EPF Interest: ಕಡಿತವಾಗುತ್ತಾ ಇಪಿಎಫ್ ಬಡ್ಡಿ..! ಇಂದು ನಿರ್ಧಾರ
2020-21 ಹಣಕಾಸು ವರ್ಷಕ್ಕೆ ಅನ್ವಯವಾಗುವಂತೆ ಎಂಪ್ಲಾಯಿ ಪ್ರಾವಿಡೆಂಟ್ ಫಂಡ್ ಬಡ್ಡಿದರದಲ್ಲಿ ಮತ್ತೆ ಕಡಿತವಾಗಲಿದೆ. ವೇತನ ವರ್ಗದ 6 ಕೋಟಿ ಜನರಿಗೆ ಇದು ಶಾಕಿಂಗ್ ನ್ಯೂಸ್ ಆಗಿದೆ.
ನವದೆಹಲಿ: ಇನ್ನೊಂದು ಶಾಕ್ ಅನುಭವಿಸಲು ಈಗ 6 ಕೋಟಿ ಜನ ಸಿದ್ದರಿರಬೇಕಾಗಿದೆ. 6 ಕೋಟಿ ಜನರಿಗೆ ಆಘಾತ ನೀಡಲಿರುವ ನಿರ್ಧಾರವನ್ನು ಕೇಂದ್ರ ಸರ್ಕಾರ (Central Government) ಇಂದು ಕೈಗೊಳ್ಳಲಿದೆ.
ಕಡಿತವಾಗಲಿದೆ ಇಪಿಎಫ್ ಬಡ್ಡಿ:
20-21 ಹಣಕಾಸು ವರ್ಷಕ್ಕೆ ಅನ್ವಯವಾಗುವಂತೆ ಎಂಪ್ಲಾಯಿ ಪ್ರಾವಿಡೆಂಟ್ ಫಂಡ್ (EPF) ಬಡ್ಡಿದರದಲ್ಲಿ ಮತ್ತೆ ಕಡಿತವಾಗಲಿದೆ. ವೇತನ ವರ್ಗದ 6 ಕೋಟಿ ಜನರಿಗೆ ಇದು ಶಾಕಿಂಗ್ ನ್ಯೂಸ್ ಆಗಿದೆ. ಕಳೆದ ವರ್ಷ ಬಡ್ಡಿ (interest) ಸಿಗದೇ ಇರುವುದೇ ಚಿಂತೆ ಆಗಿತ್ತು. ಈ ಸಲ ಬಡ್ಡಿ ಕಡಿತಗೊಳ್ಳುವ ಸಾಧ್ಯತೆಗಳಿವೆ.
ಇದನ್ನೂ ಓದಿ : Post Office ಖಾತೆದಾರರಿಗೆ ಆಘಾತ! ಏಪ್ರಿಲ್ 1 ರಿಂದ ಅನ್ವಯವಾಗಲಿರುವ ಈ ನಿಯಮದ ಬಗ್ಗೆ ತಪ್ಪದೇ ತಿಳಿಯಿರಿ
ಇಂದು ಇಪಿಎಫ್ ಒ ಮೀಟಿಂಗ್:
ಲಭ್ಯ ಮಾಹಿತಿಗಳ ಪ್ರಕಾರ ಕರೋನಾ (Coronavirus)ಕಾಲದಲ್ಲಿ ಸಾಕಷ್ಟು ಜನ ಇಪಿಎಫ್ ದುಡ್ಡು ವಿತ್ ಡ್ರಾ ಮಾಡಿದ್ದರು. ಈ ಸಮಯದಲ್ಲಿ ಇಪಿಎಫ್ ಕಾಂಟ್ರಿಬ್ಯೂಶನ್ ಕೂಡಾ ಕಡಿಮೆ ಆಗಿತ್ತು. ಈ ಹಿನ್ನೆಲೆಯಲ್ಲಿ ಇಪಿಎಫ್ ಒ ಬಡ್ಡಿ ದರ ಕಡಿತ ನಿರ್ಧಾರಕ್ಕೆ ಬರಲಿದೆ ಎನ್ನಲಾಗಿದೆ. ಇವತ್ತು ಇಪಿಎಫ್ ಒ (EPFO) ಸೆಂಟ್ರಲ್ ಬೋರ್ಡ್ ಅಫ್ ಟ್ರಸ್ಟೀಸ್ ಮೀಟಿಂಗ್ (Central Board of Trustees) ನಡೆಯಲಿದೆ. ಈ ಸಭೆಯಲ್ಲಿ ಇಪಿಎಫ್ ಬಡ್ಡಿ ಎಷ್ಟು ಕಡಿತ ಮಾಡಬೇಕು ಎಂಬುದರ ನಿರ್ಣಯವಾಗಲಿದೆ.
