Electric Vehicle Battery: ಕೇವಲ 15 ನಿಮಿಷಗಳಲ್ಲಿ ಚಾರ್ಜ್ ಆಗುತ್ತೆ ನಿಮ್ಮ ವಾಹನ
ದ್ವಿಚಕ್ರ ಮತ್ತು ತ್ರಿಚಕ್ರ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳನ್ನು 15 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಬೆಂಗಳೂರು : Electric Vehicle Battery: ಆಟೋಮೊಬೈಲ್ ವಲಯವು ವೇಗವಾಗಿ ಎಲೆಕ್ಟ್ರಿಕ್ ವಾಹನಗಳಾಗಿ (Electric Vehicles)ಬದಲಾಗುತ್ತಿದೆ. ಹಸಿರು ಸಂಖ್ಯೆಯ ಫಲಕಗಳನ್ನು ಹೊಂದಿರುವ ಹೆಚ್ಚಿನ ಸಂಖ್ಯೆಯ ವಾಹನಗಳು ರಸ್ತೆಗಳಲ್ಲಿ ಓಡಲು ಪ್ರಾರಂಭಿಸಿವೆ. ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಚಾರ್ಜಿಂಗ್ ಹಬ್‌ಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ಚಾರ್ಜಿಂಗ್‌ನಲ್ಲಿ ತೆಗೆದುಕೊಳ್ಳುವ ಸಮಯ ಎಲೆಕ್ಟ್ರಿಕ್ ವಾಹನಗಳ ವೇಗವನ್ನು ಹೆಚ್ಚಿಸುವಲ್ಲಿ ಸಮಸ್ಯೆಯಾಗಿ ಕಾಣುತ್ತಿದೆ.
ಆದರೀಗ ಈ ಸಮಸ್ಯೆಗೆ ಪರಿಹಾರ ಕಂಡುಬಂದಿದೆ. ಬೆಂಗಳೂರಿನ ಐಟಿ ವಲಯದಲ್ಲಿ ಸ್ಟಾರ್ಟ್ ಅಪ್ ಆಗಿರುವ 'ಲಾಗ್ 9 ಮೆಟೀರಿಯಲ್ಸ್' ಎಲೆಕ್ಟ್ರಿಕ್ ವಾಹನಗಳಿಗೆ ವೇಗವಾಗಿ ಚಾರ್ಜಿಂಗ್ ಬ್ಯಾಟರಿ ತಂತ್ರಜ್ಞಾನವನ್ನು (ಬ್ಯಾಟರಿ) ಪರಿಚಯಿಸಿದೆ. ದ್ವಿಚಕ್ರ ಮತ್ತು ತ್ರಿಚಕ್ರ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳನ್ನು 15 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಸಾಮೂಹಿಕ ಪರಿಣತಿ ಮತ್ತು ಸೂಪರ್ ಕ್ಯಾಪಾಸಿಟರ್ ತಂತ್ರಜ್ಞಾನ (supercapacitor technology) ಮತ್ತು 'ಗ್ರ್ಯಾಫೀನ್' (Graphene) ಜ್ಞಾನದ ಆಧಾರದ ಮೇಲೆ 'ಲಾಗ್ 9' ತಂಡವು ಈ ಬ್ಯಾಟರಿಯನ್ನು ಅಭಿವೃದ್ಧಿಪಡಿಸಿದೆ ಎಂದು ಕಂಪನಿ ತಿಳಿಸಿದೆ. ಈ ನ್ಯಾನೊ ತಂತ್ರಜ್ಞಾನ ಕಂಪನಿ 'ಗ್ರ್ಯಾಫೀನ್' ನಲ್ಲಿ ಪರಿಣತಿ ಪಡೆದಿದೆ.
ಇದನ್ನೂ ಓದಿ - Petrol-Diesel ಬೆಲೆ ಚಿಂತೆ ಬಿಟ್ಟು ಎಲೆಕ್ಟ್ರಿಕ್ ವಾಹನ ಖರೀದಿಸಿ, ಎಷ್ಟು ಲಕ್ಷ ಸಬ್ಸಿಡಿ ಸಿಗುತ್ತೆ ಗೊತ್ತಾ?
