EPFO Rules: ನೌಕರಿ ಬಿಟ್ಟ ಬಳಿಕ ಇಷ್ಟು ದಿನಗಳಲ್ಲಿ PFನಿಂದ ಹಣ ಹಿಂಪಡೆಯದೆ ಹೋದರೆ ಭಾರಿ ಹಾನಿ, ಕಾರಣ ಇಲ್ಲಿದೆ
PF Account Update: ಕೆಲಸವನ್ನು ತೊರೆದ ನಂತರ, ನಿಮ್ಮ PF ಖಾತೆಯಲ್ಲಿ ನೀವು ಯಾವುದೇ ವಹಿವಾಟು ಮಾಡದಿದ್ದರೆ, ನಿಮ್ಮ PF ಖಾತೆಯು ನಿಷ್ಕ್ರಿಯವಾಗಬಹುದು.
PF Account Update: ನೀವು ಉದ್ಯೋಗದಲ್ಲಿದ್ದರೆ, ನೀವೂ ಕೂಡ EPFOನಲ್ಲಿ PF (Provident Fund) ಖಾತೆ ಚಂದಾದಾರರಾಗಿರುತ್ತೀರಿ. ಆದರೆ ಪಿಎಫ್ ಖಾತೆಯನ್ನು ಸಕ್ರಿಯವಾಗಿರಿಸಿಕೊಳ್ಳುವುದು ಬಹಳ ಮುಖ್ಯ, ಏಕೆಂದರೆ ನಿವೃತ್ತಿಗಾಗಿ ಒಟ್ಟು ಮೊತ್ತವನ್ನು ಅದರಲ್ಲಿ ಸಂಗ್ರಹಿಸಲಾಗುತ್ತದೆ (Retirement Planing). ಆದರೆ, ಉದ್ಯೋಗಗಳನ್ನು ಬದಲಾಯಿಸಿದ ನಂತರ ಅಥವಾ ನಿಮ್ಮ ಉದ್ಯೋಗವನ್ನು ತೊರೆದ ನಂತರ ನಿಮ್ಮ ಭವಿಷ್ಯ ನಿಧಿಯನ್ನು ವರ್ಗಾಯಿಸಲು ನೀವು ಮರೆಯುವ ಸಂದರ್ಭಗಳಿವೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಹಲವು ನಷ್ಟಗಳನ್ನು ಅನುಭವಿಸಬಹುದು. ಹೀಗಾಗಿ ನಿಮ್ಮ ಪಿಎಫ್ ಹಣವನ್ನು ವರ್ಗಾಯಿಸುವುದು ಎಷ್ಟು ಮುಖ್ಯವಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಕೆಲಸ ಬಿಟ್ಟರೂ ಬಡ್ಡಿ ಸಿಗುತ್ತದೆ
ಕೆಲಸ ಬಿಡುವ ಜನರು ತಮ್ಮ ಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡದಿದ್ದರೂ, ಬಡ್ಡಿ ಪಡೆದ ಮೇಲೆ ತಮ್ಮ ಠೇವಣಿ ಹೆಚ್ಚುತ್ತಿದೆ ಎಂದು ತೃಪ್ತಿ ಹೊಂದಿರುತ್ತಾರೆ. ಆದರೆ, 36 ತಿಂಗಳವರೆಗೆ ನಿಮ್ಮ ಪಿಎಫ್ (EPFO Pension) ಖಾತೆಯಲ್ಲಿ ನೀವು ಯಾವುದೇ ಕೊಡುಗೆಯನ್ನು ನೀಡದಿದ್ದರೆ, ನಿಮ್ಮ ಖಾತೆಯು ನಿಷ್ಕ್ರಿಯವಾಗಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳುವುದು ಬಹಳ ಮುಖ್ಯ.
ಇಂತಹ ಪರಿಸ್ಥಿತಿಯಲ್ಲಿ, ಖಾತೆಯನ್ನು ಸಕ್ರಿಯವಾಗಿಡಲು, ಮೂರು ವರ್ಷಗಳ ಮೊದಲು ಸ್ವಲ್ಪ ಮೊತ್ತವನ್ನು ಹಿಂಪಡೆಯಬೇಕು (Cash Withdrawal). ಕಂಪನಿಯನ್ನು ತೊರೆದ ನಂತರವೂ, ಪಿಎಫ್ ಖಾತೆಯಲ್ಲಿ ಬಡ್ಡಿಯು ಮುಂದುವರಿಯುತ್ತದೆ ಮತ್ತು 55 ವರ್ಷ ವಯಸ್ಸಿನವರೆಗೆ ನಿಷ್ಕ್ರಿಯವಾಗುವುದಿಲ್ಲ.