2019-20ರ ವಿತ್ತೀಯ ವರ್ಷದಲ್ಲಿ ಇಪಿಎಫ್ ಗೆ ಶೇ. 8.5 ರಷ್ಟು ಬಡ್ಡಿ ನೀಡಲಾಗಿತ್ತು. ಎರಡು ಕಂತಿನಲ್ಲಿ ಈ ಬಡ್ಡಿ ಪಾವತಿಸಲು ನಿರ್ಧರಿಸಲಾಗಿತ್ತು. ಅಂದರೆ ಶೇ. 8.15 ಬಡ್ಡಿ ಇನ್ವೆಸ್ಟ್ ಮೆಂಟ್ ಮೇಲೆ ಮತ್ತು ಶೇ. 0.35 ಬಡ್ಡಿ ಇಕ್ವಿಟಿ ಮೇಲೆ ನೀಡಲು ನಿರ್ಧರಿಸಲಾಗಿತ್ತು.
ಇದನ್ನೂ ಓದಿ : Health Insurance : ಪಾಲಿಸಿ ಬಗ್ಗೆ ಪಾಲಿಸಿದಾರನಿಗೆ ಅಪ್ ಡೇಟ್ ಮಾಡುವುದು ವಿಮಾ ಕಂಪನಿಯ ಜವಾಬ್ದಾರಿ
7 ವರ್ಷಗಳ ಬಳಿಕ ಅತಿ ಕಡಿಮೆ ಬಡ್ಡಿ :
ವಿತ್ತ ವರ್ಷ 2020ರಲ್ಲಿ ಇಪಿಎಫ್ ಮೇಲೆ ಶೇ. 8.5 ರಷ್ಟು ಬಡ್ಡಿ ಸಿಗಲಿದೆ. ಇದು 7 ವರ್ಷಗಳ ನಂತರ ಸಿಗುವ ಅತ್ಯಂತ ಕಡಿಮೆ ಬಡ್ಡಿ ದರವಾಗಿದೆ (Interest rate) . 2013ರಲ್ಲಿ ಇಪಿಎಫ್ ಮೇಲೆ ಶೇ. 8.5 ರಷ್ಟು ಬಡ್ಡಿ ನೀಡಲಾಗುತಿತ್ತು. 2014 ನಲ್ಲಿ ಶೇ. 8.75, 2016ನಲ್ಲಿ ಶೇ. 8.8, 2018ನಲ್ಲಿ ಶೇ. 8.55, 2019 ನಲ್ಲಿ ಶೇ 8.55 ಬಡ್ಡಿ ನೀಡಲಾಗುತ್ತಿತ್ತು.
ಇಪಿಎಫ್ ನಲ್ಲಿ 6 ಕೋಟಿ ಜನ ಚಂದಾದಾರರಿದ್ದಾರೆ. 2020ರಲ್ಲಿ ಕೆವೈಸಿಯಲ್ಲಿ (KYC) ಹೆಚ್ಚುಕಡಿಮೆಯಾಗಿ ಬಡ್ಡಿ ನೀಡಿಕೆ ವಿಳಂಬವಾಗಿತ್ತು. ಇದೀಗ ಬಡ್ಡಿ ದರ ಮತ್ತೆ ಕಡಿಮೆಯಾಗುವ ಸಾಧ್ಯತೆಗಳಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.