ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರವಾಗಿದೆ. ಇವುಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಆದರೆ, ಈಗ ವಿಮಾನ ಇಂಧನ (ಚ) ಬೆಲೆ ಇಳಿಕೆಯಾಗಿದೆ. ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ಬೆಲೆಯನ್ನು ಇಂದು ಇಳಿಕೆ ಮಾಡಲಾಗಿದ್ದು, ಇದು ಅಂತರರಾಷ್ಟ್ರೀಯ ತೈಲ ಬೆಲೆಗಳ ಕುಸಿತವನ್ನು ಪ್ರತಿಬಿಂಬಿಸುತ್ತದೆ. ಇನ್ನು ವಿಮಾನ ಇಂಧನ (ಎಟಿಎಫ್) ಬೆಲೆ ಶೇ 2.2 ರಷ್ಟು ಕಡಿತಗೊಳಿಸಲಾಗಿದೆ.
ಇದನ್ನೂ ಓದಿ: ಅಪ್ಪು ಹಾದಿಯಲ್ಲಿ ಹೆಜ್ಜೆ ಹಾಕುತ್ತಿರೋ ʼಯುವʼ: ಮಂತ್ರಾಲಯಕ್ಕೆ ಭೇಟಿ ನೀಡಿದ ದೊಡ್ಮನೆ ಹುಡ್ಗ
ಸಾರ್ವಜನಿಕ ವಲಯದ ಪೆಟ್ರೋಲಿಯಂ ಕಂಪನಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಎಟಿಎಫ್ ಬೆಲೆ ಪ್ರತಿ ಲೀಟರ್ಗೆ ರೂ 1,38,147.93 ಇದೆ. ಅದರಲ್ಲಿ ಶೇ. 2.2 ಅಂದರೆ ರೂ 3,084.94 ಕಡಿತಗೊಳಿಸಲಾಗಿದೆ. ಎಟಿಎಫ್ ಬೆಲೆಯನ್ನು ಈ ವರ್ಷ ಎರಡನೇ ಬಾರಿಗೆ ಕಡಿತಗೊಳಿಸಲಾಗುತ್ತಿದೆ. ಕಳೆದ ತಿಂಗಳು ಲೀಟರ್ಗೆ 1,41,232.87 ರೂ ಇತ್ತು. 141.23 ರೂ. ಬೆಲೆ ಇಳಿಕೆ ಮಾಡಲಾಗಿತ್ತು.
ಕಳೆದ ಹದಿನೈದು ದಿನಗಳಿಂದ ಅಂತಾರಾಷ್ಟ್ರೀಯ ತೈಲ ಬೆಲೆಗಳ ಆಧಾರದ ಮೇಲೆ ಪ್ರತಿ ತಿಂಗಳ 1 ಮತ್ತು 16 ರಂದು ATF ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಈ ಹಿಂದೆ ಜುಲೈ 1 ರಂದು ಬೆಲೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಹೀಗಾಗಿ ಈಗ ಬೆಲೆಯನ್ನು ಕಡಿತಗೊಳಿಸುವ ಮೂಲಕ ಸ್ವಲ್ಪ ಪರಿಹಾರವನ್ನು ನೀಡಲಾಗಿದೆ. ಬೆಲೆ ಇಳಿಕೆಯಿಂದ ವಿಮಾನಯಾನ ಕಂಪನಿಗಳಿಗೆ ಸಾಕಷ್ಟು ರಿಲೀಫ್ ಸಿಗಲಿದೆ.
ಇದನ್ನೂ ಓದಿ: Dream Interpretation: ಕನಸಿನಲ್ಲಿ ಈ ಸಂಗತಿಗಳು ಕಾಣುವುದು ದೇವಿ ಲಕ್ಷ್ಮಿಯ ಆಗಮನದ ಸಂಕೇತಗಳಾಗಿವೆ
ಕಚ್ಚಾ ತೈಲ ಬೆಲೆ:
ಮತ್ತೊಂದೆಡೆ, ಶುಕ್ರವಾರ ಅಂದರೆ ಜುಲೈ 15ರಂದು, ಭವಿಷ್ಯದ ವಹಿವಾಟಿನಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್ಗೆ ರೂ 7,604 ಆಗಿದೆ. ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ನಲ್ಲಿ, ಜುಲೈನಲ್ಲಿ ವಿತರಣೆಗಾಗಿ ಕಚ್ಚಾ ತೈಲವು ಪ್ರತಿ ಬ್ಯಾರೆಲ್ಗೆ ರೂ 9 ಅಥವಾ 0.12 ರಷ್ಟು ಏರಿಕೆಯಾಗಿ ರೂ 7,604 ಕ್ಕೆ ತಲುಪಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