Edible Oil Price Update: ಅಡುಗೆ ಎಣ್ಣೆ ಬೆಲೆಯಲ್ಲಿ ಶೀಘ್ರದಲ್ಲಿಯೇ ರೂ.30 ಇಳಿಕೆ, ಜುಲೈ ಮೂರನೇ ವಾರದಲ್ಲಿಯೂ MRP ತಗ್ಗಿಸಿದ ಕಂಪನಿಗಳು
Edible oil Price: ಹಲವು ಅಡುಗೆ ಎಣ್ಣೆ ಉತ್ಪಾದಕ ಕಂಪನಿಗಳು ಜುಲೈ ಮೂರನೇ ವಾರದಲ್ಲಿಯೂ ಕೂಡ ಒಂದು ಲೀಟರ್ ಬಾಟಲಿ ಅಥವಾ ಸ್ಯಾಚೆಟ್ ನ ಎಂಆರ್‌ಪಿಯನ್ನು 30 ರೂ.ಗಳಷ್ಟು ಇಳಿಕೆ ಮಾಡಿವೆ. ಈ ಹಿಂದೆಯೂ ಕೂಡ ಜಾಗತಿಕ ಮಾರುಕಟ್ಟೆಯಲ್ಲಿ ಖಾದ್ಯತೈಲ ಬೆಲೆಯಲ್ಲಿ ಇಳಿಕೆ ಮಾಡಲಾಗಿತ್ತು.
Edible oil Price: ಮುಂದಿನ ಕೆಲವು ದಿನಗಳಲ್ಲಿ ಖಾದ್ಯ ತೈಲದ ಬೆಲೆ ಲೀಟರ್‌ಗೆ 30 ರೂ.ಗಳಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ (ಡಿಎಫ್‌ಪಿಡಿ) ಅಂಕಿ ಅಂಶಗಳ ಪ್ರಕಾರ, ಈ ತಿಂಗಳ ಮೂರನೇ ವಾರದಲ್ಲಿಯೂ ಕೂಡ ಖಾದ್ಯ ತೈಲ ಬೆಲೆ ಲೀಟರ್ ಹಿಂದೆ ರೂ 30 ರಷ್ಟು ಇಳಿಕೆಯಾಗಿದೆ ಎನ್ನಲಾಗಿದೆ. ಇದಲ್ಲದೆ, ಸರ್ಕಾರ ಮೆತ್ತೆ ಕೆಲ ಖಾದ್ಯ ತೈಲಗಳ ಮೇಲಿನ ಸುಂಕ ಕಡಿಮೆ ಮಾಡುವ ಸಾಧ್ಯತೆ ಇದೆ, ಇದಕ್ಕಾಗಿ ಸರ್ಕಾರ ಉದ್ಯಮ ಮತ್ತು ಮಧ್ಯವರ್ತಿಗಳಿಂದ ಸಲಹೆಗಳನ್ನು ಕೋರಿದೆ. ಹಲವು ಕಂಪನಿಗಳು ಜುಲೈ ಮೂರನೇ ವಾರದಿಂದ ಒಂದು ಲೀಟರ್ ಖಾದ್ಯತೈಲದ ಬಾಟಲಿ ಮತ್ತು ಸ್ಯಾಚೆಟ್‌ನ ಎಂಆರ್‌ಪಿಯನ್ನು 30 ರೂ.ನಷ್ಟು ಇಳಿಕೆ ಮಾಡಿವೆ. ಈ ಹಿಂದೆಯೂ ಕೂಡ ಜಾಗತಿಕ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಯಲ್ಲಿ ಇಳಿಕೆಯಾಗಿತ್ತು ಎಂಬುದು ಇಲ್ಲಿ ಗಮನಾರ್ಹ.
