Will EPFO Increase Its Investment In Equity - ಇಪಿಎಫ್ಓ ಮಂಡಳಿ ಇತ್ತೀಚೆಗಷ್ಟೇ 2021-22 ಹಣಕಾಸು ವರ್ಷಕ್ಕೆ ತನ್ನ ಬಡ್ಡಿ ದರವನ್ನು ಶೇ 8.5 ರಿಂದ ಶೇ 8.1 ಕ್ಕೆ ಇಳಿಸಲು ನಿರ್ಧಾರ ಕೈಗೊಂಡು, ತೀವ್ರ ಟೀಕೆಗೆ ಗುರಿಯಾಗಿದೆ. ಹೀಗಾಗಿ ಇಪಿಎಫ್‌ಒ ಮಂಡಳಿಯು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಿತಿಯನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದರಿಂದ ಅದು ತನ್ನ ಹೂಡಿಕೆದಾರರಿಗೆ ಹೆಚ್ಚಿನ ಆದಾಯವನ್ನು ನೀಡಲು ಸಾಧ್ಯವಾಗಲಿದೆ. ಇಪಿಎಫ್‌ಒ ಮಂಡಳಿಯ ಸಭೆಯು ಜುಲೈ 29 ಮತ್ತು 30, 2022 ರಂದು ನಡೆಯಲಿದೆ, ಇದರಲ್ಲಿ ಷೇರು ಮಾರುಕಟ್ಟೆ ಮತ್ತು ಅದರ ಸಂಬಂಧಿತ ಉತ್ಪನ್ನಗಳಲ್ಲಿ ಹೂಡಿಕೆ ಮಿತಿಯನ್ನು ಪ್ರಸ್ತುತ ಇರುವ ಶೇ.15 ರಿಂದ ಶೇ.20 ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ. ಇದರಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಹೆಚ್ಚಿನ ಆದಾಯವನ್ನು ಮಂಡಳಿ ಪಡೆಯಬಹುದು ಮತ್ತು ಇಪಿಎಫ್‌ಒ ಖಾತೆದಾರರಿಗೆ ಹೆಚ್ಚಿನ ಬಡ್ಡಿಯ ರೂಪದಲ್ಲಿ ಅದರ ಲಾಭ ಸಿಗುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ಈಗಾಗಲೇ ಸರ್ಕಾರವೂ ಸೂಚಿಸಿದೆ
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ, ಸಿಬಿಟಿಯ ಉಪ ಸಮಿತಿಯಾದ ಎಫ್‌ಐಎಸಿ, ಈಕ್ವಿಟಿ ಮತ್ತು ಇಕ್ವಿಟಿ ಸಂಬಂಧಿತ ಹೂಡಿಕೆ ಮಿತಿಯನ್ನು ಶೇಕಡಾ 5-15 ರಿಂದ  ಶೇ. 5-20ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ ಎಂದು ಹೇಳಿದ್ದಾರೆ. ಆದರೆ, ಷೇರು ಮಾರುಕಟ್ಟೆಯಲ್ಲಿ ಇಪಿಎಫ್‌ಒ ಹೂಡಿಕೆ ಮಿತಿ ಹೆಚ್ಚಳಕ್ಕೆ ಬಹುತೇಕ ಕಾರ್ಮಿಕ ಸಂಘಗಳು ವಿರೋಧ ವ್ಯಕ್ತಪಡಿಸುತ್ತಿವೆ ಎಂಬುದು ಇಲ್ಲಿ ಉಲ್ಲೇಖನೀಯ. ಈ ಹೂಡಿಕೆಯ ಮೇಲೆ ಯಾವುದೇ ಸರ್ಕಾರದ ಗ್ಯಾರಂಟಿ ಇರುವುದಿಲ್ಲ ಮತ್ತು ಇದು ಹೂಡಿಕೆದಾರರಿಗೆ ಹಾನಿ ಉಂಟು ಮಾಡಲಿದೆ ಎಂದು ಸಂಘಟನೆಗಳು ವಾದ ಮಂಡಿಸಿವೆ.


ಇದನ್ನೂ ಓದಿ-Edible Oil Price Cut: ಶ್ರೀಸಾಮಾನ್ಯರಿಗೊಂದು ಭಾರಿ ಸಂತಸದ ಸುದ್ದಿ, ಅಡುಗೆ ಎಣ್ಣೆ ಬೆಲೆಯಲ್ಲಿ ಲೀಟರ್ ಗೆ ರೂ.30 ಇಳಿಕೆ


