EPFO: ನಿಮ್ಮ ಖಾತೆಗೆ PF ಹಣ ಬಂತಾ? ಚಿಟಿಕೆ ಹೊಡೆಯೋದ್ರಲ್ಲಿ ಈ ರೀತಿ ಪತ್ತೆ ಮಾಡಿ
EPFO Balance: ಉದ್ಯೋಗದಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ಕೂಡ EPF ಹಣವು ತುಂಬಾ ದೊಡ್ಡ ಬೆಂಬಲವಾಗಿದೆ, ಆದ್ದರಿಂದ ಕಾಲಕಾಲಕ್ಕೆ ನಿಮ್ಮ ಇಪಿಎಫ್ ಬ್ಯಾಲೆನ್ಸ್ ಎಷ್ಟು (EPF Account) ಎಂದು ನೀವು ಪರಿಶೀಲಿಸುತ್ತಲೇ ಇರಬೇಕು. ಇದು ನಿಮಗೆ ಗೊತ್ತಿಲ್ಲ ಎಂದರೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಪಿಎಫ್ ಖಾತೆಯಲ್ಲಿ ಹಣ ಎಷ್ಟಿದೆ ಎಂಬುದನ್ನು ಪತ್ತೆ ಹಚ್ಚುವುದು ಯಾವುದೇ ಒಂದು ರಾಕೆಟ್ ಸೈನ್ಸ್ ಅಲ್ಲ.
ನವದೆಹಲಿ: EPFO Balance - ಉದ್ಯೋಗದಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ಕೂಡ EPF ಹಣವು ತುಂಬಾ ದೊಡ್ಡ ಬೆಂಬಲವಾಗಿದೆ, ಆದ್ದರಿಂದ ಕಾಲಕಾಲಕ್ಕೆ ನಿಮ್ಮ ಇಪಿಎಫ್ ಬ್ಯಾಲೆನ್ಸ್ ಎಷ್ಟು ಎಂದು ನೀವು ಪರಿಶೀಲಿಸುತ್ತಲೇ ಇರಬೇಕು. ಇದು ನಿಮಗೆ ಗೊತ್ತಿಲ್ಲ ಎಂದರೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಪಿಎಫ್ ಖಾತೆಯಲ್ಲಿ ಹಣ ಎಷ್ಟಿದೆ ಎಂಬುದನ್ನು ಪತ್ತೆ ಹಚ್ಚುವುದು ಯಾವುದೇ ಒಂದು ರಾಕೆಟ್ ಸೈನ್ಸ್ ಅಲ್ಲ. ಇಲ್ಲಿ ನಾವು ನಿಮಗೆ ಹೇಳಲು ಹೊರಟಿರುವ ಕೆಲ ವಿಧಾನಗಳ ಮೂಲಕ ನೀವು ಸುಲಭವಾಗಿ ನಿಮ್ಮ PF ಬ್ಯಾಲೆನ್ಸ್ ಅನ್ನು ತಿಳಿದುಕೊಳ್ಳಬಹುದು
EPF ಬ್ಯಾಲೆನ್ಸ್ ತಿಳಿದುಕೊಳ್ಳುವ ಸುಲಭವಾದ ವಿಧಾನ
EPF ಬ್ಯಾಲೆನ್ಸ್ ತಿಳಿದುಕೊಳ್ಳಲು ನಿಮ್ಮ ಬಳಿ ಒಟ್ಟು ನಾಲ್ಕು ವಿಧಾನಗಳಿವೆ. ಮೊಬೈಲ್ ಮೂಲಕ SMS ಕಳುಹಿಸುವುದು, ಮಿಸ್ಸೇದ್ ಕಾಲ್ ನೀಡಿ, ವೆಬ್ಸೈಟ್ ಮೂಲಕ EPF ಖಾತೆ ಪರಿಶೀಲನೆಯನ್ನು ನೀವು ಮಾಡಬಹುದಾಗಿದೆ. ಆದರೆ, ಇದಕ್ಕಾಗಿ ನಿಮ್ಮ UAN ಸಂಖ್ಯೆ ಸಕ್ರೀಯವಾಗಿರಬೇಕು. ಇದಕ್ಕಾಗಿ ನಿಮ್ಮ UAN ಸಂಖ್ಯೆ ಬ್ಯಾಂಕ್ ಖಾತೆಯ ಜೊತೆಗೆ, ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂದ್ ಇದ್ದರೆ ಮಾತ್ರ ಈ ಸೇವೆಗಳ ಲಾಭವನ್ನು ನೀವು ಪಡೆದುಕೊಳ್ಳಬಹುದು. ಹಾಗಾದರೆ ಒಂದೊಂದಾಗಿ ಈ ವಿಧಾನಗಳನ್ನು ತಿಳಿದುಕೊಳ್ಳೋಣ.
SMS ಮೂಲಕವೂ ಇಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು
ನಿಮ್ಮ ಫೋನ್ ನಿಂದ ಸಂದೇಶ ಕಳುಹಿಸುವ ಮೂಲಕವೂ ಪಿಎಫ್ ಖಾತೆಯ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು. ಇದಕ್ಕಾಗಿ, ನಿಮ್ಮ ನೋಂದಾಯಿತ ದೂರವಾಣಿ ಸಂಖ್ಯೆಯಿಂದ ' ‘EPFOHO UAN LAN’ ಎಂದು ಟೈಪ್ ಮಾಡಿ 7738299899 ನಂಬರ್ ಗೆ ಕಳುಹಿಸಬೇಕು. ನೀವು ಮೆಸೇಜ್ (SMS) ಕಳುಹಿಸಿದ ಸ್ವಲ್ಪ ಸಮಯದ ನಂತರ ಇಪಿಎಫ್ ಬ್ಯಾಲೆನ್ಸ್ ಮಾಹಿತಿ ತಿಳಿಯುತ್ತದೆ.
