EPFO update : 24 ಕೋಟಿ PF ಖಾತೆದಾರರಿಗೆ ಶೀಘ್ರದಲ್ಲಿ ಸಿಗಲಿದೆ ಗುಡ್ ನ್ಯೂಸ್!
ಮಾರ್ಚ್‌ನಲ್ಲಿ ನಡೆಯುವ ತನ್ನ ಸಭೆಯಲ್ಲಿ 2021-22ರ ಉದ್ಯೋಗಿಗಳ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಇಪಿಎಫ್‌ಒದ ಅಪೆಕ್ಸ್ ನಿರ್ಧಾರ ಸಂಸ್ಥೆ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿ ಹೆಚ್ಚಿಸಬಹುದು ಎಂಬ ಭರವಸೆ ಇದೆ.
ನವದೆಹಲಿ : ಸುಮಾರು 24 ಕೋಟಿ ಪಿಎಫ್ ಖಾತೆದಾರರಿಗೆ ಸಂತಸದ ಸುದ್ದಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮಾರ್ಚ್‌ನಲ್ಲಿ ನಡೆಯುವ ತನ್ನ ಸಭೆಯಲ್ಲಿ 2021-22ರ ಉದ್ಯೋಗಿಗಳ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಇಪಿಎಫ್‌ಒದ ಅಪೆಕ್ಸ್ ನಿರ್ಧಾರ ಸಂಸ್ಥೆ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿ ಹೆಚ್ಚಿಸಬಹುದು ಎಂಬ ಭರವಸೆ ಇದೆ.
ಮುಂದಿನ ತಿಂಗಳು ನಡೆಯುವ ಸಭೆಯಲ್ಲಿ ಪ್ರಸಕ್ತ ಹಣಕಾಸು ವರ್ಷದ ಬಡ್ಡಿ ದರ(PF interest rate)ವನ್ನು ನಿರ್ಧರಿಸಲಾಗುವುದು. ಮಾರ್ಚ್‌ನಲ್ಲಿ ಗುವಾಹಟಿಯಲ್ಲಿ ಇಪಿಎಫ್‌ಒ ಸಿಬಿಟಿ ಸಭೆಯನ್ನು ನಡೆಸಲಾಗುವುದು ಎಂದು ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ, ಅಲ್ಲಿ 2021-22 ರ ಬಡ್ಡಿದರಗಳನ್ನು ನಿರ್ಧರಿಸುವ ಪ್ರಸ್ತಾಪವನ್ನು ಚರ್ಚೆಗೆ ಪಟ್ಟಿ ಮಾಡಲಾಗಿದೆ.
ಇದನ್ನೂ ಓದಿ : 7th Pay Commission : ಕೇಂದ್ರ ನೌಕರರಿಗೆ ಸಿಹಿ ಸುದ್ದಿ! ಮಾರ್ಚ್ ತಿಂಗಳ ಸಂಬಳದಲ್ಲಿ ನಿಮಗೆ ಸಿಗಲಿದೆ 38,692 ರೂ.
ಇಪಿಎಫ್‌ಒ 2021-22ರ ಬಡ್ಡಿದರವು 2020-21ರಂತೆ 8.5% ನಲ್ಲಿ ಉಳಿಯುತ್ತದೆಯೇ ಎಂದು ಇತ್ತೀಚೆಗೆ ಮಾಧ್ಯಮಗಳಿಗೆ ನೀಡಿದ ಹೇಳಿಕೆ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಆದಾಯದ ಆಧಾರದ ಮೇಲೆ ಬಡ್ಡಿದರದ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು. ಭೂಪೇಂದ್ರ ಯಾದವ್ ಸಿಬಿಟಿ ಮುಖ್ಯಸ್ಥರೂ ಆಗಿದ್ದಾರೆ.
ಕಳೆದ ದಶಕದಲ್ಲಿ ನಿರ್ಧರಿಸಿದ ಬಡ್ಡಿದರಗಳು
CBT ಪ್ರಸ್ತುತ ವರ್ಷದ ಬಡ್ಡಿದರಗಳನ್ನು ನಿರ್ಧರಿಸಿದ ನಂತರ, ಪ್ರಸ್ತಾವನೆಯನ್ನು ಅನುಮೋದನೆಗಾಗಿ ಹಣಕಾಸು ಸಚಿವಾಲಯ(Finance Ministry)ಕ್ಕೆ ರವಾನಿಸಲಾಗುತ್ತದೆ. ಮಾರ್ಚ್ 2020 ರಲ್ಲಿ, ಇಪಿಎಫ್‌ಒ ಭವಿಷ್ಯ ನಿಧಿ ಠೇವಣಿ ಮೇಲಿನ ಬಡ್ಡಿ ದರವನ್ನು 8.5% ಕ್ಕೆ ಇಳಿಸಿದೆ, ಇದು 7 ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟವಾಗಿದೆ.
2018-19 - 8.65%
2017-18 - 8.65%
2016-17 - 8.65%
2015-16 - 8.8%
2014-15 - 8.75%
2013-14 - 8.75%
2012-13 - 8.5%
2011-12 - 8.25%
ಇಪಿಎಫ್‌ಒ(EPFO) ಇತ್ತೀಚೆಗೆ ತನ್ನ ಟ್ವಿಟರ್ ಮೂಲಕ ನೀಡಿದ ಮಾಹಿತಿಯಲ್ಲಿ, 2020-21ರ ಹಣಕಾಸು ವರ್ಷಕ್ಕೆ 24 ಕೋಟಿಗೂ ಹೆಚ್ಚು ಪಿಎಫ್ ಖಾತೆಗಳಲ್ಲಿ ಬಡ್ಡಿಯನ್ನು ಜಮಾ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ. ಇದನ್ನು 8.5% ಬಡ್ಡಿದರದಲ್ಲಿ ಮಾಡಲಾಯಿತು.
ಇದನ್ನೂ ಓದಿ : Singal chargeನಲ್ಲಿ 500 ಕಿಮೀ ವರೆಗೆ ಚಲಿಸುತ್ತದೆ Maruti Suzuki ಎಲೆಕ್ಟ್ರಿಕ್ SUV
2018-19 - 8.65%
2017-18 - 8.65%
2016-17 - 8.65%
2015-16 - 8.8%
2014-15 - 8.75%
2013-14 - 8.75%
2012-13 - 8.5%
2011-12 - 8.25%
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.