ವಿದ್ಯಾರ್ಥಿಗಳ ಗಮನಕ್ಕೆ..! ಶಾಲಾ ಸಮಯದಲ್ಲಿ ಭಾರೀ ಬದಲಾವಣೆ, ಇಲ್ಲಿದೆ ಮಹತ್ವದ ಮಾಹಿತಿ..

School time change : ಚಳಿಗಾಲದಲ್ಲಿ ತಾಪಮಾನವು ಕುಸಿಯುತ್ತಿದೆ. ಇದರಿಂದ ತೆಲಂಗಾಣ ರಾಜ್ಯಾದ್ಯಂತ ಚಳಿಗಾಳಿ ಬೀಸುವ ಎಚ್ಚರಿಕೆ ಹವಾಮಾನ ಇಲಾಖೆ ನೀಡಿದೆ. ಅರಣ್ಯ ಪ್ರದೇಶವಾಗಿರುವ ಆದಿಲಾಬಾದ್ ಜಿಲ್ಲೆಯಲ್ಲಿ ತಾಪಮಾನ ಕನಿಷ್ಠ ಮಟ್ಟ ತಲುಪುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲೆಯ ಸಮಯ ಬದಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಮಹತ್ವದ ಘೋಷಣೆ ಮಾಡಿದ್ದಾರೆ.

1 /8

ಚಳಿಗಾಲದಲ್ಲಿ ತಾಪಮಾನವು ತೀವ್ರವಾಗಿ ಇಳಿಯುತ್ತದೆ. ಇದರಿಂದ ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ.  

2 /8

ತೆಲಂಗಾಣದ ಎಲ್ಲ ಜಿಲ್ಲೆಗಳಲ್ಲಿ ಅತಿ ಕಡಿಮೆ ತಾಪಮಾನ ದಾಖಲಾಗಿರುವುದರಿಂದ ಜನ ಭೀಕರ ಚಳಿಗೆ ನಡುಗುತ್ತಿದ್ದಾರೆ.  

3 /8

ಹೈದರಾಬಾದ್ ಸೇರಿದಂತೆ ಅರಣ್ಯ ಪ್ರದೇಶದ ಕುಮಾರಂ ಭೀಮ್ ಆಸಿಫಾಬಾದ್, ಆದಿಲಾಬಾದ್, ನಿರ್ಮಲ್ ಜಿಲ್ಲೆಗಳಲ್ಲಿ ಚಳಿಯಿಂದ ಜನರು ನಡುಗುತ್ತಿದ್ದಾರೆ. ಇದರ ಪರಿಣಾಮ ಕರ್ನಾಟಕದ ಗಡಿಗೂ ತಟ್ಟಬಹುದು.  

4 /8

ಆದಿಲಾಬಾದ್ ಜಿಲ್ಲೆಯಲ್ಲಿ ವಿಪರೀತ ಚಳಿಯಿಂದಾಗಿ ಶಾಲಾ ಸಮಯದಲ್ಲಿ ತೀವ್ರ ಬದಲಾವಣೆಯಾಗಿದೆ.  

5 /8

ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಕೆಲಸದ ವೇಳೆಯಲ್ಲಿ ಬದಲಾವಣೆ ಮಾಡಿ ಆದಿಲಾಬಾದ್ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.  

6 /8

ಶಾಲೆಯ ಕೆಲಸದ ಸಮಯವನ್ನು ಬೆಳಗ್ಗೆ 9.40ರಿಂದ ಸಂಜೆ 4.30ಕ್ಕೆ ಬದಲಾಯಿಸಲು ನಿರ್ಣಯ ಕೈಗೊಳ್ಳಲಾಯಿತು.  

7 /8

ಶಾಲೆಗಳ ಸಮಯವನ್ನು ಬದಲಿಸಿ ಆದಿಲಾಬಾದ್ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.  

8 /8

ಚಳಿಯ ತೀವ್ರತೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರು ಮುಂಜಾಗ್ರತೆ ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.