ಪಿಎಫ್ ಮೊತ್ತದ ಮೇಲಿನ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ
ನಿಯಮಗಳ ಪ್ರಕಾರ, ಪಿಎಫ್ ಮೇಲೆ ಗಳಿಸಿದ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. ಪಿಎಫ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ ನಂತರವೂ ನೀವು ಹಣವನ್ನು ಕ್ಲೈಮ್ ಮಾಡದಿದ್ದರೆ, ಈ ಮೊತ್ತವು ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ ಹೋಗುತ್ತದೆ ಎಂಬುದು ನಿಮಗೆ ತಿಳಿದಿರಲಿ.
ಇದನ್ನೂ ಓದಿ-Grazia 125: ಕಲರ್ಫುಲ್ ಅವತಾರದಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟ Honda ಕಂಪನಿಯ ಹೊಸ ಸ್ಕೂಟರ್
EPF ಮತ್ತು MP ಕಾಯಿದೆ, 1952 ರ ಸೆಕ್ಷನ್ 17 ರ ಮೂಲಕ ವಿನಾಯಿತಿ ಪಡೆದಿರುವ ಟ್ರಸ್ಟ್‌ಗಳು ಹಿರಿಯ ನಾಗರಿಕ ಕಲ್ಯಾಣ ನಿಧಿಯ ನಿಯಮಗಳ ಅಡಿಯಲ್ಲಿಯೂ ಒಳಗೊಳ್ಳುತ್ತವೆ. ಅವರು ಖಾತೆಯ ಮೊತ್ತವನ್ನು ಕಲ್ಯಾಣ ನಿಧಿಗೆ ವರ್ಗಾಯಿಸಬೇಕು.
ಇದನ್ನೂ ಓದಿ-IRCTC ನೀಡುತ್ತಿದೆ Rann Utsav ನೋಡುವ ಅವಕಾಶ, ಊಟ, ವಸತಿ ಎಲ್ಲವೂ ಉಚಿತ..!
ಈ ನಿಧಿಯಲ್ಲಿ ವರ್ಗಾವಣೆಯಾದ ಮೊತ್ತವನ್ನು ನೀವು ಕ್ಲೈಮ್ ಮಾಡಬಹುದು
ಈ ಮೊತ್ತವು ಯಾವುದೇ ಕ್ಲೈಮ್ ಇಲ್ಲದೆ 25 ವರ್ಷಗಳವರೆಗೆ ಹಿರಿಯ ನಾಗರಿಕರ ಕಲ್ಯಾಣ ನಿಧಿಯಲ್ಲಿ ಇರುತ್ತದೆ ಎಂಬುದು ಇಲ್ಲಿ ಗಮನಾರ್ಹ. ಈ ಸಮಯದಲ್ಲಿ, ಪಿಎಫ್ ಖಾತೆದಾರರು ಮೊತ್ತವನ್ನು ಕ್ಲೈಮ್ ಮಾಡಬಹುದು. ನೀವು 55 ವರ್ಷಗಳಲ್ಲಿ ನಿವೃತ್ತಿಯಾದರೆ ಖಾತೆ ನಿಷ್ಕ್ರಿಯವಾಗಲು ಬಿಡಬೇಡಿ. ಸಾಧ್ಯವಾದಷ್ಟು ಬೇಗ ಅಂತಿಮ ಬಾಕಿಯನ್ನು ಹಿಂತೆಗೆದುಕೊಳ್ಳಿ. PF ಖಾತೆಯು 55 ವರ್ಷಗಳವರೆಗೆ ನಿಷ್ಕ್ರಿಯವಾಗುವುದಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ - Movie Tickets Offers: ಅಗ್ಗದ ದರದಲ್ಲಿ ಸಿನಿಮಾ ನೋಡುವ ಅವಕಾಶ! ಈ ಬ್ಯಾಂಕ್ ನೀಡುತ್ತಿದೆ 50% ರಿಯಾಯಿತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.