ನವದೆಹಲಿ: ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ ಒ ಗುರುವಾರ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಶೇ.8.5ರ ಬಡ್ಡಿ ದರವನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿದೆ. ಈ ಮೂಲಕ ಐದು ಕೋಟಿಗೂ ಹೆಚ್ಚು ಸಕ್ರಿಯ ಇಫಿಎಫ್ಒ ಚಂದಾದಾರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.
ನೌಕರರ ಭವಿಷ್ಯ ನಿಧಿ ಸಂಘಟನೆಯ (EPFO) ಅಪೆಕ್ಸ್ ನಿರ್ಧಾರ ಕೈಗೊಳ್ಳುವ ಸಂಸ್ಥೆ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು ಗುರುವಾರ ಶ್ರೀನಗರದಲ್ಲಿ ನಡೆದ ಸಭೆಯಲ್ಲಿ 2020-21ರ ಸಾಲಿನ ಬಡ್ಡಿ ದರವನ್ನು ಶೇ.8.5ಕ್ಕೆ ನಿಗದಿ ಮಾಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Bank Strike : ಈ ಎರಡು ದಿನಕ್ಕೆ ಬ್ಯಾಂಕ್ ವ್ಯವಹಾರ ಇಟ್ಟುಕೊಳ್ಳಬೇಡಿ..!
ಕೊರೊನಾ ವೈರಸ್(Coronavirus) ಸಾಂಕ್ರಾಮಿಕ ರೋಗದ ನಡುವೆ ಸದಸ್ಯರು ಹೆಚ್ಚು ಹಣ ಹಿಂತೆಗೆದುಕೊಳ್ಳುವಿಕೆ ಮತ್ತು ಕಡಿಮೆ ಕೊಡುಗೆಯ ಹಿನ್ನೆಲೆಯಲ್ಲಿ 2019-20ನೇ ಸಾಲಿನಲ್ಲಿ ಇಪಿಎಫ್ ಒ ಈ ಹಣಕಾಸು ವರ್ಷದ (2020-21) ಭವಿಷ್ಯನಿಧಿ ಠೇವಣಿಗಳ ಮೇಲಿನ ಬಡ್ಡಿಯನ್ನು ಶೇ.8.5ರಿಂದ ಕಡಿಮೆ ಮಾಡಲಿದೆ ಎಂಬ ಊಹಾಪೋಹಗಳು ಹರಿದಾಡಿದ್ದವು.
Jharkhand: IED ಸ್ಫೋಟದಲ್ಲಿ 2 ಯೋಧರು ಹುತಾತ್ಮ, ಇಬ್ಬರ ಸ್ಥಿತಿ ಗಂಭೀರ
ಕಳೆದ ವರ್ಷ ಮಾರ್ಚ್ ನಲ್ಲಿ ಇಪಿಎಫ್ ಒ ಭವಿಷ್ಯ ನಿಧಿ ಠೇವಣಿ(Provident Fund Deposits)ಗಳ ಮೇಲಿನ ಬಡ್ಡಿದರವನ್ನು 2019-20ರಲ್ಲಿ ಶೇ.8.5ಕ್ಕೆ ಇಳಿಸಿ, 2018-19ರಲ್ಲಿ ಶೇ.8.65ಕ್ಕೆ ಇಳಿಸಿತ್ತು.
2019-20ನೇ ಸಾಲಿಗೆ ಇಪಿಎಫ್ (ಉದ್ಯೋಗಿಗಳ ಭವಿಷ್ಯ ನಿಧಿ) ಬಡ್ಡಿದರ ವು 2012-13ರ ನಂತರ ಅತ್ಯಂತ ಕನಿಷ್ಠ ಮಟ್ಟದ್ದು, ಇದು ಶೇ.8.5ರಷ್ಟಿತ್ತು.
ಆಗ್ರಾದ ತಾಜ್ಮಹಲ್ ಗೆ ಬಾಂಬ್ ದಾಳಿ ಭೀತಿ, ಪ್ರವಾಸಿಗರ ಸ್ಥಳಾಂತರ
ಇಪಿಎಫ್ ಒ ತನ್ನ ಚಂದಾದಾರರಿಗೆ 2016-17ರಲ್ಲಿ ಶೇ.8.65 ಮತ್ತು 2017-18ರಲ್ಲಿ ಶೇ.8.55ರಷ್ಟು ಬಡ್ಡಿ ದರ(Interest Rate)ವನ್ನು ನೀಡಿತ್ತು. 2015-16ರಲ್ಲಿ ಬಡ್ಡಿ ದರ ಶೇ.8.8ಕ್ಕೆ ಏರಿಕೆ ಯಾಗಿತ್ತು.
2013-14 ಮತ್ತು 2014-15ರಲ್ಲಿ ಶೇ.8.75ಬಡ್ಡಿ ದರ ನೀಡಿದ್ದು, 2012-13ರಲ್ಲಿ ಶೇ.8.5ರಷ್ಟು ಹೆಚ್ಚಾಗಿದೆ. 2011-12ರಲ್ಲಿ ಭವಿಷ್ಯ ನಿಧಿ ಮೇಲೆ ಇಪಿಎಫ್ ಒ ಶೇ.8.25ರಷ್ಟು ಬಡ್ಡಿ ದರವನ್ನು ನೀಡಿತ್ತು.
ಮಗಳ ಶಿರಚ್ಚೇದ ಮಾಡಿ ಪೋಲಿಸ್ ಠಾಣೆಗೆ ತಂದ ತಂದೆ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.