ದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರಿಗಾಗಿ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಈಗ ಪಿಎಫ್ ಖಾತೆದಾರರು ವಾಟ್ಸಾಪ್ ಸಹಾಯವಾಣಿ ಸೇವೆ  (EPFO whatsapp helpline service) ಮೂಲಕ ಖಾತೆಗೆ ಸಂಬಂಧಿಸಿದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಅಂದರೆ ಇನ್ನು ಸಮಸ್ಯೆಗಳು ಎದುರಾದರೆ ಪಿಎಫ್ ಕಚೇರಿಗೇ ಭೇಟಿ ನೀಡಬೇಕಾಗಿಲ್ಲ.


COMMERCIAL BREAK
SCROLL TO CONTINUE READING

ಯಾವ ನಂಬರ್ ಗೆ ದೂರು ಸಲ್ಲಿಸಬೇಕು :
ಇಪಿಎಫ್‌ಒದ (EPFO) ಎಲ್ಲಾ 138 ಪ್ರಾದೇಶಿಕ ಕಚೇರಿಗಳಲ್ಲಿ ವಾಟ್ಸಾಪ್ ಸಹಾಯವಾಣಿ (Whatsapp helpline) ಸೇವೆಯನ್ನು ಪ್ರಾರಂಭಿಸಲಾಗಿದೆ. ಸದಸ್ಯರು ವಾಟ್ಸಾಪ್ (whatsapp) ಸಂದೇಶದ ಮೂಲಕ ದೂರು ನೀಡಬಹುದು. ನಿಮ್ಮ ಪ್ರದೇಶದ ವಾಟ್ಸಾಪ್ ಸಂಖ್ಯೆಯನ್ನು ತಿಳಿಯಲು, ಇಪಿಎಫ್‌ಒ ನ ಅಧಿಕೃತ website  https://www.epfindia.gov.inಗೆ ಭೇಟಿ ನೀಡಿ.  ಈ  ಮೂಲಕ, ನಿಮ್ಮ ಪ್ರದೇಶದ ವಾಟ್ಸ್ ಆಪ್ ಸಂಖ್ಯೆಯನ್ನು ಪಡೆಯಬಹುದು. 


ಇದನ್ನೂ ಓದಿ EPF ಗ್ರಾಹಕರಿಗೆ ಶುಭ ಸುದ್ದಿ: EPF 'ಬಡ್ಡಿದರ ಶೇ.8.5'ರಷ್ಟು ಮುಂದುವರಿಕೆ!


ಇಪಿಎಫ್‌ಒ ಕಾಲ್ ಸೆಂಟರ್‌ನಿಂದಲೂ ಸಹಾಯ ಪಡೆಯಬಹುದು:
ಇಪಿಎಫ್‌ಒನ ಇತರ ಸೌಲಭ್ಯಗಳಿಗಾಗಿ  EPFIGMS ಪೋರ್ಟಲ್ , CPGRAMS,  ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಾ ದ ಫೇಸ್‌ಬುಕ್ , ಟ್ವಿಟರ್  ಮತ್ತು 24 ಗಂಟೆಗಳ ಕಾಲ್ ಸೆಂಟರನ್ನು ಸಂಪರ್ಕಿಸಬಹುದು. ಅಲ್ಲದೆ  Https: //www.epfindia.gov.in/site_docs/PDFs/Downloads_PDFs/WhatsApp_Helpl ಮೂಲಕವೂ ಸಮಸ್ಯೆ ಪರಿಹರಿಸಿಕೊಳ್ಳಬಹುದು. 


ಮಧ್ಯವರ್ತಿಗಳ ಕಾಟ ತಪ್ಪುತ್ತದೆ : 
ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಖಾತೆಯಿಂದ ತೆಗೆಯುವ ವೇಳೆ  ಸಾಮಾನ್ಯವಾಗಿ ಮಧ್ಯವರ್ತಿಗಳ ಕಿರಿಕಿರಿ ಇರುತ್ತದೆ.  online ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದರಿಂದ ಮಧ್ಯವರ್ತಿಗಳ ಕಿರಿಕಿರಿ ತಪ್ಪುತ್ತದೆ.  ಕಷ್ಟಪಟ್ಟು ಸಂಪಾದಿಸಿದ ಹಣ ಯಾರದ್ದೋ ಪಾಲಾಗುವುದು ಕೂಡಾ ತಪ್ಪುತ್ತದೆ. 


ಇದನ್ನೂ ಓದಿ : EPF ವರ್ಗಾವಣೆ ಗೆ ಇನ್ನು ಸುಲಭ ; ಆನ್ ಲೈನ್ ನಲ್ಲಿ ಖಾತೆದಾರನೇ ಅಪ್ ಡೇಟ್ ಮಾಡಬಹುದು ಡೇಟ್ ಆಫ್ ಎಕ್ಸಿಟ್


ನಿಮ್ಮ ಸಂಬಳದಿಂದಲೇ  ಪಿಎಫ್ ಕಡಿತಗೊಳಿಸಲಾಗುತ್ತದೆ :
ಯಾವುದೇ ಉದ್ಯೋಗಿಯ ಮೂಲ ವೇತನದ (Salary) ಶೇಕಡಾ 12 ರಷ್ಟು ಪಿಎಫ್ ಖಾತೆಗೆ ಹೋಗುತ್ತದೆ. ಇದೇ ಪಾಲನ್ನು ಕಂಪನಿಯು ಸಹ ನೀಡುತ್ತದೆ. ವರ್ಷಕ್ಕೆ ಠೇವಣಿ ಇರಿಸಿದ ಮೊತ್ತಕ್ಕೆ ಬಡ್ಡಿಯನ್ನು (Intrest) ಸರ್ಕಾರ ಪಾವತಿಸುತ್ತದೆ. ಸಾಮಾನ್ಯವಾಗಿ, ಪಿಎಫ್ ಖಾತೆಯ ಬಡ್ಡಿದರವು ಇತರ ಖಾತೆಯ ಬಡ್ಡಿದರಕ್ಕಿಂತ ಹೆಚ್ಚಿರುತ್ತದೆ.  2020-21ರ ಆರ್ಥಿಕ ವರ್ಷಕ್ಕೆ ಇಪಿಎಫ್ ಮೇಲಿನ ಬಡ್ಡಿದರವನ್ನು ಶೇಕಡಾ 8.50 ಕ್ಕೆ ನಿಗದಿಪಡಿಸಲಾಗಿದೆ.

 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.