'UMANG' ಅಪ್ಲಿಕೇಶನ್ ಮೂಲಕವೂ ತಿಳಿದುಕೊಳ್ಳಬಹುದು
ಗ್ರಾಹಕರು ತಮ್ಮ ಪಿಎಫ್ ಖಾತೆ ಮಾಹಿತಿಯನ್ನು ಉಮಾಂಗ್ ಆ್ಯಪ್ ಮೂಲಕ ಪಡೆಯಬಹುದು. ಇದಕ್ಕಾಗಿ, Umang App ನಲ್ಲಿ EPFO ವಿಭಾಗಕ್ಕೆ ಹೋಗಬೇಕಾಗುತ್ತದೆ. ಇಲ್ಲಿ Employee Centric Services ಕ್ಲಿಕ್ ಮಾಡಬೇಕು. ಇದರ ನಂತರ, View Passbook ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಪಾಸ್ಬುಕ್ ವೀಕ್ಷಿಸಲು UAN ಸಂಖ್ಯೆಯೊಂದಿಗೆ ಲಾಗಿನ್ ಆಗಬೇಕು. ಇದರ ನಂತರ, ನಿಮ್ಮ ಫೋನ್ ಸಂಖ್ಯೆಗೆ ಒಟಿಪಿ ಬರುತ್ತದೆ, ಅದನ್ನು ನಮೂದಿಸಿದ ನಂತರ, ನಿಮ್ಮ ಪಾಸ್‌ಬುಕ್ ಕಾಣುತ್ತದೆ.
ಇದನ್ನೂ ಓದಿ-ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸಲು ಇಂದೇ ಕೊನೆಯ ಅವಕಾಶ
Missed Call ಮೂಲಕ ಬ್ಯಾಲೆನ್ಸ್ ಎಷ್ಟು ತಿಳಿದುಕೊಳ್ಳುವುದು ಹೇಗೆ?
ಇಪಿಎಫ್ ಬ್ಯಾಲೆನ್ಸ್ (EPF Balance) ತಿಳಿದುಕೊಳ್ಳಲು ಇಪಿಎಫ್‌ಒನ ಆನ್‌ಲೈನ್ ಪೋರ್ಟಲ್ ಅಥವಾ ಅಪ್ಲಿಕೇಶನ್ ಅಗತ್ಯವಿಲ್ಲ. ಕೇವಲ ಮಿಸ್ಡ್ ಕಾಲ್ (Missed call) ನೀಡುವ ಮೂಲಕ ಪಿಎಫ್ ಖಾತೆಯ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇಪಿಎಫ್‌ಒ (EPFO) ಟ್ವೀಟ್ ಮಾಡುವ ಮೂಲಕ ಒಂದು ಸಂಖ್ಯೆಯನ್ನು ಶೇರ್ ಮಾಡಿದೆ. 011-22901406 ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ನಿಮ್ಮ ಪಿಎಫ್ ಬ್ಯಾಲೆನ್ಸ್ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು. ಈ ಸಂಖ್ಯೆಗೆ ಕರೆ ಮಾಡಿದರೆ ರಿಂಗ್ ಆದ ತಕ್ಷಣ ಫೋನ್ ಡಿಸ್ಕನೆಕ್ಟ್ ಆಗುತ್ತದೆ. ನಂತರ ಇಪಿಎಫ್ ಬ್ಯಾಲೆನ್ಸ್ ಬಗ್ಗೆ ಇಪಿಎಫ್‌ಒನಿಂದ ಮೆಸೇಜ್ ಬರುತ್ತದೆ.
ಇದನ್ನೂ ಓದಿ-Jio ಗ್ರಾಹಕರಿಗೆ ಸಿಹಿ ಸುದ್ದಿ: 39 ರೂ.ಗೆ ಅನಿಯಮಿತ ಇಂಟರ್ನೆಟ್ ಪ್ಲಾನ್!
EPFO ವೆಬ್ ಸೈಟ್ ಗೆ ಭೇಟಿ ನೀಡಿ ಪರಿಶೀಲಿಸುವುದು ಹೇಗೆ?
EPFO ಅಧಿಕೃತ ವೆಬ್ ಸೈಟ್ ಆಗಿರುವ epfindia.gov.inಗೆ ಭೇಟಿ ನೀಡುವ ಮೂಲಕ ಕೂಡ ನೀವು ನಿಮ್ಮ PF ಖಾತೆಯ ಸಂಪೂರ್ಣ ಮಾಹಿತಿ ಪಡೆಯಬಹುದು. ಅಧಿಕೃತ ವೆಬ್ ಸೈಟ್ ನ ಹೋಮ್ ಪೇಜ್ ನಲ್ಲೀಯೇ ನಿಮಗೆ EPF Passbook Portal ಆಯ್ಕೆ ಕಾಣಿಸಲಿದೆ. ಇದರಲ್ಲಿ ನೀವು ನಿಮ್ಮ UAN ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಬೇಕು. ಬಳಿಕ Download/View Passbook ಮೇಲೆ ಕ್ಲಿಕ್ಕಿಸಬೇಕು. ಈ ಪಾಸ್ ಬುಕ್ ನಲ್ಲಿ ನೀವು ನಿಮ್ಮ PF ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.
ಇದನ್ನೂ ಓದಿ-Bank Alert: ಕೆಲವೇ ಗಂಟೆಗಳಲ್ಲಿ ನಿಂತುಹೋಗಲಿದೆ ಬ್ಯಾಂಕುಗಳ ಈ ಸೇವೆ, ಬೇಗ ನಿಮ್ಮ ಕೆಲ್ಸಾ ಮುಗಿಸಿಕೊಳ್ಳಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.