EPFO: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಅಂದರೆ ಇಪಿಎಫ್‌ಒ (ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್) (EPFO) ಯುಎಎನ್ (UAN) ಖಾತೆಯನ್ನು ಇನ್ನೂ ಸಕ್ರಿಯಗೊಳಿಸದ ಎಲ್ಲಾ ಉದ್ಯೋಗಿಗಳಿಗೆ ಡೆಡ್‌ಲೈನ್‌ ನೀಡಿದೆ. ಎಲ್ಲಾ ಉದ್ಯೋಗಿಗಳು ತಮ್ಮ ಯೂನಿವರ್ಸಲ್ ಅಕೌಂಟ್ ನಂಬರ್ (UAN) ಅನ್ನು ಸಕ್ರಿಯಗೊಳಿಸಬೇಕು ಮತ್ತು ಬ್ಯಾಂಕ್ ಖಾತೆಗಳೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬೇಕು ಎಂದು EPFO ​​ಸೂಚಿಸಿದೆ. ಈ ಕೆಲಸವನ್ನು ನವೆಂಬರ್ 30, 2024 ರೊಳಗೆ ಅಂದರೆ ಇಂದೇ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಡಿ.1ರಂದು ಮಾರ್ಗಶೀರ್ಷ ಅಮಾವಾಸ್ಯೆ ದಿನ ರೂಪುಗೊಳ್ಳುವ ಶುಭ ಯೋಗ; ಈ 4 ರಾಶಿಯವರಿಗೆ ಇಡೀ ತಿಂಗಳು ಲಾಭದಾಯಕ!


ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024ರ ಸಾಮಾನ್ಯ ಬಜೆಜ್‌ನಲ್ಲಿ ಮೂರು ELI ಯೋಜನೆಗಳನ್ನು (A, B ಮತ್ತು C) ಪ್ರಾರಂಭಿಸಿದ್ದರು. ELI (Equity-Linked Investment) ಪ್ರಯೋಜನಗಳನ್ನು DBT ಮೂಲಕ ನೀಡಲಾಗುವುದರಿಂದ, ಎಲ್ಲಾ ಉದ್ಯೋಗದಾತರು UAN ಸಕ್ರಿಯಗೊಳಿಸುವಿಕೆ ಮತ್ತು ಎಲ್ಲಾ ಹೊಸ ಎಂಟ್ರಿಯವರಿಗೆ ಆಧಾರ್ ಸೀಡಿಂಗ್ ಅನ್ನು ಖಚಿತಪಡಿಸಿಕೊಳ್ಳಲು ವಿನಂತಿಸಲಾಗಿದೆ. 30 ನವೆಂಬರ್ 2024 ರೊಳಗೆ ಕಂಪನಿಗೆ ಸೇರ್ಪಡೆಗೊಂಡ ಪ್ರತಿ  ಉದ್ಯೋಗಿಗಳನ್ನು ಈ ನಿಯಮ ಅನ್ವಯಿಸುತ್ತದೆ.


ನವೆಂಬರ್ 21, 2024 ರಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು, "ಉದ್ಯೋಗದಾತರು ತಮ್ಮ ಎಲ್ಲಾ ಉದ್ಯೋಗಿಗಳಿಗೆ ಪ್ರಸ್ತುತ ಹಣಕಾಸು ವರ್ಷದಲ್ಲಿ ನವೆಂಬರ್ 30, 2024 ರೊಳಗೆ ಆಧಾರ್ ಆಧಾರಿತ OTP ಮೂಲಕ UAN ಸಕ್ರಿಯಗೊಳಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು" ಎಂದು ಸುತ್ತೋಲೆ ಹೊರಡಿಸಿತ್ತು.


