆಗೆ ದಂಡವನ್ನು ವಿಧಿಸಬಹುದು. 

ಇದನ್ನೂ ಓದಿ : PM Kisan 12th Installment : ದಸರಾ ಹಬ್ಬದಂದು ರೈತರಿಗೆ ಸಿಹಿ ಸುದ್ದಿ : ಶೀಘ್ರದಲ್ಲೇ ನಿಮ್ಮ ಖಾತೆಗೆ ₹2000 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News