Dr Subhash Chandra Exclusive interview: ಜೀ ಬ್ಯುಸಿನೆಸ್ ಮ್ಯಾನೇಜಿಂಗ್ ಎಡಿಟರ್ ಅನಿಲ್ ಸಿಂಘ್ವಿ ಅವರೊಂದಿಗಿನ ವಿಶೇಷ  ಸಂದರ್ಶನದಲ್ಲಿ ಎಸ್ಸೆಲ್ ಗ್ರೂಪ್‌ನ ಚೇರ್‌ಮನ್‌ ಡಾ.ಸುಭಾಷ್ ಚಂದ್ರ ಅವರು ಮಾತನಾಡಿದ್ದು, ಸಮೂಹವು ಶೀಘ್ರದಲ್ಲೇ ಸಾಲ ಮುಕ್ತವಾಗಲಿದೆ ಎಂದು ಹೇಳಿದರು. ಆಸ್ತಿಯನ್ನು ಮಾರಾಟ ಮಾಡುವ ಮೂಲಕ ಸಾಲವನ್ನು ಪೂರೈಸುವ ಗುರಿ ಹೊಂದಲಾಗಿದೆ. ಕಂಪನಿಯು ಇಲ್ಲಿಯವರೆಗೆ 40,000 ಕೋಟಿ ರೂ. ಸಾಲ ಮರುಪಾವತಿ ಮಾಡಿದೆ. ನಾವು 50,000 ಕೋಟಿ ರೂಪಾಯಿ ಬಡ್ಡಿಯನ್ನು ಕೂಡ ಪಾವತಿಸಿದ್ದೇವೆ ಎಂದು ತಿಳಿಸಿದರು. ಇದಲ್ಲದೆ, ಕೆಲವು ಹೆಚ್ಚು ಬೆಲೆಬಾಳುವ ಆಸ್ತಿಯನ್ನು ಮಾರಾಟ ಮಾಡುವ ಮೂಲಕ ಸಾಲವನ್ನು ಮರುಪಾವತಿಸಿದ್ದೇವೆ. ಸಾಲವನ್ನು ಮರುಪಾವತಿಸಲು ತಮ್ಮ ಮನೆಯನ್ನು ಸಹ ಅಡಮಾನವಿಟ್ಟಿದ್ದೇನೆ ಎಂದು ಡಾ.ಸುಭಾಷ್ ಚಂದ್ರ ಅವರು ಹೇಳಿದರು. ವಿನಮ್ರತೆಯಿಂದ ಪ್ರತಿಯೊಬ್ಬರ ಸಾಲ ತೀರಿಸುವ ಪಣ ತೊಟ್ಟಿದ್ದೇವೆ ಎಂದು ತಿಳಿಸಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Banking Frauds: ಬ್ಯಾಂಕ್ ಗ್ರಾಹಕರಿಗೆ ಶಾಕ್ ನೀಡಿದ ಆರ್ಬಿಐ, ಗ್ರಾಹಕರು ಏನ್ ಮಾಡ್ಬೇಕು?


ಶೀಘ್ರದಲ್ಲೇ ಝೀ ಎಂಟರ್‌ಪ್ರೈಸಸ್-ಸೋನಿ ವಿಲೀನ : 


ಡಿಶ್ ಟಿವಿ ಇಂದು ಸಾಲ ಮುಕ್ತವಾಗಿದೆ. ಝೀ ಎಂಟರ್‌ಪ್ರೈಸಸ್-ಸೋನಿ ವಿಲೀನ ಪ್ರಕ್ರಿಯೆಯು ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಈ ದಿನಗಳಲ್ಲಿ ಅವರು ಸ್ಟಾರ್ಟ್‌ಅಪ್‌ಗಳಿಗೆ ಒತ್ತು ನೀಡುತ್ತಿರುವುದಾಗಿ ತಿಳಿಸಿದರು. ಜೀವನದ ಏರಿಳಿತಗಳ ಕುರಿತು ಮಾತನಾಡಿದ ಡಾ.ಸುಭಾಷ್ ಚಂದ್ರ ಅವರು, ಒಬ್ಬ ಪ್ರಬಲ ವ್ಯಕ್ತಿ ಎಂದಿಗೂ ಸಮಸ್ಯೆ ಬಂದಾಗ ಓಡಿಹೋಗುವುದಿಲ್ಲ. ಆದರೆ ಆತ ಧೈರ್ಯದಿಂದ ಅದರ ವಿರುದ್ಧ ಹೋರಾಡುತ್ತಾನೆ. ಕೆಟ್ಟ ಸಮಯ ಸಾಕಷ್ಟು ಪಾಠಗಳನ್ನು ಕಲಿಸಿದೆ ಎಂದು ಹೇಳಿದರು.


