AICPI ಸಂಖ್ಯೆಗಳಲ್ಲಿ ಏರಿಕೆ, :DAಯಲ್ಲಿಯೂ ಆಗುವುದು ಭಾರೀ ಹೆಚ್ಚಳ! ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ

DA Hike Latest News : ಪ್ರತಿ ತಿಂಗಳು ಲೇಬರ್ ಬ್ಯೂರೋ ಪ್ರಕಟಿಸುವ CPI-IW ಆಧರಿಸಿ ಇದನ್ನು ಲೆಕ್ಕಹಾಕಲಾಗುತ್ತದೆ.  ಜುಲೈನಲ್ಲಿ ನೌಕರರ ತುಟ್ಟಿ ಭತ್ಯೆ   4 ಪ್ರತಿಶತದಷ್ಟು  ಹೆಚ್ಚಳವಾದರೆ ಒಟ್ಟು ಡಿಎ 46 ಪ್ರತಿಶತಕ್ಕೆ ಏರಿದಂತಾಗುತ್ತದೆ.  

Written by - Ranjitha R K | Last Updated : Jun 1, 2023, 11:55 AM IST
  • ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿ.
  • ತುಟ್ಟಿ ಭತ್ಯೆಯಲ್ಲಿ ಮತ್ತೆ ಶೇಕಡಾ 4 ರಷ್ಟು ಹೆಚ್ಚಾಗುವ ನಿರೀಕ್ಷೆ
  • ಮುಂದಿನ ಪರಿಷ್ಕರಣೆಯಲ್ಲಿ ಇದು 46% ಕ್ಕೆ ಹೆಚ್ಚಾಗಬಹುದು.
AICPI ಸಂಖ್ಯೆಗಳಲ್ಲಿ ಏರಿಕೆ, :DAಯಲ್ಲಿಯೂ ಆಗುವುದು ಭಾರೀ ಹೆಚ್ಚಳ! ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ  title=

ಬೆಂಗಳೂರು : ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿ. ಜುಲೈನಲ್ಲಿ, ತುಟ್ಟಿ ಭತ್ಯೆಯಲ್ಲಿ ಮತ್ತೆ ಶೇಕಡಾ 4 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. 7ನೇ ವೇತನ ಆಯೋಗದ ಮ್ಯಾಟ್ರಿಕ್ಸ್‌ನಲ್ಲಿ ಉಲ್ಲೇಖಿಸಲಾದ ಪ್ರಮಾಣದ ಪ್ರಕಾರ, ಪ್ರಸ್ತುತ ತುಟ್ಟಿಭತ್ಯೆ ಅನುಪಾತವು 42% ಆಗಿದೆ. ಮುಂದಿನ ಪರಿಷ್ಕರಣೆಯಲ್ಲಿ ಇದು 46% ಕ್ಕೆ  ಏರಿಕೆಯಾಗಬಹುದು.   ಏಪ್ರಿಲ್ ವರೆಗಿನ AICPI ಸೂಚ್ಯಂಕ ಡೇಟಾದಿಂದ ಇದನ್ನು ಅಂದಾಜಿಸಲಾಗಿದೆ. ಜುಲೈನಲ್ಲಿ ನೌಕರರ ತುಟ್ಟಿ ಭತ್ಯೆ  4 ಪ್ರತಿಶತದಷ್ಟು ಹೆಚ್ಚಳವಾದರೆ ಒಟ್ಟು ಡಿಎ 46 ಪ್ರತಿಶತಕ್ಕೆ ಏರಿದಂತಾಗುತ್ತದೆ. ಈ ಮೂಲಕ  ನೌಕರರ ವೇತನದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ.

2023 ರ ಏಪ್ರಿಲ್‌ನಲ್ಲಿ ಕೈಗಾರಿಕಾ ಕಾರ್ಮಿಕರ (CPI-IW) ಗ್ರಾಹಕ ಬೆಲೆ ಸೂಚ್ಯಂಕವು 0.9 ಪಾಯಿಂಟ್‌ಗಳಿಂದ 134.2 ಕ್ಕೆ ಏರಿಕೆಯಾಗಿದೆ. , ಹಿಂದಿನ ತಿಂಗಳಿಗೆ ಹೋಲಿಸಿದರೆ ಇದರಲ್ಲಿ 0.68 ಶೇಕಡಾ ಹೆಚ್ಚಾಗಿದೆ.

ಇದನ್ನೂ ಓದಿ : LPG Price: ತಿಂಗಳಾರಂಭದಲ್ಲೇ ಗುಡ್ ನ್ಯೂಸ್: LPG ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ: ಇನ್ಮುಂದೆ ಇಷ್ಟೇ ಹಣ!

