ನವದೆಹಲಿ: EPFO New Guidelines: PF ಖಾತೆಯಲ್ಲಿ ಏನಾದರು ಬದಲಾವಣೆ ಮಾಡಬೇಕೆಂದರೆ ಆನ್ಲೈನ್ ನಲ್ಲಿಯೇ ಅದನ್ನು ಮಾಡುವ ಅವಕಾಶವನ್ನು EPFO ಈ ಮೊದಲು ನೀಡಿತ್ತು. ಇದಕ್ಕಾಗಿ  ಕಚೇರಿಗೆ ಅಲೆಯಬೇಕಾಗಿರಲಿಲ್ಲ.ಪಿಎಫ್ ಖಾತೆಯಲ್ಲಿ, ಖಾತೆದಾರರ ಹೆಸರು, ತಂದೆಯ ಹೆಸರು ಮತ್ತು ಹುಟ್ಟಿದ ದಿನಾಂಕದಂತಹ ಮಾಹಿತಿಗಳು ತಪ್ಪಾಗಿದ್ದರೆ ಅದನ್ನು ಸುಲಭವಾಗಿ ಸರಿಪಡಿಸಬಹುದಾಗಿತ್ತು. ಆದರೆ ಇನ್ನು ಮುಂದೆ ಇದು ಸಾಧ್ಯವಿಲ್ಲ. 


COMMERCIAL BREAK
SCROLL TO CONTINUE READING

EPFO  ಹೊರಡಿಸಿದೆ ಹೊಸ ಮಾರ್ಗಸೂಚಿ :
EPFO ಹೊಸ ಮಾರ್ಗಸೂಚಿಗಳನ್ನೂ ಹೊರಡಿಸಿದೆ. ಇದರ ಪ್ರಕಾರ ಇನ್ನು ಮುಂದೆ ಖಾತೆಯಲ್ಲಿ ಏನಾದರು ತಪ್ಪಾಗಿದ್ದರೆ ಸುಲಭವಾಗಿ ಅದನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ .  ಫ್ರಾಡ್ ಆಗುವುದರಿಂದ ಬಚಾವಾಗುವ ಉದ್ದೇಶದಿಂದ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಗೊಳಿಸಲಾಗಿದೆ. ಈ ಮೊದಲು  PF ಖಾತೆಯಲ್ಲಿ ಖಾತೆದಾರರ ಹೆಸರು, ತಂದೆಯ ಹೆಸರು, ಗಂಡನ ಹೆಸರು, ಹುಟ್ಟಿದ ದಿನಾಂಕ ಮತ್ತು ಲಿಂಗ ಮುಂತಾದವುಗಳಲ್ಲಿ ತಪ್ಪಾಗಿದ್ದರೆ, ಅದನ್ನು ಸುಲಭವಾಗಿ ಸರಿಪಡಿಸಿಕೊಳ್ಳಬಹುದಾಗಿತ್ತು.  ಆದರೆ ಹೊಸ ಮಾರ್ಗ ಸೂಚಿ (New Guidelines) ಪ್ರಕಾರ ಖಾತೆದಾರರ ಪ್ರೊಫೈಲ್‌ನಲ್ಲಿ ಕೆಲವು ಆಯ್ದ ಬದಲಾವಣೆಗಳನ್ನು, ಮಾತ್ರ ಮಾದಬಹುದಾಗಿದೆ. 


ಇದನ್ನೂ ಓದಿ : Packaged Water New Rule: ಇನ್ಮುಂದೆ ಮಾರುಕಟ್ಟೆಯಲ್ಲಿ ಇಂತಹ ನೀರಿನ ಬಾಟಲಿಗಳ ಮಾರಾಟ ಇಲ್ಲ, FSSAI ನಿಂದ ನೂತನ ನಿಯಮ ಜಾರಿ