ಸಾಲ ಮರುಪಾವತಿ ಪ್ರಕ್ರಿಯೆ ಯಾವಾಗ ಪ್ರಾರಂಭವಾಯಿತು?


ಎಸ್ಸೆಲ್ ಗ್ರೂಪ್‌ನ ಚೇರ್‌ಮನ್‌ ಡಾ.ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಎಸ್ಸೆಲ್ ಗ್ರೂಪ್ 2019 ರ ಜನವರಿಯಲ್ಲಿ ಸಾಲವನ್ನು ಮರುಪಾವತಿ ಮಾಡಲು ಪ್ರಾರಂಭಿಸಿತು ಎಂದು ಬಹಿರಂಗಪಡಿಸಿದರು. ಮಾರ್ಚ್ 31, 2023 ರೊಳಗೆ ನಮ್ಮ ಎಲ್ಲಾ ಸಾಲಗಳನ್ನು ಮರುಪಾವತಿ ಮಾಡುವುದು ನಮ್ಮ ಗುರಿಯಾಗಿತ್ತು. ಆದರೆ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ಕೆಲವು ಕಾರಣಗಳಿಂದ ಆಸ್ತಿಗಳನ್ನು ಮಾರಾಟ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಕೆಲವು ಆಸ್ತಿಗಳನ್ನು ಮಾರಾಟ ಮಾಡುವ ಸಾಧ್ಯತೆಯಿದೆ, ನಂತರ ಸಾಲವನ್ನು ಮರುಪಾವತಿಸಲಾಗುವುದು ಎಂದು ಹೇಳಿದರು.


ಸಾಲದ ಸುತ್ತ ವಿವಾದಗಳನ್ನು ಸೃಷ್ಟಿಸುತ್ತಿರುವ ವಿಚಾರವಾಗಿ ಕೇಳಿದಾಗ, ಎಸ್ಸೆಲ್ ಗ್ರೂಪ್ ಅನ್ನು ಸಾಲದಾತರು ಸಾಕಷ್ಟು ಬೆಂಬಲಿಸಿದ್ದಾರೆ ಎಂದು ಡಾ.ಸುಭಾಷ್ ಚಂದ್ರ ಅವರು ಉತ್ತರಿಸಿದರು. ಎಸ್ಸೆಲ್ ಗ್ರೂಪ್ ಮೌಲ್ಯಯುತ ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ಸಾಲವನ್ನು ಮರುಪಾವತಿಸಿದೆ ಎಂದು ಸಾಲದಾತರಿಗೆ ತಿಳಿದಿದೆ. 1967 ರಿಂದ 2019 ರವರೆಗೆ ಎಸ್ಸೆಲ್ ಗ್ರೂಪ್ ಎಂದಿಗೂ ಡೀಫಾಲ್ಟ್ ಮಾಡಿಲ್ಲ ಎಂದು ಡಾ.ಸುಭಾಷ್ ಚಂದ್ರ ಅವರು ಹೇಳಿದರು. 


ಇದನ್ನೂ ಓದಿ: AICPI ಸಂಖ್ಯೆಗಳಲ್ಲಿ ಏರಿಕೆ, :DAಯಲ್ಲಿಯೂ ಆಗುವುದು ಭಾರೀ ಹೆಚ್ಚಳ! ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.