Gold-Sliver Price: ಚಿನ್ನ ಪ್ರಿಯರೇ ಸಿಹಿ ಸುದ್ದಿ: ಹಳದಿ ಲೋಹದ ಬೆಲೆಯಲ್ಲಿ ಭಾರೀ ಇಳಿಕೆ

ಇನ್ನು ಬೆಳ್ಳಿ ದರದಲ್ಲಿ ಏರಿಕೆಯಾಗಿದ್ದು, ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 600 ರೂ. ಹೆಚ್ಚಳವಾಗಿದೆ. ಕೆಜಿ  ಬೆಳ್ಳಿಗೆ 55,600 ರೂ. ನಿಗದಿಯಾಗಿದೆ. ಈ ಮೂಲಕ ಬೆಳ್ಳಿ ದುಬಾರಿಯಾಗುತ್ತಿದೆ ಎನ್ನಬಹುದು. ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

Written by - Bhavishya Shetty | Last Updated : Jul 17, 2022, 08:56 AM IST
  • ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಾಣುತ್ತಿದೆ
  • 24 ಕ್ಯಾರೆಟ್ ಬಂಗಾರದ ಬೆಲೆಯಲ್ಲಿ 330 ರೂ ಇಳಿಕೆ
  • ಕೆಜಿ ಬೆಳ್ಳಿ ಬೆಲೆಗೆ ಬರೋಬ್ಬರಿ 600 ರೂ. ಹೆಚ್ಚಳ
Gold-Sliver Price: ಚಿನ್ನ ಪ್ರಿಯರೇ ಸಿಹಿ ಸುದ್ದಿ: ಹಳದಿ ಲೋಹದ ಬೆಲೆಯಲ್ಲಿ ಭಾರೀ ಇಳಿಕೆ title=
Gold price

ಬೆಂಗಳೂರು : Gold Price Today: ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಿದೆ. ಇಂದೂ ಸಹ ಹಳದಿ ಲೋಹದ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಗ್ರಾಹಕರಿಗೆ ಸಿಹಿಸುದ್ದಿ ನೀಡಿದಂತಾಗಿದೆ.  24 ಕ್ಯಾರೆಟ್ ಬಂಗಾರದ ಬೆಲೆಯಲ್ಲಿ 330 ರೂ ಇಳಿಕೆಯಾಗಿ, ಇದೀಗ 10 ಗ್ರಾಂಗೆ ಚಿನ್ನಕ್ಕೆ 50,400 ರೂ ಆಗಿದೆ. ಇನ್ನು 22 ಕ್ಯಾರೆಟ್ ಬಂಗಾರದ ಬೆಲೆಯಲ್ಲಿ 300 ರೂ ಕಡಿಮೆಯಾಗಿದ್ದು, 10 ಗ್ರಾಂ ಗೆ 46,500 ರೂ. ಆಗಿದೆ. 

ಇದನ್ನೂ ಓದಿ: ದಾಖಲೆ ಪರಿಶೀಲನೆಗೆ ಸುಖಾಸುಮ್ಮನೆ ವಾಹನ ತಡೆಯದಂತೆ ಪ್ರವೀಣ್ ಸೂದ್ ಆದೇಶ

ಇನ್ನು ಬೆಳ್ಳಿ ದರದಲ್ಲಿ ಏರಿಕೆಯಾಗಿದ್ದು, ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 600 ರೂ. ಹೆಚ್ಚಳವಾಗಿದೆ. ಕೆಜಿ  ಬೆಳ್ಳಿಗೆ 55,600 ರೂ. ನಿಗದಿಯಾಗಿದೆ. ಈ ಮೂಲಕ ಬೆಳ್ಳಿ ದುಬಾರಿಯಾಗುತ್ತಿದೆ ಎನ್ನಬಹುದು.

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

ನಗರ 22 ಕ್ಯಾರೆಟ್ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನದ ಬೆಲೆ
ಚೆನ್ನೈ 46,270 50,480
ಮುಂಬಯಿ 46,200 50,400
ಕೋಲ್ಕತ್ತಾ 46,200  50,400
ದೆಹಲಿ 46,200  50,400
ಬೆಂಗಳೂರು 46,300 50,510
ಹೈದರಾಬಾದ್ 46,200  50,400
ಕೇರಳ 46,200  50,400

ಬೆಳ್ಳಿ ಬೆಲೆ ಯಾವ ರೀತಿ ಎಂಬುದನ್ನು ತಿಳಿಯೋಣ: 

ನಗರ ಇಂದಿನ ಬೆಳ್ಳಿ ದರ
ಚೆನ್ನೈ 60,700
ಮುಂಬಯಿ 55,600
ಕೋಲ್ಕತ್ತಾ 55,600
ದೆಹಲಿ 55,600
ಬೆಂಗಳೂರು 60,700
ಹೈದರಾಬಾದ್ 60,700
ಕೇರಳ 60,700

ಇದನ್ನೂ ಓದಿ: Vegetable Price: ಖಾರ ಅನಿಸುತ್ತಿದೆ ಮೆಣಸಿನ ಬೆಲೆ: ಇಂದು ಮತ್ತೆ ತರಕಾರಿ ದರ ಏರಿಕೆ!

ಚಿನ್ನ-ಬೆಳ್ಳಿಯ ದರವನ್ನು ಹೀಗೆ ಪರಿಶೀಲಿಸಿ: 
ಪ್ರತೀ ದಿನ ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಿ. ಹೀಗೆ ಮಾಡಿದ ತಕ್ಷಣ ಇತ್ತೀಚಿನ ದರಗಳ ಅಪ್‌ಡೇಟ್‌ನ್ನು ಸಂದೇಶ ರೂಪದಲ್ಲಿ ನೀವು ಪಡೆಯುತ್ತೀರಿ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News