ಈಕ್ವಿಟಿಯಲ್ಲಿ ಶೇ.20ರಷ್ಟು ಹೂಡಿಕೆ ಸಾಧ್ಯ
EPFO ​​ನ ಹಣಕಾಸು ಹೂಡಿಕೆ ಮತ್ತು ಲೆಕ್ಕಪರಿಶೋಧನಾ ಸಮಿತಿಯು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯ ಮಿತಿಯನ್ನು ಶೇ. 20 ಪ್ರತಿಶತಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನು ಅನುಮೋದಿಸಿದೆ. ಪ್ರಸ್ತುತ, EPFO ​​ತನ್ನ ನಿಧಿಯ ಶೇ. 5 ರಿಂದ 15 ರಷ್ಟನ್ನು ಎಕ್ಸ್ಚೇಂಜ್ ಟ್ರೇಡೆಡ್ ಫಂಡ್‌ಗಳ ಮೂಲಕ (ಇಟಿಎಫ್‌ಗಳು) ಹೂಡಿಕೆ ಮಾಡುತ್ತದೆ. ಇಪಿಎಫ್‌ಒಗೆ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯಿಂದ 2021-22ರಲ್ಲಿ ಶೇ. 16.27 ರಷ್ಟು ಲಾಭ ಬಂದಿದೆ. ಆದರೆ, 2020-21ರಲ್ಲಿ ಈ ಲಾಭ ಶೇ.14.67 ರಷ್ಟಿತ್ತು. ಇದು ಸಾಲದಲ್ಲಿ ಮಾಡಿದ ಹೂಡಿಕೆಗಿಂತ ಹೆಚ್ಚು. EPFO 15 ವರ್ಷಗಳ ಕಾಲ ನ್ಯೂಕ್ಲಿಯರ್ ಪವರ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದ್ದು, ಅದರ ಮೇಲೆ ವಾರ್ಷಿಕವಾಗಿ ಶೇ. 6.89 ಶೇಕಡಾ ಬಡ್ಡಿಯನ್ನು ಪಾವತಿಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಾಂಡ್‌ಗಳಿಗೆ ಶೇ.7.27 ರಿಂದ ಶೇ.7.57ಕ್ಕೆ ಬಡ್ಡಿ ಸಿಗುತ್ತಿದೆ. ನಿಸ್ಸಂಶಯವಾಗಿ, ಕಾರ್ಪೊರೇಟ್ ಬಾಂಡ್‌ಗಳಿಗೆ ಸರ್ಕಾರಿ ಬಾಂಡ್‌ಗಳಲ್ಲಿನ ಹೂಡಿಕೆಯ ಮೇಲೆ ಇಪಿಎಫ್‌ಒ ಕಡಿಮೆ ಆದಾಯವನ್ನು ಪಡೆಯುತ್ತಿದೆ.


ಇದನ್ನೂ ಓದಿ-Flight Ticket Offer: ಕೇವಲ 100 ರೂ.ಗಳಲ್ಲಿ ವಿಮಾನದಲ್ಲಿ ಸಂಚರಿಸುವ ಅವಕಾಶ, ಜೊತೆಗೆ 50 ಲಕ್ಷ ರೂ.ಗಳವರೆಗೆ ಲಾಭ !
 
ಹೆಚ್ಚಿನ ಆದಾಯವನ್ನು ನೀಡಲು ಇಪಿಎಫ್‌ಒ ಮೇಲೆ ಒತ್ತಡ
EPFO ಮೇಲೆ ಈಗಾಗಲೇ ತನ್ನ ಹೂಡಿಕೆದಾರರಿಗೆ ಹೆಚ್ಚಿನ ಬಡ್ಡಿ ಪಾವತಿಗೆ ಸಂಬಂಧಿಸಿದಂತೆ ಒತ್ತಡವಿದೆ, ಮಾರ್ಚ್ 2022 ರಲ್ಲಿ EPFO ​​2021-22 ಆರ್ಥಿಕ ವರ್ಷದ ಪಿಎಫ್ ಬಡ್ಡಿ ದರವನ್ನು 4 ದಶಕಗಳಲ್ಲಿಯೇ ಅತ್ಯಂತ ಕಡಿಮೆ ಅಂದರೆ ಶೇ.8.1 ಕ್ಕೆ ಇಳಿಕೆ ಮಾಡಿದೆ, ಇದೇ ಕಾರಣದಿಂದ ಸ್ಟಾಕ್ ಮಾರುಕಟ್ಟೆಯಲ್ಲಿ ತನ್ನ ಹೂಡಿಕೆಯನ್ನು ಇಪಿಎಫ್‌ಒ ಹೆಚ್ಚಿಸಲಿದೆ ಮತ್ತು ಇಪಿಎಫ್‌ಒ ಖಾತೆದಾರರಿಗೆ ಹೆಚ್ಚಿನ ಆದಾಯವನ್ನು ಗಳಿಸಲು ಮತ್ತು ಹೆಚ್ಚಿನ ಬಡ್ಡಿಯನ್ನು ಪಾವತಿಸಲು ಅನುವು ಮಾಡಿಕೊಡಲಿದೆ ಎನ್ನಲಾಗುತ್ತಿದೆ. ಇಪಿಎಫ್ಓನ ಹಣಕಾಸು ಹೂಡಿಕೆ ಹಾಗೂ ಲೆಕ್ಕಪರಿಶೋಧನಾ ಸಮಿತಿ ಕೈಗೊಂಡ ನಿರ್ಧಾರದ ಮೇಲೆ ಮೊದಲು ಇಪಿಎಫ್ಓ ಮಂಡಳಿಯ ಮುದ್ರೆ ಬೀಳಬೇಕು, ಬಳಿಕ ಅದನ್ನು ಟ್ರೇಡ್ ಯುನಿಯನ್ ಸದಸ್ಯರ ಪ್ರತಿನಿಧಿಗಳು ಅನುಮೊದಿಸಬೇಕು ಎಂಬುದು ಇಲ್ಲಿ ಉಲ್ಲೇಖನೀಯ. ಮಾರ್ಚ್ 2021ರವರೆಗೆ ಇಪಿಎಫ್ಓ ಬಳಿ ಇರುವ ಒಟ್ಟು ಕಾರ್ಪಸ್ 15.69 ಲಕ್ಷ ಕೋಟಿ. ರೂ.ಗಳಾಗಿದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.