Jio ಗ್ರಾಹಕರಿಗೆ ಸಿಹಿ ಸುದ್ದಿ: 39 ರೂ.ಗೆ ಅನಿಯಮಿತ ಇಂಟರ್ನೆಟ್ ಪ್ಲಾನ್!

39 ರೂ ಪ್ರಿಪೇಯ್ಡ್ ಯೋಜನೆಯೊಂದಿಗೆ ಜಿಯೋ 14 ದಿನಗಳ ಮಾನ್ಯತೆಯನ್ನು ನೀಡುತ್ತಿದ್ದು

Last Updated : May 21, 2021, 12:44 PM IST
  • ಜಿಯೋ 100 ರೂ.ಗಿಂತ ಕಡಿಮೆ ವೆಚ್ಚದ ಹಲವಾರು ಕೈಗೆಟುಕುವ ರಿಚಾರ್ಜ್ ಪ್ಲಾನ್
  • ಜಿಯೋ ಹೊಸದಾಗಿ ಎರಡು ಪ್ಲಾನ್ ಜಾರಿಗೆ ತಂದಿದೆ
  • ಒಂದು ಕೇವಲ 39 ಮತ್ತು 69 ರೂ.
Jio ಗ್ರಾಹಕರಿಗೆ ಸಿಹಿ ಸುದ್ದಿ: 39 ರೂ.ಗೆ ಅನಿಯಮಿತ ಇಂಟರ್ನೆಟ್ ಪ್ಲಾನ್! title=

ನವದೆಹಲಿ : ತನ್ನ ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿ, ರಿಲಯನ್ಸ್ ಜಿಯೋ 100 ರೂ.ಗಿಂತ ಕಡಿಮೆ ವೆಚ್ಚದ ಹಲವಾರು ಕೈಗೆಟುಕುವ ರಿಚಾರ್ಜ್ ಪ್ಲಾನ್ ನೀಡುತ್ತಿದೆ. ಸಧ್ಯ ಜಿಯೋ ಹೊಸದಾಗಿ ಎರಡು ಪ್ಲಾನ್ ಜಾರಿಗೆ ತಂದಿದೆ ಒಂದು ಕೇವಲ 39 ಮತ್ತು 69 ರೂ.

ಜಿಯೋ 39 ರೂ. ಪ್ಲಾನ್ :

39 ರೂ ಪ್ರಿಪೇಯ್ಡ್ ಯೋಜನೆಯೊಂದಿಗೆ ಜಿಯೋ(Jio) 14 ದಿನಗಳ ಮಾನ್ಯತೆಯನ್ನು ನೀಡುತ್ತಿದ್ದು, ಇದು ಪ್ರತಿದಿನ 100 ಎಂಬಿ ಹೈಸ್ಪೀಡ್ ಡೇಟಾ, ಅನಿಯಮಿತ ಕರೆ ಮತ್ತು 14 ದಿನಗಳ ವ್ಯಾಲಿಡಿಟಿ ನೀಡುತ್ತದೆ. ನೀವು ಪ್ರತಿದಿನ 100 ಎಂಬಿ ಡೇಟಾವನ್ನು ಪಡೆಯುವುದರಿಂದ, ಈ ಯೋಜನೆಯು ಒಟ್ಟು 1400 ಎಂಬಿ ಹೈಸ್ಪೀಡ್ ಡೇಟಾವನ್ನು ನೀಡುತ್ತದೆ. ನೀವು 100 MB ಯ ದೈನಂದಿನ ಕೋಟಾವನ್ನು  ಮುಕ್ತಾಯದ ನಂತರ, ವೇಗವು 64 Kbps ಗೆ ಕಡಿಮೆಯಾಗುತ್ತದೆ.

ಇದನ್ನೂ ಓದಿ : Gold-Silver Rate : ಆಭರಣ ಪ್ರಿಯರ ಗಮನಕ್ಕೆ : ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ಬೆಲೆ!

