Extremely Rare Notes: 5 ರೂ.ಗಳ ಈ ನೋಟು ನಿಮಗೆ ದೊಡ್ಡ ಆದಾಯ ನೀಡಲಿದೆ, ಇದರಲ್ಲಡಗಿವೆ ವಿಶೇಷ ಸಂಗತಿಗಳು

Extremely Rare Antique Category Notes - ಯಾರ ಬಳಿ ಈ ಐದು ರೂ.ಗಳ ಹಳೆ ನೋಟು ಇದೆಯೋ ಅವರು ಅದನ್ನು ಮಾರಾಟ ಮಾಡಿ ಸಾವಿರಾರು ರೂ. ಹಣ ಸಂಪಾದಿಸಬಹುದು. ಆದರೆ, ಅದಕ್ಕಾಗಿ ನಿಮ್ಮ ಬಳಿ ಇರುವ ನೋಟಿನಲ್ಲಿ ಕೆಲ ವಿಶೇಷ ಸಂಗತಿಗಳಿರಬೇಕು. ಈ ವಿಶೇಷ ಸಂಗತಿಗಳು ನಿಮಗೆ ನಿಮ್ಮ ಐದು ರೂಪಾಯಿ ನೋಟಿಗೆ 30 ಸಾವಿರ ರೂ. ಕೊಡಿಸಬಹುದು. 

Written by - Nitin Tabib | Last Updated : May 29, 2021, 08:17 PM IST
  • ಇಂತಹ 5 ರೂ. ನೋಟು ನಿಮ್ಮ ಬಳಿ ಇದೆಯೇ.
  • ಈ ನೋಟನ್ನು ಮಾರಾಟ ಮಾಡಿ ನೀವೂ ಕೂಡ ಸಾವಿರಾರು ರೂ. ಸಂಪಾದಿಸಬಹುದು.
  • ಹಾಗಾದರೆ ನಿಮ್ಮ ಬಳಿ ಇರುವ ನೋಟಿನಲ್ಲಿ ಯಾವ ವಿಶೇಷತೆಗಳಿರಬೇಕು ತಿಳಿಯೋಣ ಬನ್ನಿ
Extremely Rare Notes: 5 ರೂ.ಗಳ ಈ ನೋಟು ನಿಮಗೆ ದೊಡ್ಡ ಆದಾಯ ನೀಡಲಿದೆ, ಇದರಲ್ಲಡಗಿವೆ ವಿಶೇಷ ಸಂಗತಿಗಳು title=
Extremely Rare Antique Category Notes (File Photo)

ನವದೆಹಲಿ: Extremely Rare Antique Category Notes - ಕಾಲಗಳೇ ಗತಿಸಿದರೂ ಕೂಡ ಕೆಲವು ಜನರ ಹಳೆ ಸಂಗತಿಗಳು, ವಸ್ತುಗಳನ್ನು ಸಂಗ್ರಹಿಸಿಡುವ ಹವ್ಯಾಸ ಮಾತ್ರ ಇನ್ನೂ ಬದಲಾಗಿಲ್ಲ. ಇಂದಿಗೂ ಕೂಡ ಜನರಿಗೆ ಹಳೆ ನಾಣ್ಯಗಳು  (Old Coins Collection) ಹಾಗೂ ನೋಟುಗಳನ್ನು ಸಂಗ್ರಹಿಸಿಡುವ ಹವ್ಯಾಸವಿರುತ್ತದೆ. ಇಂತಹ ಜನರಿಗೆ ಇದು ಸಂತಸದ ಸುದ್ದಿಯಾಗಿದೆ. ಈ ಜನರು ತಮ್ಮ ಬಳಿ ಇರುವ 1, 2 ಹಾಗೂ 5 ರೂ.ಗಳ ನಾಣ್ಯ ಹಾಗೂ ನೋಟುಗಳ ಮೂಲಕ ಮಾಲಾಮಾಲ್ ಆಗಬಹುದು. ಹೌದು, ಕೆಲ ವಿಶೇಷ ಸಂಗತಿಗಳನ್ನು ಹೊಂದಿರುವ ನೋಟು (Rare Notes), ನಾಣ್ಯಗಳ (Old Coins) ಮಾರಾಟ ಮಾಡಿ ನೀವೂ ಕೂಡ ಸಾವಿರಾರು ಅಥವಾ ಲಕ್ಷಾಂತರ ಹಣ ಸಂಗ್ರಹಿಸಬಹುದು.

ಕೇವಲ 5 ರೂ.ಗಳಿಂದ ನಿಮ್ಮ ಭಾಗ್ಯ ಬದಲಾಗಬಹುದು
ಹಲವು ಜನರಿಗೆ ಆಂಟಿಕ್ ವಸ್ತುಗಳನ್ನು (Antique Collection) ಸಂಗ್ರಹಿಸಿ ಇಡುವ ಹವ್ಯಾಸ ಇರುತ್ತದೆ ಮತ್ತು ಅವು ಜೀವನಪೂರ್ತಿ ಅವುಗಳಿಗೆ ಬೆಲೆ ಕೊಡುತ್ತಾರೆ. ಹೀಗಾಗಿ ಅವರು ಹಳೆ ನೋಟುಗಳನ್ನು ಹಾಗೂ ನಾಣ್ಯಗಳನ್ನು ಆಂಟಿಕ್ (Antique Coins) ಕೆಟಗರಿಗೆ ಸೇರಿಸಿರುತ್ತಾರೆ. ನಮ್ಮ ಅಂಗ ಸಂಸ್ಥೆಯಾಗಿರುವ ಝೀ ನ್ಯೂಸ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ. ಯಾರ ಬಳಿ ಈ ಐದು ರೂ.ಗಳ ಹಳೆ ನೋಟು  (5 Rupee Rare Note) ಇದೆಯೋ ಅವರು ಅದನ್ನು ಮಾರಾಟ ಮಾಡಿ ಸಾವಿರಾರು ರೂ. ಹಣ ಸಂಪಾದಿಸಬಹುದು. ಆದರೆ, ಅದಕ್ಕಾಗಿ ನಿಮ್ಮ ಬಳಿ ಇರುವ ನೋಟಿನಲ್ಲಿ ಕೆಲ ವಿಶೇಷ ಸಂಗತಿಗಳಿರಬೇಕು. ಈ ವಿಶೇಷ ಸಂಗತಿಗಳು ನಿಮಗೆ ನಿಮ್ಮ ಐದು ರೂಪಾಯಿ  (5 Rupee Note) ನೋಟಿಗೆ 30 ಸಾವಿರ ರೂ. ಕೊಡಿಸಬಹುದು. 

