PM Kisan : Rft ಸಹಿ ಮಾಡಿದ ರಾಜ್ಯ ಸರ್ಕಾರಗಳು; ಶೀಘ್ರದಲ್ಲೇ ರೈತರ ಖಾತೆಗೆ ಹಣ

ರಾಜ್ಯ ಸರ್ಕಾರಗಳು Rft ಗೆ ಸಹಿ ಹಾಕಿವೆ. ಅಂದರೆ ಶೀಘ್ರದಲ್ಲೇ 2000 ರೂ.ಗಳು ರೈತರ ಖಾತೆ ಸೇರಲಿದೆ. ನೀವು ಸಹ ಕೃಷಿಕರಾಗಿದ್ದು, ಪಿಎಂ ಕಿಸಾನ್‌ಗಾಗಿ ನೋಂದಾಯಿಸಿಕೊಂಡಿದ್ದರೆ, ತಕ್ಷಣ ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ.

Written by - Ranjitha R K | Last Updated : May 7, 2021, 01:24 PM IST
  • ಶೀಘ್ರದಲ್ಲೇ ರೈತರ ಖಾತೆಗೆ PM Kisan 8ನೇ ಕಂತಿನ ಹಣ
  • Rft ಸಹಿ ಮಾಡಿ ಕೇಂದ್ರಕ್ಕೆ ಕಳುಹಿಸಿರುವ ರಾಜ್ಯ ಸರ್ಕಾರಗಳು
  • ನಿಮ್ಮ ಖಾತೆಯ ಸ್ಟೇಟಸ್ ತಿಳಿಯಲು ಹೀಗೆ ಮಾಡಿ
PM Kisan : Rft ಸಹಿ ಮಾಡಿದ ರಾಜ್ಯ ಸರ್ಕಾರಗಳು; ಶೀಘ್ರದಲ್ಲೇ ರೈತರ ಖಾತೆಗೆ ಹಣ title=
ಶೀಘ್ರದಲ್ಲೇ ರೈತರ ಖಾತೆಗೆ PM Kisan 8ನೇ ಕಂತಿನ ಹಣ (File photo)

PM Kisan Latest News:  PM Kisan Samman Nidhi ಯೋಜನೆಯ 8 ನೇ ಕಂತಿನ ಹಣಕ್ಕಾಗಿ ಇಡೀ ದೇಶದ ಕೋಟ್ಯಂತರ ರೈತರು ಕಾಯುತ್ತಿದ್ದಾರೆ. ಈಗ ಅವರ ಪಾಲಿಗೆ ಸಿಹಿ ಸುದ್ದಿ ಬಂದಿದೆ. ರಾಜ್ಯ ಸರ್ಕಾರಗಳು Rft ಗೆ ಸಹಿ ಹಾಕಿವೆ. ಅಂದರೆ ಶೀಘ್ರದಲ್ಲೇ 2000 ರೂ.ಗಳು ರೈತರ ಖಾತೆ ಸೇರಲಿದೆ. ನೀವು ಸಹ ಕೃಷಿಕರಾಗಿದ್ದು, ಪಿಎಂ ಕಿಸಾನ್‌ಗಾಗಿ ನೋಂದಾಯಿಸಿಕೊಂಡಿದ್ದರೆ, ತಕ್ಷಣ ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ. ನಿಮ್ಮ ಸ್ಟೇಟಸ್ ನಲ್ಲಿ 8 ನೇ ಕಂತುಗಾಗಿ Rft ಗೆ ಸಹಿ ಹಾಕಲಾಗಿದೆ ಎಂದು ತೋರಿಸಿದರೆ, ಶೀಘ್ರದಲ್ಲೇ ನಿಮ್ಮ ಖಾತೆಗೆ 2000 ರೂಪಾಯಿ ಬಂದು ಸೇರಲಿದೆ. 

ಈ ರೀತಿ ನಿಮ್ಮ ಕಾತೆಯ ಸ್ಟೇಟಸ್ ತಿಳಿದುಕೊಳ್ಳಿ. : 
 ಸ್ಟೇಟಸ್ ಅನ್ನು ಸುಲಭವಾಗಿ ಹೇಗೆ ಚೆಕ್ ಮಾಡಬಹುದು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ. 

ಇದನ್ನೂ ಓದಿ : Provisional Pension: ಲಕ್ಷಾಂತರ ಪಿಂಚಣಿದಾರರಿಗೆ ಪರಿಹಾರ ಸುದ್ದಿ!

