EPFO ಸದಸ್ಯರಿಗೆ ಉಚಿತವಾಗಿ ಸಿಗುತ್ತದೆ ಈ ಸೌಲಭ್ಯ, ಆದರೆ ನಿಯಮ ಗೊತ್ತಿರಲಿ!
EPFO ತನ್ನ ಎಲ್ಲಾ ಸದಸ್ಯರಿಗೆ ಜೀವ ವಿಮಾ ಸೌಲಭ್ಯವನ್ನು ಒದಗಿಸುತ್ತದೆ. ಈ ಸೌಲಭ್ಯದ ಅಡಿಯಲ್ಲಿ, ಪ್ರತಿಯೊಬ್ಬ ಇಪಿಎಫ್‌ಒ ಸದಸ್ಯರು ಗರಿಷ್ಠ 7 ಲಕ್ಷ ರೂ.ವರೆಗಿನ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ. EPFO ಯ ಈ ವಿಮಾ ಯೋಜನೆಯನ್ನು ಎಂಪ್ಪಾಯಿಜ್ ಡೆಪಾಸೀಟ್ ಲಿಂಕ್ಡ್ ಇನ್ಸೂರೆನ್ಸ್ (EDLI) ಎಂದು ಕರೆಯಲಾಗುತ್ತದೆ. ಯೋಜನೆಗೆ ಸಂಬಂಧಿಸಿದ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.
EPFO ತನ್ನ ಎಲ್ಲಾ ಸದಸ್ಯರಿಗೆ ಜೀವ ವಿಮಾ ಸೌಲಭ್ಯವನ್ನು ಒದಗಿಸುತ್ತದೆ. ಈ ಸೌಲಭ್ಯದ ಅಡಿಯಲ್ಲಿ, ಪ್ರತಿಯೊಬ್ಬ ಇಪಿಎಫ್‌ಒ ಸದಸ್ಯರು ಗರಿಷ್ಠ 7 ಲಕ್ಷ ರೂ.ವರೆಗಿನ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ. EPFO ಯ ಈ ವಿಮಾ ಯೋಜನೆಯನ್ನು ಎಂಪ್ಪಾಯಿಜ್ ಡೆಪಾಸೀಟ್ ಲಿಂಕ್ಡ್ ಇನ್ಸೂರೆನ್ಸ್ (EDLI) ಎಂದು ಕರೆಯಲಾಗುತ್ತದೆ. ಯೋಜನೆಗೆ ಸಂಬಂಧಿಸಿದ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.
EDLI ಯೋಜನೆ ಅಂದರೆ ಏನು?
EDLI ಯೋಜನೆಯನ್ನು 1976 ರಲ್ಲಿ EPFO ನಿಂದ ಪ್ರಾರಂಭಿಸಲಾಗಿದೆ. ಯಾವುದೇ ಕಾರಣದಿಂದ ಇಪಿಎಫ್‌ಒ ಸದಸ್ಯರು ಮೃತಪಟ್ಟರೆ, ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ. ಈ ವಿಮಾ ರಕ್ಷಣೆಯನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ. EDLI ಯೋಜನೆಗೆ ಕೊಡುಗೆಯನ್ನು ಕಂಪನಿ ನೀಡುತ್ತದೆ.
ಮೊತ್ತವನ್ನು ಹೇಗೆ ನಿರ್ಧರಿಸಲಾಗುತ್ತದೆ?
ವಿಮಾ ಮೊತ್ತವು ಕಳೆದ 12 ತಿಂಗಳ ಮೂಲ ವೇತನ ಮತ್ತು ಡಿಎ ಮೇಲೆ ಅವಲಂಬಿತವಾಗಿರುತ್ತದೆ. ವಿಮಾ ರಕ್ಷಣೆಯ ಕ್ಲೈಮ್ ಕೊನೆಯ ಮೂಲ ವೇತನ + ಡಿಎಗಿಂತ 35 ಪಟ್ಟು ಇರುತ್ತದೆ. ಇದಲ್ಲದೆ, ಹಕ್ಕುದಾರರಿಗೆ 1,75,000 ರೂ.ವರೆಗಿನ ಬೋನಸ್ ಮೊತ್ತವನ್ನು ಸಹ ಪಾವತಿಸಲಾಗುತ್ತದೆ.
