EPFO Good News: PF ಖಾತೆದಾರರಿಗೊಂದು ಸಂತಸದ ಸುದ್ದಿ, ಎರಡನೇ ಬಾರಿಗೆ ಈ ಅವಕಾಶ ಸಿಗುತ್ತಿದೆ
EPFO Covid-19 Non-Refundable Advance - EPFO ಹೊಸ ಕ್ಲೇಮ್ ಗಳ ಮರುಪಾವತಿಗಳನ್ನು ತಕ್ಷಣ ಮಾಡಲು ಸಿದ್ಧತೆ ನಡೆಸಿದೆ. ಚಂದಾದಾರರು ಅರ್ಜಿ ಸಲ್ಲಿಸಿದ ಮೂರೇ ದಿನಗಳಲ್ಲಿ ಅವರ ಖಾತೆಗೆ ಅವರ ಹಣ ವರ್ಗಾವಣೆಯಾಗಲಿದೆ.
ನವದೆಹಲಿ: EPFO Covid-19 Non-Refundable Advance - ಕೊವಿಡ್ -19 ಎರಡನೇ ಅಲೆಯಲ್ಲಿ ತನ್ನ ಚಂದಾದಾರರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನೌಕರರ ಭವಿಷ್ಯ ನಿಧಿ ಸಂಘಟನೆ ಹೊಸ ಘೋಷಣೆಯೊಂದನ್ನು ಮಾಡಿದೆ. ಹೌದು, ಇದೀಗ ನೀವು ಎರಡನೇ ಬಾರಿಗೆ ನಿಮ್ಮ PF ಖಾತೆಯಿಂದ ನಾನ್-ರಿಫಂಡೆಬಲ್ Covid-19 ಅಡ್ವಾನ್ಸ್ ನ (Non-Refundable Covid-19 Advance) ಲಾಭ ಪಡೆಯಬಹುದು. ಮಹಾಮಾರಿಯ ಕಾಲದಲ್ಲಿ ಜನರ ಆರ್ಥಿಕ ಅಗತ್ಯತೆಗಳನ್ನು ಪೂರೈಸಲು ಈ ಸ್ಪೆಷಲ್ ಕ್ಲಿಯರೆನ್ಸ್ ಸೌಕರ್ಯವನ್ನು ಮೊದಲ ಬಾರಿಗೆ ಮಾರ್ಚ್ 2020ರಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ (PMGKY) ಅಡಿ ಇದನ್ನು ಮಾಡಲಾಗಿತ್ತು.
ಕಳೆದ ವರ್ಷವೂ ಕೂಡ ಈ ಸೌಕರ್ಯ ನೀಡಲಾಗಿತ್ತು
ಇದೀಗ ಮತ್ತೊಮ್ಮೆ ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ಕೊರೊನಾ ವೈರಸ್ ನ ಎರಡನೇ ಅಲೆಯ (Covid-19 Second Wave) ನಡುವೆ ತನ್ನ ಚಂದಾದಾರರಿಗೆ ನೆಮ್ಮದಿ ನೀಡುವ ಮಹತ್ವದ ನಿರ್ಣಯ ಕೈಗೊಂಡಿದೆ. ಇದರ ಅಡಿ ಚಂದಾದಾರರು ಎರಡನೇ ಬಾರಿ ಕೂಡ ನಾನ್-ರೀಫಂಡೆಬಲ್ ಕೊವಿಡ್ -19 ಅಡ್ವಾನ್ಸ್ ಲಾಭ ಪಡೆಯಬಹುದು. ಕಳೆದ ವರ್ಷ ನೀಡಲಾಗಿರುವ ಇಂತಹ ಸೌಕರ್ಯದ ರೀತಿಯಲ್ಲೇ ಮತ್ತು ಅದೇ ನಿಯಮಗಳ ಅಡಿ, ನೌಕರರು ತಮ್ಮ ಪಿಎಫ್ ಖಾತೆಯಲ್ಲಿರುವ ಒಟ್ಟು ಮೊತ್ತದ ಶೇ.75 ರಷ್ಟು ಅಥವಾ ತಮ್ಮ ಮೂರು ತಿಂಗಳ ವೇತನ (ಬೇಸಿಕ್+DA)ಕ್ಕೆ ಸಮನಾದ ಮೊತ್ತವನ್ನು ಹಿಂಪಡೆಯಬಹುದು.