ಈ ಬ್ಯಾಟರಿಗಳು ಕೇವಲ 15 ನಿಮಿಷಗಳಲ್ಲಿ ಚಾರ್ಜ್ ಆಗುವುದು ಮಾತ್ರವಲ್ಲ ಅವು 15 ವರ್ಷಗಳಿಗಿಂತ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತವೆ ಎಂದು ಕಂಪನಿ ತಿಳಿಸಿದೆ. ಜೊತೆಗೆ ಇದು ಪ್ರತಿ ಕಿಲೋಮೀಟರಿಗೆ ಬ್ಯಾಟರಿಯ (Battery) ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದೂ ಕೂಡ ಕಂಪನಿ ಮಾಹಿತಿ ನೀಡಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ರೂರ್ಕಿ (IIT-Roorkee) ಯಿಂದ ಪ್ರಾರಂಭವಾದ ಸ್ಟಾರ್ಟ್ ಅಪ್ ಕಂಪನಿಯು ಈ ಬ್ಯಾಟರಿ ಪ್ಯಾಕ್‌ಗಳನ್ನು ಮುಂದಿನ ಹಣಕಾಸು ವರ್ಷದ ಅಂತ್ಯದ ವೇಳೆಗೆ 3,000 ಕ್ಕೂ ಹೆಚ್ಚು ವಾಹನಗಳಲ್ಲಿ ನಿಯೋಜಿಸಲು ಯೋಜಿಸಿದೆ. 2022-23ರ ಹೊತ್ತಿಗೆ ಈ ಬ್ಯಾಟರಿಗಳನ್ನು 20,000 ಕ್ಕೂ ಹೆಚ್ಚು ವಾಹನಗಳಲ್ಲಿ ಅಳವಡಿಸಲಾಗುವುದು ಎಂದು ಹೇಳಲಾಗಿದೆ.
ಬ್ಯಾಟರಿ ಸ್ವತಃ ಚೇತರಿಸಿಕೊಳ್ಳುತ್ತದೆ :
ಎಲೆಕ್ಟ್ರಿಕ್ ವಾಹನಗಳಲ್ಲಿನ (Electric Vehicles) ಬ್ಯಾಟರಿಗಳಲ್ಲಿ ಲಿಥಿಯಂ-ಐಯಾನ್ ಇರುವವರೆಗೂ ನಿಮ್ಮ ವಾಹನವು ಯಾವುದೇ ತೊಂದರೆಯಿಲ್ಲದೆ ನಿಮಗೆ ಸಾರಥಿಯಾಗಿ ಕಾರ್ಯನಿರ್ವಹಿಸಲಿದೆ. ಆದರೆ ಇದ್ದಕ್ಕಿದ್ದಂತೆ ಬ್ಯಾಟರಿಯಲ್ಲಿ ಸಮಸ್ಯೆ ಇದ್ದಾಗ, ನಿಮ್ಮ ವಾಹನ ಅಲ್ಲಿಯೇ ನಿಲ್ಲುತ್ತದೆ. ನಿಸ್ಸಂಶಯವಾಗಿ, ನೀವು ಆಗ ಬ್ಯಾಟರಿಯನ್ನು ಸರಿಪಡಿಸಲು ಸೇವಾ ಕೇಂದ್ರಕ್ಕೆ ಹೋಗುತ್ತೀರಿ. ಆದರೆ ಈಗ ನಿಮಗೆ ಆ ತೊಂದರೆ ಎದುರಾಗುವುದಿಲ್ಲ. ನಿಮ್ಮ ಬ್ಯಾಟರಿಯಲ್ಲಿ ಏನೇ ಸಣ್ಣ ಪುಟ್ಟ ಸಮಸ್ಯೆ ಆದರೆ ಆ ಬಗ್ಗೆ ನೀವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅದು ಸ್ವತಃ ಚೇತರಿಸಿಕೊಳ್ಳುತ್ತದೆ. ಇದಕ್ಕಾಗಿ ನೀವು ಸೇವಾ ಕೇಂದ್ರಕ್ಕೆ ಬರಬೇಕಾಗಿಲ್ಲ.
ಇದನ್ನೂ ಓದಿ - Petrol-Diesel ಬಗ್ಗೆ ಮಹತ್ವದ ಸೂಚನೆ ನೀಡಿದ ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?
ವಾಸ್ತವವಾಗಿ, ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್ ಪ್ಯೂರ್ ಇವಿ (PURE EV) ನೆಕ್ಸ್ಟ್-ಜನ್ ಎಐ ಸಿಸ್ಟಮ್ (Next-Gen AI System) ಅನ್ನು ಅಭಿವೃದ್ಧಿಪಡಿಸಿದೆ, ಅದು ಬ್ಯಾಟರಿಯ ದೋಷವನ್ನು ಸ್ವಯಂಚಾಲಿತವಾಗಿ ಗುರುತಿಸುತ್ತದೆ ಮತ್ತು ಅದನ್ನು ಸ್ವಯಂಚಾಲಿತವಾಗಿ ಸರಿಪಡಿಸುತ್ತದೆ. ಇದಕ್ಕಾಗಿ ಕಂಪನಿಯು ಒಂದು ಸಾಧನವನ್ನು ಸಿದ್ದಪಡಿಸಿದೆ ಎಂದು ಹೇಳಿಕೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.