7th Pay Commission: ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳ..! ಎಷ್ಟು ಏರಿಕೆಯಾಗಲಿದೆ ಡಿಎ ?

ಇಲ್ಲಿಯವರೆಗೆ, ಜುಲೈ 2021 ರ ಡಿಯರ್ನೆಸ್ ಅಲೋವೆನ್ಸ್ ಅನ್ನು ನಿರ್ಧರಿಸಲಾಗಿಲ್ಲ. ಎಐಸಿಪಿಐ ದತ್ತಾಂಶದ ಪ್ರಕಾರ ಡಿಎ ಶೇಕಡಾ 3 ರಷ್ಟು ಹೆಚ್ಚಾಗಬಹುದು ಎನ್ನಲಾಗಿದೆ. 

Written by - Ranjitha R K | Last Updated : Sep 17, 2021, 05:04 PM IST
  • ನೌಕರರ ಡಿಎ 3% ಹೆಚ್ಚಾಗಬಹುದು
  • ಜುಲೈ 2021 ರಿಂದ 28 ಪ್ರತಿಶತಕ್ಕೆ ಏರಿಸಲಾಗಿದೆ.
  • ಮುಂಬರುವ ಹಬ್ಬದ ಸಂದರ್ಭ ಘೋಷಣೆಯಾಗಬಹುದು
7th Pay Commission: ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳ..! ಎಷ್ಟು ಏರಿಕೆಯಾಗಲಿದೆ ಡಿಎ ? title=
7thPayCommission (file photo)

ನವದೆಹಲಿ : ಇದು ಕೇಂದ್ರ ಸರಕಾರಿ ನೌಕರರಿಗೆ ಸಿಹಿ ಸುದ್ದಿ. ಪಿಂಚಣಿದಾರರಿಗೆ ಉದ್ಯೋಗಿಗಳಿಗೆ (DR) ಡಿಯರ್ನೆಸ್ ಭತ್ಯೆಯ (DA) ಹೆಚ್ಚಳವಾಗಬಹುದು. ಡಿಎ ಮತ್ತು ಡಿಆರ್ ಹೆಚ್ಚಳದಿಂದ 1 ಕೋಟಿಗೂ ಹೆಚ್ಚು ಉದ್ಯೋಗಿಗಳು ಲಾಭ ಪಡೆಯಲಿದ್ದಾರೆ. ಕೇಂದ್ರ ಸರ್ಕಾರ ಇತ್ತೀಚೆಗೆ ಡಿಎಯನ್ನು 17 ಶೇ ದಿಂದ 28 ಶೇಕ್ಕೆ ಹೆಚ್ಚಿಸುವುದಾಗಿ ಘೋಷಿಸಿತ್ತು. ಕೋವಿಡ್ -19 ರ (COVID-19) ಕಾರಣದಿಂದಾಗಿ, ಸರ್ಕಾರವು ಕಳೆದ ವರ್ಷ ಜೂನ್ 2021 ರವರೆಗೆ ಡಿಎ ಅನ್ನು ತಡೆಹಿಡಿದಿತ್ತು.

ಎಷ್ಟು ಹೆಚ್ಚಾಗಬಹುದು ಡಿಎ?
ಇಲ್ಲಿಯವರೆಗೆ, ಜುಲೈ 2021 ರ ಡಿಯರ್ನೆಸ್ ಅಲೋವೆನ್ಸ್ (DA) ಅನ್ನು ನಿರ್ಧರಿಸಲಾಗಿಲ್ಲ. ಎಐಸಿಪಿಐ (AICPI)ದತ್ತಾಂಶದ ಪ್ರಕಾರ ಡಿಎ ಶೇಕಡಾ 3 ರಷ್ಟು ಹೆಚ್ಚಾಗಬಹುದು ಎನ್ನಲಾಗಿದೆ. ಈ ರೀತಿಯಲ್ಲಿ, 3 ಪ್ರತಿಶತದಷ್ಟು ಹೆಚ್ಚಿಸಿದರೆ, ಡಿಎ 31 ಪ್ರತಿಶತವನ್ನು ತಲುಪುತ್ತದೆ. ಮಾಹಿತಿಯ ಪ್ರಕಾರ, ದಸರಾ ಅಥವಾ ದೀಪಾವಳಿಯ (Deepawali) ಸಮಯದಲ್ಲಿ, ಕೇಂದ್ರ ಸರ್ಕಾರವು ಡಿಎ ಹೆಚ್ಚಳವನ್ನು ಘೋಷಿಸಬಹುದು.

ಇದನ್ನೂ ಓದಿ : SBI Earning opportunity:ಎಸ್‌ಬಿಐನೊಂದಿಗೆ ವ್ಯಾಪಾರ ಆರಂಭಿಸಿ, ಪ್ರತಿ ತಿಂಗಳು 60,000 ರೂ. ಗಳಿಸಿ..!

ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು ಡಿಯರ್ನೆಸ್ ಭತ್ಯೆಯು ಶೇಕಡಾ 11 ರಷ್ಟು ಹೆಚ್ಚಾಗಿದೆ. ಜುಲೈ 2021 ರಿಂದ ಸರ್ಕಾರ ಇದನ್ನು 28 ಪ್ರತಿಶತಕ್ಕೆ ಏರಿಸಿದೆ. ಇನ್ನು 2021 ರ ಜೂನ್‌ನಲ್ಲಿ 3 ಪ್ರತಿಶತದಷ್ಟು ಹೆಚ್ಚಾದರೆ, ಡಿಎ 31 ಶೇಕಡಾವನ್ನು ತಲುಪುತ್ತದೆ. 

ತುಟ್ಟಿ ಭತ್ಯೆ ಎಂದರೇನು?
ತುಟ್ಟಿಭತ್ಯೆ ಎಂದರೆ, ಸರ್ಕಾರಿ ನೌಕರರಿಗೆ ಅವರ ಜೀವನ ವೆಚ್ಚವನ್ನು ಸುಧಾರಿಸಲು ನೀಡಲಾಗುವ ಭತ್ಯೆಯಾಗಿದೆ. ಈ ಭತ್ಯೆಯಿಂದಾಗಿ, ಬೆಲೆ ಏರಿಕೆಯು ನೌಕರನ ಜೀವನಮಟ್ಟದ ಮೆಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಹಣವನ್ನು ಸರ್ಕಾರಿ ನೌಕರರು, ಸಾರ್ವಜನಿಕ ವಲಯದ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ (Pensioner) ನೀಡಲಾಗುತ್ತದೆ. ಡಿಯರ್ನೆಸ್ ಭತ್ಯೆಯನ್ನು ಭಾರತದಲ್ಲಿ ಮೊದಲು 1972 ರಲ್ಲಿ ಮುಂಬೈಯಲ್ಲಿ ಪರಿಚಯಿಸಲಾಯಿತು. ಇದರ ನಂತರ, ಕೇಂದ್ರ ಸರ್ಕಾರವು ಎಲ್ಲಾ ಸರ್ಕಾರಿ ಉದ್ಯೋಗಿಗಳಿಗೆ ಈ ಭತ್ಯೆಯನ್ನು ನೀಡಲು ಆರಂಭಿಸಿತು.

ಇದನ್ನೂ ಓದಿ : How to surrender LIC policy: ಅವಧಿಗೂ ಮುನ್ನ ಎಲ್‌ಐಸಿ ಪಾಲಿಸಿಯನ್ನು ಸರೆಂಡರ್ ಮಾಡಬೇಕೇ? ಹಾಗಿದ್ದರೆ ಏನು ಮಾಡಬೇಕು ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News