ನವದೆಹಲಿ: Packaged Water New Rule - ಇನ್ಮುಂದೆ ಮಾರುಕಟ್ಟೆಯಲ್ಲಿ BIS ಮಾರ್ಕ್ ಇಲ್ಲದ ನೀರಿನ ಬಾಟಲಿಗಳನ್ನು ಮಾರಾಟ ಮಾಡುವಂತಿಲ್ಲ. Food Safety and Standards Authority of India (FSSAI) ಇದಕ್ಕಾಗಿ ನೂತನ ನಿಯಮ ಜಾರಿಗೆ ತಂದಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಇನ್ಮುಂದೆ ಯಾವುದೇ ಕಂಪನಿ ಪಾಕ್ ಮಾಡಿದ ನೀರು ಅಥವಾ ಮಿನರಲ್ ಮಾರಾಟ ಮಾಡಲು FSSAI ಅನುಮತಿಗೂ ಮೊದಲು BIS ಅನುಮತಿ ಪಡೆಯಬೇಕು. FSSAIನ ಈ ನೂತನ ಆದೇಶ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.
ನೀರಿನ ಬಾಟಲಿಗಳ ಕುರಿತು ನೂತನ ಆದೇಶ
FSS ACT 2006 ರ ಸೆಕ್ಷನ್ 31ರ ಪ್ರಕಾರ ದೇಶದಲ್ಲಿ ಯಾವುದೇ ಫುಡ್ ಬಿಜಿನೆಸ್ ಆರಂಭಿಸುವ ಮೊದಲು ಫುಡ್ ಬಿಸಿನೆಸ್ ಆಪರೇಟರ್ (FBO)ಗಳು ಲೈಸನ್ಸ್/ ರಿಜಿಸ್ಟ್ರೇಷನ್ ಮಾಡಿಸುವುದು ಅನಿವಾರ್ಯವಾಗಿದೆ. ಆದರೆ, ಇದೀಗ ಇದರಲ್ಲಿ ಹೊಸ ನಿಯಮ ಜೋಡಣೆಯಾಗಿದೆ. ಅದೇನೆಂದರೆ ಯಾವುದೇ ವ್ಯಕ್ತಿ BIS (Bureau of Indian Standards) ಮಾರ್ಕ್ ಇಲ್ಲದ ಕುಡಿಯುವ ನೀರು, ಮಿನರಲ್ ವಾಟರ್ (Mineral Water) ಬಾಟಲಿ ಉತ್ಪಾದನೆ, ಬಾಟಲಿಗಳ ಮಾರಾಟ ಮಾರಾಟ ಅಥವಾ ಮಾರಾಟಕ್ಕಾಗಿ ಮೇಳಗಳನ್ನು ಹಮ್ಮಿಕೊಳ್ಳುವ ಹಾಗಿಲ್ಲ.
FSSAI ಲೈಸನ್ಸ್ ಪಡೆಯಲು ಇದು ಅನಿವಾರ್ಯ
ಈ ಉತ್ಪಾದಕರಿಗೆ ಒಂದು ವೇಳೆ ಬಿಸಿನೆಸ್ ಗಾಗಿ FSSAI ಸರ್ಟಿಫಿಕೆಟ್ ಅಥವಾ ರಿಜಿಸ್ಟ್ರೇಷನ್ ಬೇಕಿದ್ದರೆ ಅವರು ಮೊದಲು BSI ಸರ್ಟಿಫಿಕೆಟ್ ಪಡೆದುಕೊಳ್ಳಬೇಕು. ಈ ಕುರಿತು ಹೇಳಿಕೆ ನೀಡಿರುವ FSSAI, ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಅಥವಾ ಫುಡ್ ಬಿಸಿನೆಸ್ ಆಪರೇಟರ್ ಪ್ಯಾಕ್ದ್ ಕುಡಿಯುವ ನೀರು ಹಾಗೂ ಮಿನರಲ್ ವಾಟರ್ ಮಾರಾಟದ ಲೈಸನ್ಸ್ ಪಡೆಯಲು ಬಯಸುತ್ತಿದ್ದರೆ, ಎಲ್ಲಕ್ಕಿಂತ ಮೊದಲು ಅವರು BIS ಪಡೆದುಕೊಳ್ಳುವುದು ಅನಿವಾರ್ಯ ಎಂದು ಹೇಳಿದೆ. ಜೊತೆಗೆ FoSCoSನ ಆನ್ಲೈನ್ ಸಿಸ್ಟಂ ಮೇಲೆ ಆ ಅನುಮತಿಯ ಕಾಪಿಯನ್ನು ಪ್ರಸ್ತುತ ಪಡಿಸಬೇಕು ಎಂದು ಕೂಡ ಹೇಳಿದೆ.