ಇದನ್ನೂ ಓದಿ- Work From Home ಬಳಿಕ ಇದೀಗ Work From Hotel ಆರಂಭಿಸಿದ ಜನ, ಏನಿದು WFH ಹೊಸ ಫಂಡಾ?
ಕೊರೊನಾ ಹಾಗೂ ಬ್ಲಾಕ್ ಫಂಗಸ್ ಹಿನ್ನೆಲೆ ಈ ನಿರ್ಧಾರ
ಈ ಕುರಿತು ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಕಳೆದ ವರ್ಷ ತಮ್ಮ PF ಖಾತೆಯಿಂದ ಅಡ್ವಾನ್ಸ್ ಪಡೆದ ಸದಸ್ಯರು ಈ ಬಾರಿ ಮತ್ತೊಮ್ಮೆ ಅಡ್ವಾನ್ಸ್ ಹಣವನ್ನು ಹಿಂಪಡೆಯಬಹುದು. ಕೊರೊನಾ ಸಂಕಷ್ಟದ (Corona Pandemic) ಜೊತೆಗೆ ಬ್ಲಾಕ್ ಫಂಗಸ್ (Black Fungus)ನ ಪ್ರಭಾವವನ್ನು ಪರಿಗಣಿಸಿ ಈ ಘೋಷಣೆ ಮಾಡಲಾಗಿದೆ ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ-Emergency Credit Line Guarantee ಯೋಜನೆಯ ವ್ಯಾಪ್ತಿ ವಿಸ್ತರಿಸಿದ ಕೇಂದ್ರ ಸರ್ಕಾರ
ಮೂರೇ ದಿನಗಳಲ್ಲಿ ಕ್ಲೇಮ್ ಪೂರ್ಣಗೊಳ್ಳಲಿದೆ
ಮಹಾಮಾರಿಯ ಕಾಲದಲ್ಲಿ ನೀಡಲಾಗಿದ್ದ ಕೋವಿಡ್ -19 ಮುಂಗಡ ಇಪಿಎಫ್ ಸದಸ್ಯರಿಗೆ ಹೆಚ್ಚಿನ ಸಹಾಯಒದಗಿಸಿದೆ. ಮಾಸಿಕ ವೇತನ 15,000 ರೂ.ಗಿಂತ ಕಡಿಮೆ ಇರುವ ಸದಸ್ಯರಿಗೆ, ಇದುವರೆಗೆ 76.31 ಲಕ್ಷ ಉದ್ಯೋಗಿಗಳು ಕೋವಿಡ್ -19 ಮರುಪಾವತಿಸಲಾಗದ ಮುಂಗಡ ಪಡೆದುಕೊಂಡಿದ್ದಾರೆ.. ಈ ಎಲ್ಲಾ ನೌಕರರು ಮುಂಗಡವಾಗಿ 18,698.15 ಕೋಟಿ ರೂ. ಹಣವನ್ನು ಪಡೆದುಕೊಂಡಿದ್ದಾರೆ. ಹೊಸ ಕ್ಲೇಮ್ ಗಳ ತಕ್ಷಣ ಪಾವತಿಗಾಗಿ EPFO ಸಿದ್ಧತೆ ಮಾಡಿಕೊಂಡಿದ್ದು ಚಂದಾದಾರರು ಅರ್ಜಿ ಸಲ್ಲಿಸಿದ ಮೂರೇ ದಿನಗಳಲ್ಲಿ ಅವರ ಖಾತೆಗೆ ಹಣ ಸೇರಲಿದೆ ಎಂದು ಹೇಳಿಕೊಂಡಿದೆ.
ಇದನ್ನೂ ಓದಿ-EPFO Big Decision: ಜೂನ್ 1 ರಿಂದ ನಿಮ್ಮ PF ಖಾತೆಗೆ ಹೊಸ ನಿಯಮ ಅನ್ವಯ, ಇಲ್ಲದಿದ್ದರೆ ಹಾನಿ ಸಾಧ್ಯತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