ಈಗ ಪಿಎಫ್‌ನಲ್ಲಿ ಹೆಸರು, ಹುಟ್ಟಿದ ದಿನಾಂಕವನ್ನು ಬದಲಾಯಿಸುವುದು ಕಷ್ಟ:
ಸಾಮಾನ್ಯ ಸಂದರ್ಭಗಳಲ್ಲಿ ಸದಸ್ಯರ ಸಂಪೂರ್ಣ ಪ್ರೊಫೈಲ್ (Profile) ಅನ್ನು ಬದಲಾಯಿಸಲು ಅನುಮತಿ ನೀಡಲಾಗುವುದಿಲ್ಲ. ಹೊಸ  ಮಾರ್ಗಸೂಚಿಗಳ ಅಡಿಯಲ್ಲಿ,  ಪಿಎಫ್ ಖಾತೆಯ ಪ್ರೊಫೈಲ್‌ನಲ್ಲಿ ಹೆಸರನ್ನು ಬದಲಾಯಿಸಲು  ಸಾಧ್ಯವಾಗುವುದಿಲ್ಲ. ಅನೇಕ ಬಾರಿ ಜನರು ತಮ್ಮ ಹೆಸರಿನ ಕಾಗುಣಿತವನ್ನು ತಪ್ಪಾಗಿ ಬರೆದಿರುತ್ತಾರೆ. ಈ ಕಾರಣದಿಂದಾಗಿ ಪಿಎಫ್ ಖಾತೆಯಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. 


ಅಗತ್ಯ ದಾಖಲೆಗಳನ್ನು ಪಿಎಫ್ ಕಚೇರಿಗೆ ಸಲ್ಲಿಸಬೇಕು :  
ಈಗ ಆನ್‌ಲೈನ್ (Online) ಪೋರ್ಟಲ್ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲಾಗುವುದಿಲ್ಲ. ಇದಕ್ಕಾಗಿ ನೀವು ಅಗತ್ಯ ದಾಖಲೆಗಳೊಂದಿಗೆ ಇಪಿಎಫ್‌ಒ ಕಚೇರಿಗೆ ಹೋಗಬೇಕಾಗುತ್ತದೆ. ಏನೇ ಬದಲಾವಣೆ ಮಾಡ್ಬೇಕಿದ್ದರೂ ಅಗತ್ಯ ದಾಖಲೆ ಸಲ್ಲಿಸಬೇಕಾಗುತ್ತದೆ. ನೀವು ಸಲ್ಲಿಸುವ ದಾಖಲೆಗಳು ಸರಿಯಾಗಿದರೆ ಮಾತ್ರ ಖಾತೆಯಲ್ಲಿರುವ ತಪ್ಪುಗಳನು ಸರಿಪಡಿಸಿಕೊಳ್ಳಬಹುದು. 


ಇದನ್ನೂ ಓದಿ :Holi Discounts & Offers : ಈ ಉತ್ಪನ್ನಗಳ ಮೇಲೆ ಸಿಗಲಿದೆ 80% ವರೆಗೆ ರಿಯಾಯಿತಿ


ಆದರೆ , ಸರ್ ನೇಮ್ ನಲ್ಲಿ  (surname) ಏನಾದರು ಬದಲಾವಣೆಯಿದ್ದರೆ ಅದನ್ನು ಬದಲಿಸಿಕೊಳ್ಳಬಹುದು. ಅಂದರೆ, ಮದುವೆಯ ನಂತರ, ಮಹಿಳೆಯರ  ಸರ್ ನೇಮ್  ಬದಲಾಯಿಸಿಕೊಳ್ಳಬೇಕಾದರೆ ಮೊದಲು ಆಧಾರ್ ಕಾರ್ಡ್‌ನಲ್ಲಿ (Aadhaar) ಹೆಸರನ್ನು ಬದಲಾಯಿಸಬೇಕು. ಇದರ ನಂತರ ಪಿಎಫ್ ಖಾತೆಯಲ್ಲಿಯೂ ಸುಲಭವಾಗಿ ಸರ್ ನೇಮ್  ಬದಲಿಸಿಕೊಳ್ಳಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.