ಇದನ್ನೂ ಓದಿ-Packaged Drinking Water: ಜನವರಿ 1 ರಿಂದ ಬದಲಾಗಲಿದೆ ನೀರಿನ ಬಾಟಲ್ ಗಳ ನಿಯಮ, Taste ಕೂಡ ಬದಲಾವಣೆ
FSSAI ಲೈಸನ್ಸ್ ಗಾಗಿ ನೂತನ ಷರತ್ತುಗಳು ಇಂತಿವೆ
ಈಗಾಗಲೇ ಹಲವು ಪ್ಯಾಕ್ ಮಾಡಿದ ನೀರು ಮಾರಾಟ ಮಾಡುವ ಕಂಪನಿಗಳು FSSAIನೊಂದಿಗೆ ಸೇರಿ ಕಾರ್ಯನಿರ್ವಹಿಸುತ್ತಿವೆ. ಆದರೆ, BIS ಪ್ರಮಾಣ ಪತ್ರ ಇಲ್ಲದೆ ಅವು ಸೇರಿಕೊಂಡಿವೆ. ಇಂತಹ ಕಂಪನಿಗಳಿಗೂ ಕೂಡ ಇನ್ಮುಂದೆ BIS ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಲಾಗುವುದು ಎಂದು FSSAI ಸ್ಪಷ್ಟಪಡಿಸಿದೆ. ಅಂದರೆ ಇನ್ಮುಂದೆ ನಿಮಗೆ ನಿಮ್ಮ ನೀರಿನ ವ್ಯಾಪಾರಕ್ಕಾಗಿ FSSAI ಪರವಾನಿಗೆ ಬೇಕಿದ್ದರೆ ನೀವು BIS ಪರವಾನಿಗೆಯನ್ನು ಮೊದಲು ಪ್ರಸ್ತುತ ಪಡಿಸಬೇಕು.
ಇದನ್ನೂ ಓದಿ-ಇನ್ಮುಂದೆ ಖಾದ್ಯ ತೈಲದಲ್ಲಿಯೇ ಸಿಗಲಿವೆ Vitamin A ಹಾಗೂ D
ಲೈಸನ್ಸ್ ನವೀಕರಿಸಲು ಕೂಡ BIS ಪರವಾನಿಗೆ ಅವಶ್ಯಕ
ಅಷ್ಟೇ ಅಲ್ಲ ಇನ್ಮುಂದೆ FSSAI ಲೈಸನ್ಸ್ ನವೀಕರಿಸಲು ಕೂಡ BIS ಪರವಾನಿಗೆಯನ್ನು ಕಡ್ಡಾಯಗೊಳಿಸಲಾಗಿದೆ. BIS ಲೈಸನ್ಸ್ (BSI Certification) ಇಲ್ಲದೆ ಯಾವುದೇ ಕಂಪನಿಯ ಲೈಸನ್ಸ್ ಅನ್ನು ನವೀಕರಿಸಲಾಗುವುದಿಲ್ಲ. ಇದರ ಜೊತೆಗೆ BIS ಲೈಸನ್ಸ್ ಪಡೆದ ಬಳಿಕ ಮಾತ್ರವೆ ಫುಡ್ ಬಿಸಿನೆಸ್ ಆಪರೇಟರ್ ಗಳು ಆನ್ಲೈನ್ ನಲ್ಲಿ ವಾರ್ಷಿಕ ರಿಟರ್ನ್ ಪಾವತಿಸಬಹುದು. FSSAIನ ಈ ನೂತನ ಆದೇಶಗಳು ಏಪ್ರಿಲ್ 1, 2021 ರಿಂದ ಜಾರಿಗೆ ಬರಲಿವೆ.
ಇದನ್ನೂ ಓದಿ-Sweets ಅಂಗಡಿಯವರು ಅಕ್ಟೋಬರ್ 1ರಿಂದ ಈ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.