ಜುಲೈನಲ್ಲಿ ರಿಯಾಯಿತಿ ದರ ಎಷ್ಟು ಹೆಚ್ಚಾಗುತ್ತದೆ? : 
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಅಂದರೆ ಜನವರಿ ಮತ್ತು ಜುಲೈನಲ್ಲಿ ಹೆಚ್ಚಿಸಲಾಗುತ್ತದೆ. ಪ್ರತಿ ತಿಂಗಳು ಲೇಬರ್ ಬ್ಯೂರೋ ಪ್ರಕಟಿಸುವ CPI-IW ಆಧರಿಸಿ ಇದನ್ನು ಲೆಕ್ಕಹಾಕಲಾಗುತ್ತದೆ. ಜನವರಿ, ಫೆಬ್ರವರಿ ಮತ್ತು ಮಾರ್ಚ್ ಸಂಖ್ಯೆಗಳ ನಂತರ, ಈಗ ಕಾರ್ಮಿಕ ಸಚಿವಾಲಯವು ಏಪ್ರಿಲ್‌ನ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಅದರಂತೆ, AICPI ರೇಟಿಂಗ್ ಸಂಖ್ಯೆ 133.3 ರಿಂದ 134.2 ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನೌಕರರ  ತುಟ್ಟಿ ಭತ್ಯೆ 4 ಪ್ರತಿಶತದಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಅಂದರೆ ತುಟ್ಟಿ ಭತ್ಯೆ  42 ಪ್ರತಿಶತದಿಂದ 46 ಪ್ರತಿಶತಕ್ಕೆ ಹೆಚ್ಚಾಗಲಿದೆ.  

ಜಾರಿಗೆ ಬರಲಿದೆ ಸರ್ಕಾರದ ಹೊಸ ನಿಯಮ :
ಆದರೂ ಮೇ 2023 ರಿಂದ ಜೂನ್ 2023 ರವರೆಗಿನ ಅಂಕಿಅಂಶಗಳು  ಹೊರ ಬರಲಿವೆ. ಈ ಅಂಕಿ ಅಂಶಗಳು ಬಹಿರಂಗವಾದ ಬಳಿಕವಷ್ಟೇ ಜುಲೈಯಲ್ಲಿ ಎಷ್ಟು ಪ್ರತಿಶತ  ತುಟ್ಟಿ ಭತ್ಯೆ ಹೆಚ್ಚಳವಾಗಲಿದೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ. 

ಇದನ್ನೂ ಓದಿ : Aadhaar Card Update: ಆಧಾರ್ ಕಾರ್ಡ್ನಲ್ಲಿ ಫೋಟೋ ಬದಲಾಯಿಸುವುದು ಇದೀಗ ಸುಲಭ!

ಹೊಸ ದರಗಳು ಜುಲೈ 1, 2023 ರಿಂದ ಜಾರಿಗೆ ಬರಬಹುದು. ಆದರೆ ರಕ್ಷಾಬಂಧನ್ ಮತ್ತು ದೀಪಾವಳಿ ನಡುವೆ ಹೊಸ ದರದ ಬಗ್ಗೆ ಘೋಷಣೆ ಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಆದರೆ, ಉದ್ಯೋಗಿಗಳಿಗೆ ಗ್ರಾಚ್ಯುಟಿ ದರ ಎಷ್ಟು ಏರಿಕೆಯಾಗಲಿದೆ ಮತ್ತು ಅದನ್ನು ಯಾವಾಗ ಪ್ರಕಟಿಸಲಾಗುವುದು ಎನ್ನುವ ಸ್ಪಷ್ಟ ಮಾಹಿತಿ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. 

ಜನವರಿ 2023 ರ  ತುಟ್ಟಿ ಭತ್ಯೆಯನ್ನು  ಮಾರ್ಚ್‌ನಲ್ಲಿ ಘೋಷಿಸಲಾಯಿತು. ಮುಂದಿನ ಡಿಎ ಹೆಚ್ಚಳ ಜುಲೈನಲ್ಲಿ ಆಗಲಿದೆ. ಜುಲೈ ತಿಂಗಳಲ್ಲೂ ತುಟ್ಟಿ ಭತ್ಯೆ ಶೇ.4ರಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಮೇ ಮತ್ತು ಜೂನ್‌ನ ಸಿಪಿಐ-ಐಡಬ್ಲ್ಯೂ ಡೇಟಾ ಬಿಡುಗಡೆಯಾದ ನಂತರ ಜುಲೈನಲ್ಲಿ ಡಿಎ ಎಷ್ಟು ಹೆಚ್ಚಾಗುತ್ತದೆ ಎಂಬುದನ್ನು ನಿರ್ಧರಿಸಲಾಗುತ್ತದೆ. 

ಇದನ್ನೂ ಓದಿ : RBI ಮತ್ತೆ ಬಿಡುಗಡೆ ಮಾಡಲಿದೆಯೇ 1000 ರೂ.? ಈ ಬಗ್ಗೆ ಕೇಂದ್ರ ಬ್ಯಾಂಕ್ ನೀಡಿದ ಮಾಹಿತಿ ಇದು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News