ಜಿಯೋ 69 ರೂ. ಪ್ಲಾನ್ :

ಜಿಯೋ ಮತ್ತೊಂದು ಕೈಗೆಟುಕುವ ಯೋಜನೆಯನ್ನು ಕೇವಲ 69 ರೂಗಳಿಗೆ ನೀಡುತ್ತಿದೆ. ಈ ಯೋಜನೆ(Rs 69 prepaid plan)ಯು ದಿನಕ್ಕೆ 0.5 ಹೈಸ್ಪೀಡ್ ಡೇಟಾವನ್ನು ನೀಡುತ್ತದೆ, ಅಂದರೆ ಗ್ರಾಹಕರು ಪ್ಯಾಕೇಜ್‌ನೊಂದಿಗೆ ಒಟ್ಟು 7 ಜಿಬಿ ಹೈಸ್ಪೀಡ್ ಡೇಟಾವನ್ನು ಪಡೆಯುತ್ತಾರೆ. ಬಳಕೆದಾರರು ಅನಿಯಮಿತ ಕರೆ ಮತ್ತು 14 ದಿನಗಳ ವ್ಯಾಲಿಡಿಟಿ ಪ್ರಯೋಜನಗಳನ್ನು ಸಹ ಪಡೆಯಬಹುದು. ಹೈ-ಸ್ಪೀಡ್ ಡೇಟಾದ ಬಳಕೆಯ ನಂತರ, ಬಳಕೆದಾರರು 64 ಕೆಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಅನ್ನು ಬಳಸಬಹುದು.

ಇದನ್ನೂ ಓದಿ : Bank Alert: ಕೆಲವೇ ಗಂಟೆಗಳಲ್ಲಿ ನಿಂತುಹೋಗಲಿದೆ ಬ್ಯಾಂಕುಗಳ ಈ ಸೇವೆ, ಬೇಗ ನಿಮ್ಮ ಕೆಲ್ಸಾ ಮುಗಿಸಿಕೊಳ್ಳಿ

ಹೊಸದಾಗಿ ಪ್ರಾರಂಭಿಸಲಾದ ಎರಡು ಕೊಡುಗೆಗಳಲ್ಲದೆ, ಜಿಯೋ ಫೋನ್(Jio Phone) ತಿಂಗಳಿಗೆ 300 ನಿಮಿಷಗಳ ಹೊರಹೋಗುವ ಕರೆಗಳನ್ನು ಜಿಯೋಫೋನ್ ಗ್ರಾಹಕರಿಗೆ ಉಚಿತವಾಗಿ ನೀಡುತ್ತಿದೆ. ಕೋವಿಡ್ ಮಧ್ಯೆ ತಮ್ಮ ಖಾತೆಗಳನ್ನು ರೀಚಾರ್ಜ್ ಮಾಡಲು ಸಾಧ್ಯವಾಗದ ಬಳಕೆದಾರರಿಗೆ ಫ್ರೀಬಿಯನ್ನು ಒದಗಿಸಲಾಗಿದೆ. ಈ ಕೊಡುಗೆಯಲ್ಲಿ, ಬಳಕೆದಾರರು ಪ್ರತಿದಿನ 10 ನಿಮಿಷಗಳ ಉಚಿತ ಕರೆ ಪಡೆಯುತ್ತಾರೆ. ರಿಲಯನ್ಸ್ ಫೌಂಡೇಶನ್ ಸಹಭಾಗಿತ್ವದಲ್ಲಿ ಜಿಯೋ ಈ ಉಪಕ್ರಮವನ್ನು ಘೋಷಿಸಿತ್ತು.

ಇದನ್ನೂ ಓದಿ : ITR Filing : ತೆರಿಗೆದಾರರಿಗೆ ಗುಡ್ ನ್ಯೂಸ್: IT ರಿಟರ್ನ್ಸ್ ದಿನಾಂಕ 2 ತಿಂಗಳು ವಿಸ್ತರಣೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News