ನೀವು ಉದ್ಯೋಗದಲ್ಲಿರುವವರೆಗೆ ವಿಮಾ ರಕ್ಷಣೆ
EPFO ಸದಸ್ಯರು ಉದ್ಯೋಗದಲ್ಲಿರುವವರೆಗೆ ಮಾತ್ರ EDLI ಯೋಜನೆಗೆ ಒಳಪಡುತ್ತಾರೆ. ಕೆಲಸವನ್ನು ತೊರೆದ ನಂತರ, ಅವರ ಕುಟುಂಬ/ಉತ್ತರಾಧಿಕಾರಿಗಳು/ನಾಮನಿರ್ದೇಶಿತರು ಅದನ್ನು ಕ್ಲೈಮ್ ಮಾಡಲು ಸಾಧ್ಯವಿಲ್ಲ. ಇಪಿಎಫ್‌ಒ ಸದಸ್ಯರು 12 ತಿಂಗಳ ಕಾಲ ನಿರಂತರವಾಗಿ ಕೆಲಸ ಮಾಡುತ್ತಿದ್ದರೆ, ಉದ್ಯೋಗಿಯ ಮರಣದ ನಂತರ, ನಾಮಿನಿಗೆ ಕನಿಷ್ಠ 2.5 ಲಕ್ಷ ರೂ. ಸಿಗುಗುತ್ತದೆ
ಇದನ್ನೂ ಓದಿ-FD ಹೂಡಿಕೆ ಮಾಡುವವರಿಗೊಂದು ಗುಡ್ ನ್ಯೂಸ್, ಈ ಬ್ಯಾಂಕ್ ಗಳಲ್ಲಿ PPF-SSY ಗಿಂತ ಹೆಚ್ಚು ಬಡ್ಡಿ ಸಿಗುತ್ತಿದೆ!
ಯಾವುದೇ ನಾಮನಿರ್ದೇಶನವಿಲ್ಲದಿದ್ದರೆ ಯಾರು ಅರ್ಹರಾಗಿರುತ್ತಾರೆ
ಕೆಲಸ ಮಾಡುವಾಗ ಉದ್ಯೋಗಿ ಅನಾರೋಗ್ಯ, ಅಪಘಾತ ಅಥವಾ ಸ್ವಾಭಾವಿಕ ಮರಣದ ಸಂದರ್ಭದಲ್ಲಿ EDLI ಅನ್ನು ಕ್ಲೈಮ್ ಮಾಡಬಹುದು. EDLI ಯೋಜನೆಯಡಿಯಲ್ಲಿ ಯಾವುದೇ ನಾಮನಿರ್ದೇಶನವಿಲ್ಲದಿದ್ದರೆ, ಮೃತ ಉದ್ಯೋಗಿಯ ಸಂಗಾತಿಯ, ಅವಿವಾಹಿತ ಹೆಣ್ಣುಮಕ್ಕಳು ಮತ್ತು ಅಪ್ರಾಪ್ತ ಪುತ್ರ/ಪುತ್ರಿಯರನ್ನು ನಾಮನಿರ್ದೇಶಿತರು ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ-Best Budget Bikes: 80Kmpl ಗೂ ಅಧಿಕ ಮೈಲೆಜ್ ನೀಡುವ ಬೆಸ್ಟ್ ಬಜೆಟ್ ಬೈಕ್ಸ್ ಇಲ್ಲಿವೆ!
ಕ್ಲೇಮ್ ಹೇಗೆ ಮಾಡಬೇಕು
ಇಪಿಎಫ್ ಚಂದಾದಾರರು ಅಕಾಲಿಕ ಮರಣ ಹೊಂದಿದರೆ, ಅವರ ನಾಮಿನಿ ಅಥವಾ ಕಾನೂನು ಉತ್ತರಾಧಿಕಾರಿ ವಿಮಾ ರಕ್ಷಣೆಗಾಗಿ ಕ್ಲೈಮ್ ಮಾಡಬಹುದು. ಇದಕ್ಕಾಗಿ, ನಾಮಿನಿಯ ವಯಸ್ಸು ಕನಿಷ್ಠ 18 ವರ್ಷಗಳಾಗಿರಬೇಕು. ಇದಕ್ಕಿಂತ ಕಡಿಮೆ ಇದ್ದರೆ, ಪೋಷಕರು ಅವರ ಪರವಾಗಿ ಹಕ್ಕು ಸಲ್ಲಿಸಬಹುದು. ಕ್ಲೈಮ್ ಮಾಡುವಾಗ, ಮರಣ ಪ್ರಮಾಣಪತ್ರ, ಉತ್ತರಾಧಿಕಾರ ಪ್ರಮಾಣಪತ್ರದಂತಹ ದಾಖಲೆಗಳು ಅವಶ್ಯಕತೆ ಬೀಳುತ್ತದೆ. ಅಪ್ರಾಪ್ತ ವಯಸ್ಕರ ಪೋಷಕರ ಪರವಾಗಿ ಕ್ಲೈಮ್ ಮಾಡಿದ್ದರೆ, ರಕ್ಷಕತ್ವ ಪ್ರಮಾಣಪತ್ರ ಮತ್ತು ಬ್ಯಾಂಕ್ ವಿವರಗಳನ್ನು ನೀಡಬೇಕಾಗುತ್ತದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.