ಇದನ್ನೂ ಓದಿ-EPFO Big Decision: ಜೂನ್ 1 ರಿಂದ ನಿಮ್ಮ PF ಖಾತೆಗೆ ಹೊಸ ನಿಯಮ ಅನ್ವಯ, ಇಲ್ಲದಿದ್ದರೆ ಹಾನಿ ಸಾಧ್ಯತೆ

ಈ ಸಂಗತಿಗಳನ್ನು ನೆನಪಿನಲ್ಲಿಡಿ
30 ಸಾವಿರ ರೂ.ಗಳನ್ನು ಸಂಪಾದಿಸಲು ನಿಮ್ಮ ಬಳಿ ಇರುವ ಐದು ರೂ.ಗಳ ನೋಟಿನಲ್ಲಿ ಟ್ರ್ಯಾಕ್ಟರ್ (Tractor) ಇರಬೇಕು. ಜೊತೆಗೆ ಅದರಲ್ಲಿ 786 ಬರೆದಿರಬೇಕು. ಈ ನೋಟನ್ನು ಆಂಟಿಕ್   (Antique Category)ಕೆಟಗರಿಯಲ್ಲಿ ತುಂಬಾ ರೆಯರ್ ಎಂದು ಹೇಳಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (Reserve bank Of India) ಈ ನೋಟಿಗೆ ಎಕ್ಷಟ್ರೀಮ್ಲಿ ರೆಯರ್ (Extremely Rare Notes) ಮಾನ್ಯತೆ ದೊರೆತಿದೆ. ಕೊವಿಡ್-19 (Coronavirus) ಕಾರಣ ವಿಧಿಸಲಾಗಿರುವ ಲಾಕ್ ಡೌನ್ (Lockdown) ನಲ್ಲಿ ಹಣ ಗಳಿಕೆಗೆ ಜನರ ಬಳಿ ಇದೊಂದು ಉತ್ತಮ ಆಪ್ಶನ್ ಆಗಿದೆ.

ಇದನ್ನೂ ಓದಿ- Gold-Silver Rate : ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ; ಇಲ್ಲಿದೆ 10 ಗ್ರಾಂ ಬಂಗಾರದ ಬೆಲೆ!

ಮನೆಯಲ್ಲಿಯೇ ಕುಳಿತು ಸಾವಿರಾರು ರೂ. ಸಂಪಾದಿಸಿ
ಈ ರೀತಿಯ ಐದು ರೂಪಾಯಿ ನೋಟು (5 rupee note sale) ಒಂದು ವೇಳೆ ನಿಮ್ಮ ಬಳಿಯೂ ಇದ್ದರೆ, ನೀವೂ ಕೂಡ ಮನೆಯಲ್ಲಿಯೇ ಕುಳಿತು ಸಾವಿರಾರು ರೂಪಾಯಿ ಸಂಪಾದನೆ ಮಾಡಬಹುದು. ನೀವು ಅದನ್ನು ಆನ್ಲೈನ್ ನಲ್ಲಿಯೂ ಕೂಡ ಮಾರಾಟ ಮಾಡಬಹುದು. ನಿಮ್ಮ ಈ ನೋಟನ್ನು ಮಾರಾಟ ಮಾಡಲು ನೀವು coinbazzar.com ವೆಬ್ ತಾಣಕ್ಕೆ ಭೇಟಿ ನೀಡಬಹುದು. ಅಲ್ಲಿ ನೀವು Online Seller ಆಗಿ ನಿಮ್ಮ ಹೆಸರನ್ನು ನೋಂದಣಿ ಮಾಡಬಹುದು. ಬಳಿಕ ನಿಮ್ಮ ಬಳಿ ಇರುವ ನೋಟಿನ ಫೋಟೋ ಕ್ಲಿಕ್ಕಿಸಿ ಅದನ್ನು ಅಪ್ಲೋಡ್ ಮಾಡಿ ಸೆಲ್ ಮಾಡಬಹುದು. ಈ ಪ್ರೋಸೆಸ್ ಬಳಿಕ ಆಸಕ್ತಿವುಳ್ಳ ಜನರು ನಿಮ್ಮನ್ನು ಸಂಪರ್ಕಿಸಲಿದ್ದಾರೆ ಹಾಗೂ ಆ ನೋಟನ್ನು ನೀವು ಅವರಿಗೆ ಮಾರಾಟ ಮಾಡಬಹುದು.

ಇದನ್ನೂ ಓದಿ-Big News: ಶೀಘ್ರದಲ್ಲಿಯೇ ರೂ.100ರ ಹೊಸ ನೋಟು ಬಿಡುಗಡೆ, ನೆನೆಯುವುದಿಲ್ಲ-ಹರಿಯುವುದಿಲ್ಲ ಎಂದ RBI

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News