ELI ಯೋಜನೆಯು ಔಪಚಾರಿಕ ವಲಯದ ಉದ್ಯೋಗವನ್ನು ಉತ್ತೇಜಿಸಲು ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ಸರ್ಕಾರದ ಉಪಕ್ರಮವಾಗಿದೆ. ಈ ಯೋಜನೆಯ ಅಡಿಯಲ್ಲಿ ಮೂರು ವಿಭಾಗಗಳಿದ್ದು, ಅವುಗಳನ್ನು ಸ್ಕೀಮ್ ಎ, ಸ್ಕೀಮ್ ಬಿ ಮತ್ತು ಸ್ಕೀಮ್ ಸಿ ಎಂದು ವಿಂಗಡಿಸಲಾಗಿದೆ


ಈ ಹಿಂದೆ ಹೊರಡಿಸಲಾದ ಸುತ್ತೋಲೆಯಲ್ಲಿ,"ಇಪಿಎಫ್‌ಒನ ಪ್ರತಿಯೊಬ್ಬ ಚಂದಾದಾರರು ಆಧಾರ್-ಲಿಂಕ್ಡ್ ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಹೊಂದಿರಬೇಕು. ಈ ಸಂಖ್ಯೆಯನ್ನು ಪಡೆದ ನಂತರ, ಸದಸ್ಯರು ಲಾಗ್ ಇನ್ ಮಾಡುವ ಮೂಲಕ ಅದನ್ನು ಸಕ್ರಿಯಗೊಳಿಸಬೇಕಾಗುತ್ತದೆ. EPFO ಪೋರ್ಟಲ್‌ನಲ್ಲಿ ಈ ಪ್ರಕ್ರಿಯೆಯು ತುಂಬಾ ಸರಳವಾಗಿದ್ದು, ಆಧಾರ್ ಆಧಾರಿತ OTP ಬಳಸಿ ಪೂರ್ಣಗೊಳಿಸಬಹುದು" ಎಂದು ಉಲ್ಲೇಖಿಸಲಾಗಿದೆ.


ಇದನ್ನೂ ಓದಿ: ಇನ್ಸ್ಟಾಗ್ರಾಮ್ ನಲ್ಲಿ ವಿಜಯ್ ಸೇತುಪತಿ ಫಾಲೋ ಮಾಡುತ್ತಿರುವ ಏಕೈಕ ನಟಿ ಯಾರು? ಈ ಬ್ಯೂಟಿ ಬಗ್ಗೆ ನಿಮಗೂ ಗೊತ್ತು!!


ಮೊದಲಿಗೆ ನೀವು EPFO ​​ಪೋರ್ಟಲ್ https://unifiedportal-mem.epfindia.gov.in/memberinterface/ ಗೆ ಹೋಗಬೇಕು. ಇಲ್ಲಿ ನೀವು ಪ್ರಮುಖ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವ ಮೂಲಕ UAN ಅನ್ನು ಸಕ್ರಿಯಗೊಳಿಸಬೇಕಾಗುತ್ತದೆ. ಇದಕ್ಕಾಗಿ ನೀವು ನಿಮ್ಮ UAN ಸಂಖ್ಯೆ, ಆಧಾರ್ ಸಂಖ್ಯೆ, ಜನ್ಮ ದಿನಾಂಕ ಮತ್ತು ಆಧಾರ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಇದಕ್ಕಾಗಿ ಉದ್ಯೋಗಿಯ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ಲಿಂಕ್ ಮಾಡುವುದು ಅವಶ್ಯಕ. ಇದರ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. OTP ಅನ್ನು ಪರಿಶೀಲಿಸಿದ ನಂತರ ನೀವು ನಿಮ್ಮ ಪಾಸ್‌ವರ್ಡ್ ಅನ್ನು ಸೆಟ್‌ ಮಾಡಬೇಕು. ನಂತರ ನೀವು ಈ ಪಿನ್ ಸಹಾಯದಿಂದ ಒಮ್ಮೆ ಲಾಗಿನ್ ಮಾಡಿ ಪರಿಶೀಲಿಸಬಹುದು. ಲಾಗಿನ್ ಆಗುತ್ತಿದ್ದರೆ ನಿಮ್ಮ UAN ಸಂಖ್ಯೆಯನ್ನು ಸಕ್ರಿಯಗೊಳಿಸಲಾಗಿದೆ ಎಂದರ್ಥ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.