ಎಂಆರ್‌ಪಿಯಲ್ಲಿ ಭಾರಿ ಇಳಿಕೆ
ಅಡಾನಿ ವಿಲ್ಮರ್ ತನ್ನ ಉತ್ಪನ್ನದ ಎಂಆರ್‌ಪಿಯನ್ನು ಲೀಟರ್‌ಗೆ 10 ರಿಂದ 30 ರೂ.ಗೆ ಕಡಿತಗೊಳಿಸಿದೆ. ಇದೇ ರೀತಿ ಜೆಮಿನಿ ಎಡಿಬಲ್ & ಫ್ಯಾಟ್ಸ್ ಕೂಡ ತನ್ನ ಉತ್ಪನ್ನಗಳ ಬೆಲೆಯನ್ನು ಲೀಟರ್‌ಗೆ 8 ರಿಂದ 30 ರೂ. ಇಳಿಕೆ ಮಾಡಿದೆ. ಇನ್ನೊಂದೆಡೆ ಇಮಾಮಿ ಅಗ್ರಿ ಎಂಆರ್‌ಪಿಯನ್ನು 35 ರೂ.ವರೆಗೆ ಇಳಿಕೆ ಮಾಡಿದೆ. ನಿಸ್ಸಂಶಯವಾಗಿ, ಸಾಮಾನ್ಯ ಜನರು ಸಹ ಮೊದಲಿಗಿಂತ ಕಡಿಮೆ ಬೆಲೆಗೆ ಖಾದ್ಯ ತೈಲಗಳನ್ನು ಖರೀದಿಸುತ್ತಿದ್ದಾರೆ. ಇತ್ತೀಚೆಗೆ, ಮದರ್ ಡೈರಿ ತನ್ನ ಎಲ್ಲಾ ಖಾದ್ಯ ತೈಲ ಬೆಲೆಗಳನ್ನು ಲೀಟರ್‌ಗೆ 15 ರೂ.ವರೆಗೆ ಕಡಿತಗೊಳಿಸಿದೆ. ಇದರಲ್ಲಿ ಸೋಯಾಬೀನ್ ಎಣ್ಣೆ ಮತ್ತು ಅಕ್ಕಿ ಹೊಟ್ಟು ಎಣ್ಣೆ ಶಾಮೀಲಾಗಿವೆ.
ಇದನ್ನೂ ಓದಿ-Farmer Schemes: ರೈತರಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಮಿತ್ ಶಾ ಮಹತ್ವದ ಹೇಳಿಕೆ, ರೈತರಿಗೇನು ಲಾಭವಾಗಲಿದೆ?
ತೈಲ ಕಂಪನಿಗಳೊಂದಿಗೆ ಸಭೆ
ತೈಲ ಬೆಲೆ ಏರಿಕೆಯಿಂದ ಜನಸಾಮಾನ್ಯ ಪರಿಹಾರ ಒದಗಿಸಲು ಸರ್ಕಾರ ಇತ್ತೀಚೆಗಷ್ಟೇ ತೈಲ ಕಂಪನಿಗಳೊಂದಿಗೆ ಸಭೆ ನಡೆಸಿದೆ. ಖಾದ್ಯ ತೈಲದ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಬಹುದು ಎಂದು ಸರ್ಕಾರವು ಅವರಿಗೆ ಮನವರಿಕೆ ಮಾಡಿಕೊಟ್ಟಿದೆ. ಈ ಸಭೆಗೆ ಸರ್ಕಾರವು ಎಲ್ಲಾ ತೈಲ ಕಂಪನಿಗಳ ಪ್ರತಿನಿಧಿಗಳನ್ನು ಆಹ್ವಾನಿಸಿತ್ತು. ಇದರಲ್ಲಿ ಕೆಲವು ತೈಲ ಕಂಪನಿಗಳು ಬೆಲೆಯನ್ನು ಕಡಿಮೆ ಮಾಡಲು ಒಪ್ಪಿಕೊಂಡಿವೆ ಎನ್ನಲಾಗಿದೆ.
ಇದನ್ನೂ ಓದಿ-ವಿವಾಹಿತರು Ration Cardನಲ್ಲಿ ತಕ್ಷಣ ಈ ಅಪ್‌ಡೇಟ್ ಮಾಡಿ, ಇಲ್ಲದಿದ್ದರೆ ನಿಂತು ಹೋಗುತ್ತೆ ರೇಷನ್
ಕಳೆದ ಮಾರ್ಚ್‌ನಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಸಂಭವಿಸಿದ ಭೀಕರ ಯುದ್ಧದಿಂದಾಗಿ ಸೂರ್ಯಕಾಂತಿ ಎಣ್ಣೆಯ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದು ಭಾರಿ ಪ್ರಭಾವವನ್ನೇ ಬೀರಿದೆ. ಭಾರತವು ಹೆಚ್ಚಿನ ಪ್ರಮಾಣದ ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುತ್ತದೆ, ಅದರಲ್ಲಿ ಪಾಮ್ ಎಣ್ಣೆಯ ವಿಷಯದಲ್ಲಿ ಭಾರತ ಶೇ.60 ಕ್ಕಿಂತ ಹೆಚ್ಚು ಪಾಮ್ ಆಯಿಲ್ ಅನ್ನು ಹೊಂದಿದೆ. ಭಾರತವು 2.5 ಮಿಲಿಯನ್ ಟನ್‌ಗಿಂತಲೂ ಹೆಚ್ಚು ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