ನವದೆಹಲಿ : PM Kisan Latest news Updates: ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ಸರ್ಕಾರ ನಾಳೆ ಅಂದರೆ ಮೇ 14 ರಿಂದ,  2000 ರೂಪಾಯಿಗಳನ್ನು ರೈತರ ಖಾತೆಗಳಿಗೆ ವರ್ಗಾಯಿಸಲು ಪ್ರಾರಂಭಿಸುತ್ತದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯ (PM Kisan Samman Nidhi)  8 ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ನಾಳೆ   ಬಿಡುಗಡೆ ಮಾಡಲಿದ್ದಾರೆ. ಇದೇ ವೇಳೆ, ನಾಳೆ  ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ದೇಶದ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. 


COMMERCIAL BREAK
SCROLL TO CONTINUE READING

ಬಹಳ ದಿನಗಳಿಂದ ರೈತರು ನಿರೀಕ್ಷಿಸುತ್ತಿದ್ದ ಪಿಎಂ ಕಿಸಾನ್ ಯೋಜನೆಯ (PM Kisan Yojana) 8 ನೇ ಕಂತಿನ ಹಣ ನಾಳೆ ರೈತರ ಖಾತೆ ಸೇರಲಿದೆ. ನಾಳೆ ಬೆಳಿಗ್ಗೆ 11 ಗಂಟೆಯಿಂದ ರೈತರ (farmers) ಖಾತೆಗೆ ಹಣ ಸಂದಾಯವಾಗಲು ಆರಂಭವಾಗುತ್ತದೆ. ಈ ಮಾಹಿತಿಯನ್ನು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ (Narendra Singh) ನೀಡಿದ್ದಾರೆ. ಇದರೊಂದಿಗೆ ನಾಳೆ ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ದೇಶದ ರೈತರ ಜೊತೆ ಸಂವಾದ ನಡೆಸಲಿದ್ದಾರೆ. ಪ್ರಧಾನಿ ಜೊತೆ ಸಂವಾದದಲ್ಲಿ ಪಾಲ್ಗೊಳ್ಳಲು ಅಥವಾ  ಪಿಎಂ ಕಿಸಾನ್ ಯೋಜನೆಯ ಹಣ ಬಿಡುಗಡೆ ಕಾರ್ಯಕ್ರಮವನ್ನು ವೀಕ್ಷಿಸಲು Pmindiawebcast.nic.in ಗೆ ಭೇಟಿ ನೀಡಬಹುದು.  


ನಮ್ಮ ವಾಯುವೀರರಿಗೊಂದು ಸಲಾಂ..! ನಮ್ಮ ಉಸಿರು ರಕ್ಷಿಸಿದ ವಾಯುಪಡೆ


ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎನ್ನುವುದುನ್ನು ಪರಿಶೀಲಿಸಿಕೊಳ್ಳಿ : 
ರಾಜ್ಯ ಸರ್ಕಾರಗಳು Rft (Request For Transfer) ಗೆ ಸಹಿ ಹಾಕಿವೆ ಮತ್ತು ಕೇಂದ್ರವು Fto (Fund Transfer Order) ಜನರೇಟ್ ಮಾಡಿದೆ. ಇನ್ನು ನಿಮ್ಮ ಖಾತೆಯಲ್ಲಿ 8 ನೇ ಕಂತಿನ ಮೊತ್ತವು ಬರಲಿದೆಯೇ ಅಥವಾ ಇಲ್ಲವೇ ಎಂಬ ಮಾಹಿತಿ ಪಡೆಯಲು ಅಧಿಕೃತ ವೆಬ್‌ಸೈಟ್ pmkisan.gov.inಗೆ ಭೇಟಿ ನೀಡಬಹುದು. ಇಲ್ಲಿ ಎಲ್ಲಾ ರೀತಿಯ ಮಾಹಿತಿಗಳು ಲಭ್ಯವಿರುತ್ತದೆ.  ಆದರೆ ಈ ಯೋಜನೆಯ ಲಾಭ ಪಡೆಯಬೇಕಾದರೆ ನೀವು ಈ ಯೋಜನೆಯಲ್ಲಿ ನೋಂದಾಯಿಸಿಕೊಂಡಿರಬೇಕು. 


ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು :
ನಿಮ್ಮ ಖಾತೆಗೆ ದುಡ್ಡು ಜಮೆಯಾಗದಿದ್ದಲ್ಲಿ ಅಥವಾ, ಏನಾದರೂ ಸಮಸ್ಯೆ ಎದುರಾದಲ್ಲಿ ಪಿಎಂ ಕಿಸಾನ್ (Pm Kisan) ಸಹಾಯವಾಣಿ 155261 ಮೂಲಕ  ಮಾಹಿತಿಯನ್ನು ಪಡೆದುಕೊಳ್ಳಬಹುದು. ಇದಲ್ಲದೆ ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ 18001155266 ಮತ್ತು ಪಿಎಂ ಕಿಸಾನ್ ಲ್ಯಾಂಡ್‌ಲೈನ್ ಸಂಖ್ಯೆ 011-23381092, 23382401 ಮೂಲಕ ಕೂಡಾ ಮಾಹಿತಿ ಪಡೆದುಕೊಳ್ಳಬಹುದು.  ಇದರೊಂದಿಗೆ pmkisan-ict@gov.in ಇ ಮೇಲ್ ಐಡಿ ಮೂಲಕವೂ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬಹುದು. 


ಇದನ್ನೂ ಓದಿ : ಪ್ರತಿ ದಿನ 7 ರೂಪಾಯಿ ಹೂಡಿಕೆ ಮಾಡಿ ತಿಂಗಳಿಗೆ ಪಡೆಯಿರಿ 5,000 ರೂ; ತಿಳಿದಿರಲಿ ಸರ್ಕಾರದ ಈ ಯೋಜನೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.