ನವದೆಹಲಿ : ಗುರುವಾರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದೊಂದಿಗೆ ನಡೆದ ಸಭೆಯ ನಂತರ, ಖಾದ್ಯ ತೈಲ ಸಂಸ್ಕಕರಣ ಮತ್ತು ತಯಾರಕರು ಖಾದ್ಯ ತೈಲ ಬೆಲೆಯಲ್ಲಿ ₹12 ರಷ್ಟು ಬೆಲೆಗಳನ್ನು ಕಡಿತಗೊಳಿಸಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

"ಅಡುಗೆ ಎಣ್ಣೆ ತಯಾರಕರು ಜಾಗತಿಕ ಬೆಲೆಗಳನ್ನು ಕಡಿಮೆಗೊಳಿಸುವ ದೃಷ್ಟಿಯಿಂದ ಖಾದ್ಯ ತೈಲ ಬೆಲೆಗಳನ್ನು ₹12 ರಷ್ಟು ಕಡಿತಗೊಳಿಸಲು ಒಪ್ಪಿಕೊಂಡಿದ್ದಾರೆ. ಸಭೆಯಲ್ಲಿ ನಾವು ಡೇಟಾದೊಂದಿಗೆ ವಿವರವಾದ ಮಾಹಿತಿ ಪಡೆದು ಈ ತೀರ್ಮಾನ ಕೈಗೊಳ್ಳಲಾಗಿದೆ  ಹೆಸರು ಹೇಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇದನ್ನೂ ಓದಿ : Arecanut Price: ರಾಜ್ಯದಲ್ಲಿ ಇಂದಿನ ಅಡಿಕೆ ಧಾರಣೆ ಹೀಗಿದೆ ನೋಡಿ


ತಯಾರಕರು ಬೆಲೆಗಳನ್ನು ಕಡಿತಗೊಳಿಸಿ, ಜಾಗತಿಕ ಬೆಲೆಗಳಲ್ಲಿನ ಇಳಿಕೆಯ ತಿದ್ದುಪಡಿಯಿಂದಾಗಿ ದರಗಳನ್ನು ಕಡಿಮೆ ಮಾಡಲು ಮತ್ತಷ್ಟು ಅವಕಾಶವಿದೆ ಎಂದು ಸಚಿವಾಲಯವು ಅಭಿಪ್ರಾಯಪಟ್ಟಿದೆ ಎಂದು ತಿಳಿಸಿದ್ದಾರೆ.


ಭಾರತವು ತನ್ನ ಅಡುಗೆ ಎಣ್ಣೆಯ ಮೂರನೇ ಎರಡರಷ್ಟು ಆಮದು ಮಾಡಿಕೊಳ್ಳುತ್ತದೆ ಮತ್ತು ರಷ್ಯಾ-ಉಕ್ರೇನ್ ಯುದ್ಧದ ಮತ್ತು ದೊಡ್ಡ ರಫ್ತುದಾರರಾದ ಇಂಡೋನೇಷ್ಯಾದಿಂದ ತಾಳೆ ಎಣ್ಣೆಯ ರಫ್ತಿನ ಮೇಲೆ ಸಂಕ್ಷಿಪ್ತ ನಿಷೇಧದಿಂದಾಗಿ ಇತ್ತೀಚಿನ ತಿಂಗಳುಗಳಲ್ಲಿ ಬೆಲೆಗಳು ಭಾರಿ ಏರಿಳತವಾಗಿತ್ತು.


ಕಳೆದ ಎರಡು ತಿಂಗಳುಗಳಲ್ಲಿ, ಇಂಡೋನೇಷ್ಯಾ ರಫ್ತುಗಳ ಮೇಲಿನ ನಿಷೇಧವನ್ನು ತೆಗೆದುಹಾಕಿದಾಗಿನಿಂದ ಅಂತರರಾಷ್ಟ್ರೀಯ ಬೆಲೆಗಳು ಕಡಿಮೆಯಾಗಿದೆ, ಬೆಲೆಗಳನ್ನು ಮಧ್ಯಮಗೊಳಿಸಲಾಗಿದೆ.


ಬೆಲೆ ಮತ್ತು ಲಭ್ಯತೆಯನ್ನು ಪರಿಶೀಲಿಸಲು ತಯಾರಕರೊಂದಿಗೆ ಕೇಂದ್ರವು ಮೇ ತಿಂಗಳಿನಿಂದ ಮೂರು ಸಭೆಗಳನ್ನು ನಡೆಸಿದೆ. ಜುಲೈ 6 ರಂದು, ಸರ್ಕಾರವು ಇದೇ ರೀತಿಯ ಪರಿಶೀಲನೆಯನ್ನು ನಡೆಸಿತು ಮತ್ತು ಜಾಗತಿಕ ಬೆಲೆಗಳ ಕುಸಿತವನ್ನು ಉಲ್ಲೇಖಿಸಿ ತಯಾರಕರೊಂದಿಗಿನ ಸಭೆಯ ನಂತರ ಚಿಲ್ಲರೆ ಬೆಲೆಗಳನ್ನು ಕಡಿತಗೊಳಿಸುವಂತೆ ಖಾದ್ಯ ತೈಲ ಸಂಸ್ಥೆಗಳನ್ನು ಕೇಳಿದ್ದವು.


ಭಾರತವು ತಾಳೆ ಎಣ್ಣೆ ಆಮದಿಗಾಗಿ ಇಂಡೋನೇಷ್ಯಾ ಮತ್ತು ಮಲೇಷ್ಯಾವನ್ನು ಅವಲಂಬಿಸಿದೆ ಮತ್ತು ಅದರ ಹೆಚ್ಚಿನ ಸೂರ್ಯಕಾಂತಿ ಎಣ್ಣೆ ಮತ್ತು ಸೋಯಾಬೀನ್ ತೈಲ ಬೇಡಿಕೆಗಾಗಿ ಉಕ್ರೇನ್, ಅರ್ಜೆಂಟೀನಾ, ಬ್ರೆಜಿಲ್ ಮತ್ತು ರಷ್ಯಾವನ್ನು ಅವಲಂಬಿಸಿದೆ. ಭಾರತದ ವಾರ್ಷಿಕ ಖಾದ್ಯ ತೈಲ ಆಮದು ಸುಮಾರು 13 ಮಿಲಿಯನ್ ಟನ್‌ಗಳಷ್ಟಿದೆ.


ಇದನ್ನೂ ಓದಿ : Vegetable Price: ಹೀಗಿದೆ ನೋಡಿ ಇಂದಿನ ತರಕಾರಿ ಬೆಲೆ


ಜುಲೈನಲ್ಲಿ, ಆಮದು ಮಾಡಿಕೊಳ್ಳುವ ಹೆಚ್ಚಿನ ಅಡುಗೆ ಎಣ್ಣೆಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು (MRP) ಒಂದು ವಾರದೊಳಗೆ ಆಮದು ಬೆಲೆಗಳು ಲೀಟರ್‌ಗೆ ₹ 10 ರಷ್ಟು ಕಡಿಮೆಯಾಗುವುದರೊಂದಿಗೆ ಇಳಿಕೆಯಾಗಬೇಕು ಎಂದು ಸರ್ಕಾರ ಸೂಚಿಸಿತು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.