1. ಮೊದಲನೆಯದಾಗಿ,  PM Kisan ಅಧಿಕೃತ ವೆಬ್‌ಸೈಟ್ https://pmkisan.gov.in/ ಒಪನ್ ಮಾಡಿ
2. ಇಲ್ಲಿ ಬಲಭಾಗದಲ್ಲಿ 'Farmers Corner' ಆಯ್ಕೆ ಕಾಣುತ್ತದೆ
3. ‘Beneficiary Status'  ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಈಗ  ಹೊಸ ಪೇಜ್ ತೆರೆದುಕೊಳ್ಳುತ್ತದೆ 
4. ಈ ಹೊಸ ಪುಟದಲ್ಲಿ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ  ಇದರಲ್ಲಿ ಯಾವುದಾದರೂ ಒಂದು ಆಯ್ಕೆಯನ್ನು ಆಯ್ದುಕೊಳ್ಳಿ. 
5. ನಂತರ 'Get Data' ಮೇಲೆ  ಕ್ಲಿಕ್ ಮಾಡಿ
5. ಇಲ್ಲಿ ಕ್ಲಿಕ್ ಮಾಡುವಾಗ, ನಿಮ್ಮ ಎಲ್ಲಾ ಟ್ರಾನ್ಸಾಕ್ಷನ್ ಮಾಹಿತಿಗಳು ಲಭ್ಯವಾಗುತ್ತದೆ. ನಿಮ್ಮ ಖಾತೆಗೆ ಯಾವಾಗ ಹಣ ಜಮೆಯಾಗಿದೆ ಎಂಬ ವಿವರಗಳು ಲಭ್ಯವಾಗುತ್ತವೆ. 
6. ಈ ಸ್ಥಳದಲ್ಲಿ ಬರುವ 8 ನೇ ಕಂತಿನ ಸ್ಟೇಟಸ್ ಕೂಡಾ ತಿಳಿಯುತ್ತದೆ. 

ಇದನ್ನೂ ಓದಿ : SBI Alert: ಸ್ಟೇಟ್ ಬ್ಯಾಂಕಿನ ಡಿಜಿಟಲ್ ಸೇವೆಗಳಲ್ಲಿ ಅಡಚಣೆ! ನಿಮ್ಮ ಪ್ರಮುಖ ಕೆಲಸವನ್ನು ತಕ್ಷಣ ನಿರ್ವಹಿಸಿ

ಸ್ಟೇಟಸ್ ನ  ಅರ್ಥ ತಿಳಿದುಕೊಳ್ಳಿ :
1. Waiting for approval by state :
ನಿಮ್ಮ ಸ್ಟೆಟಸ್ ಎದುರು Waiting for approval by state ಎಂದು ಕಂಡುಬಂದರೆ, ನಿಮ್ಮ ಖಾತೆಗೆ ಕಂತು ಬಂದು ಸೇರಲು ಇನ್ನು ಕೆಲ ದಿನಗಳು ಕಾಯಬೇಕಾಗುತ್ತದೆ. ಅಂದರೆ ರಾಜ್ಯ ಸರ್ಕಾರದಿಂದ ಇನ್ನೂ ಅನುಮೋದನೆ ಸಿಕ್ಕಿಲ್ಲ ಎಂದರ್ಥ. ನೀವು ಸಲ್ಲಿಸಿರುವ ದಾಖಲೆಗಳನ್ನು ರಾಜ್ಯ ಸರ್ಕಾರ ಪರಿಶೀಲಿಸಿದ ಕೂಡಲೇ ಆರ್‌ಎಫ್‌ಟಿ (Rft )  ಸಹಿ ಮಾಡಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.

2. Rft Signed by State Government :
ನಿಮಗೆ ನಿಮ್ಮ ಸ್ಟೇಟಸ್ ನಲ್ಲಿ Rft Signed by State for instalment ಎಂದು ಕಂಡು ಬಂದರೆ, ನೀವು ಸಲ್ಲಿಸಿದ ದಾಖಲೆಗಳನ್ನು ರಾಜ್ಯ ಸರ್ಕಾರ ಪರಿಶೀಲಿಸಿದೆ ತ್ತು ಎಲ್ಲಾ ದಾಖಲೆಗಳು ಸರಿಯಾಗಿವೆ ಎಂದರ್ಥ. ಇದಾದ ನಂತರ ರೈತರ ಖಾತೆಗೆ ಹಣ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡುತ್ತದೆ.   Rft ಅಂದರೆ Request For Transfer . ಅಂದರೆ ಶೀಘ್ರದಲ್ಲೇ ನಿಮ್ಮ ಖಾತೆಗೆ ಹಣ ಸಂದಾಯವಾಗಲಿದೆ. 

ಇದನ್ನೂ ಓದಿ : LPG Offers: ಅಡುಗೆ ಅನಿಲದ ಮೇಲೆ ಸಿಗಲಿದೆ 800 ರೂಪಾಯಿಗಳ ರಿಯಾಯಿತಿ ; ಮೇ 31ರವರೆಗೆ ಇರಲಿದೆ ಈ ಆಫರ್

3. FTO is Generated and Payment confirmation is pending :
ಇದರರ್ಥ ನಿಮ್ಮ ಕಂತು ಶೀಘ್ರದಲ್ಲೇ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲ್ಪಡುತ್ತದೆ. ಫಲಾನುಭವಿಗಳ ಆಧಾರ್ ಸಂಖ್ಯೆ (Aadhaar), ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಬ್ಯಾಂಕಿನ IFSC  ಕೋಡ್ ಸೇರಿದಂತೆ ಇತರ ವಿವರಗಳ ನಿಖರತೆಯನ್ನು ರಾಜ್ಯ ಸರ್ಕಾರ ಖಚಿತಪಡಿಸಿದೆ. ನಿಮ್ಮ ಕಂತಿನ ಮೊತ್ತವು ಸಿದ್ಧವಾಗಿದೆ ಮತ್ತು ಅದನ್ನು ನಿಮ್ಮ ಬ್ಯಾಂಕ್ ಖಾತೆಗೆ ಕಳುಹಿಸಲು ಆದೇಶಿಸಲಾಗಿದೆ. FTO  ಅಂದರೆ Fund Transfer Order . 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News