ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ವಾಹನ ಸವಾರರು ಈಗ ಎಲೆಕ್ಟ್ರಿಕ್ ವಾಹನಗಳತ್ತ (Electric vehicle)ಒಲವು ತೋರುತ್ತಿದ್ದಾರೆ. ನೀವು ಕೂಡಾ, ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸುವ ಬಗ್ಗೆ ಯೋಜಿಸುತ್ತಿದ್ದರೆ, ಹೊಸ ಎಲೆಕ್ಟ್ರಿಕ್ ಸ್ಕೂಟರ್ (E-Scooter)ಆಯ್ಕೆ ಮಾರುಕಟ್ಟೆಯಲ್ಲಿ ಸಿದ್ಧವಾಗಿದೆ. ಈ ಸ್ಕೂಟರಿನ ಆರಂಭಿಕ ಬೆಲೆ 69,000 ರೂ. ಒಕಾಯ ಗ್ರೂಪ್‌ನ (okaya scooter) ಎಲೆಕ್ಟ್ರಿಕ್ ವಾಹನ ಘಟಕವು ಗುರುವಾರ 'ಫ್ರೀಡಮ್' ಹೆಸರಿನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ.


COMMERCIAL BREAK
SCROLL TO CONTINUE READING

ಅಪ್ಪಟ ಭಾರತೀಯ ಸ್ಕೂಟರ್ :
ಈ ಸ್ಕೂಟರ್ ಅನ್ನು ಸಂಪೂರ್ಣವಾಗಿ ಇಲ್ಲಿಯೇ ತಯಾರಿಸಕಲಾಗಿದೆ. ಹೌದು, ಹಿಮಾಚಲ ಪ್ರದೇಶದ ಬದ್ದಿಯಲ್ಲಿ ಈ ಸ್ಜೂಟರ್ ಅನ್ನು ತಯಾರಿಸಲಾಗಿದೆ ಎಂದು ಕಂಪನಿ ಹೇಳಿದೆ. ಇ-ಸ್ಕೂಟರ್ (E-Scooter) ಕ್ಷೇತ್ರದಲ್ಲಿ ಇದು ಕಂಪನಿಯ ಮೂರನೇ ಸ್ಕೂಟರ್ ಆಗಿದೆ. ಇದಕ್ಕೂ ಮೊದಲು, ಕಳೆದ ಜುಲೈನಲ್ಲಿ, ಈ ಕಂಪನಿಯು ಇ-ಸ್ಕೂಟರ್ ವಲಯವನ್ನು ಪ್ರವೇಶಿಸಿತ್ತು. 


ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳ..! ಎಷ್ಟು ಏರಿಕೆಯಾಗಲಿದೆ ಡಿಎ ?


Li-ion ಮತ್ತು ಲೀಡ್ ಆಸಿಡ್ ಬ್ಯಾಟರಿ ಆಯ್ಕೆಗಳು :
ಕಂಪನಿಯು ಈಗಾಗಲೇ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು (Electric scooter) ಮಾರಾಟ ಮಾಡುತ್ತಿದೆ. ಇವಿಯನ್ ಐಕ್ಯೂ ಸರಣಿ ಮತ್ತು ಕ್ಲಾಸ್ ಐಕ್ಯೂ ಸರಣಿ. ಲಿಥಿಯಂ-ಐಯಾನ್ ಮತ್ತು ಲೀಡ್-ಆಸಿಡ್ ಬ್ಯಾಟರಿ ಆಯ್ಕೆಗಳೊಂದಿಗೆ ಫ್ರೀಡಮ್ ಲಭ್ಯವಿರುತ್ತದೆ. 


4 ರೂಪಾಂತರಗಳಲ್ಲಿ ಬರಲಿದೆ  ಫ್ರೀಡಂ ಸ್ಕೂಟರ್ :
ಕಂಪನಿಯು ಈ ಫ್ರೀಡಂ ಸ್ಕೂಟರ್ (Freedom scooter) ಸರಣಿಯನ್ನು ನಾಲ್ಕು ಆವೃತ್ತಿಗಳಲ್ಲಿಬಿಡುಗಡೆ ಮಾಡಿದೆ. ಇವುಗಳಲ್ಲಿ ಕಡಿಮೆ ವೇಗದಿಂದ ಹೆಚ್ಚಿನ ವೇಗದವರೆಗೆ ಇ-ಸ್ಕೂಟರ್‌ಗಳನ್ನು ಒಳಗೊಂಡಿರುತ್ತವೆ. ಮುಂಬರುವ ಕೆಲವು ತಿಂಗಳಲ್ಲಿ ಈ ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುವುದು. ಈ ಸ್ಕೂಟರ್ ಗಳನ್ನು ಒಂದು ಬಾರಿ ಚಾರ್ಜ್ ಮಾಡಿದರೆ, ಗರಿಷ್ಠ 250 ಕಿಮೀ ವರೆಗೆ ಕ್ರಮಿಸಬಹುದು. ಒಕಾಯ ಫ್ರೀಡಂ ಸರಣಿಯ ಈ ಸ್ಕೂಟರ್‌ಗಳನ್ನು ಬಿಳಿ, ಕೆಂಪು, ನೀಲಿ, ಕಪ್ಪು, ಹಸಿರು, ಗಾಢ ಹಳದಿ ಮತ್ತು ಬೂದು ಸೇರಿದಂತೆ 12 ಬಣ್ಣಗಳ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. 


ಇದನ್ನೂ ಓದಿ:  SBI Earning opportunity:ಎಸ್‌ಬಿಐನೊಂದಿಗೆ ವ್ಯಾಪಾರ ಆರಂಭಿಸಿ, ಪ್ರತಿ ತಿಂಗಳು 60,000 ರೂ. ಗಳಿಸಿ..!


ಈ ಸ್ಕೂಟರ್‌ಗಳನ್ನು ಸಂಪೂರ್ಣವಾಗಿ ಝೀರೋದಿಂದ ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ಹೇಳುತ್ತದೆ. ಸರಕುಗಳ ವಿತರಣೆಯ ವ್ಯವಹಾರದಲ್ಲಿಯೂ ಅವುಗಳನ್ನು ಬಳಸಬಹುದು.  ಪ್ರತಿಯೊಬ್ಬ ಭಾರತೀಯನಿಗೆ ಉತ್ತಮ ಗುಣಮಟ್ಟದ, ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಸಿಗುವಂತಾಗಬೇಕು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಈ ಸ್ಕೂಟರ್ ಅನ್ನು ತಯಾರಿಸಲಾಗಿದೆ ಎಂದು, ಒಕಾಯಾ ಪವರ್ ಗ್ರೂಪ್‌ನ (okaya scooter) ವ್ಯವಸ್ಥಾಪಕ ನಿರ್ದೇಶಕ ಅನಿಲ್ ಗುಪ್ತಾ (Anil Gupta)ಹೇಳಿದ್ದಾರೆ. 
 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.