ಬೆಂಗಳೂರು : ಡಿಸೆಂಬರ್ 2018 ರಿಂದ,ಕೇಂದ್ರ ಸರ್ಕಾರವು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರ್ಷಕ್ಕೆ 6,000 ರೂ.ಗಳನ್ನು ಮೂರು ಸಮಾನ ಕಂತುಗಳಲ್ಲಿ ನೀಡುತ್ತಿದೆ.ಈ ಯೋಜನೆಯ ಹೆಸರು ಪಿಎಂ ಕಿಸಾನ್ ಸಮ್ಮಾನ್ ನಿಧಿ.ಇದರಡಿ ರೈತರಿಗೆ ವರ್ಷಕ್ಕೆ ಮೂರು ಬಾರಿ 2 ಸಾವಿರ ರೂ.ಯಂತೆ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.ಇದುವರೆಗೆ ರೈತರ ಖಾತೆಗೆ ಒಟ್ಟು 17ನೇ ಕಂತು ಘೋಷಣೆಯಾಗಿದೆ.ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಸಣ್ಣ ಮತ್ತು ಅತಿ ಸಣ್ಣ ರೈತರು ಮಾತ್ರ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಪ್ರಯೋಜನವನ್ನು ಪಡೆಯಬಹುದು.ಅಂದರೆ 2 ಹೆಕ್ಟೇರ್‌ವರೆಗೆ ಜಂಟಿ ಭೂಮಿ ಅಥವಾ ಮಾಲೀಕತ್ವ ಹೊಂದಿರುವವರು ಈ ಯೋಜನೆಯ ಲಾಭವನ್ನು ಪಡೆಯಬಹುದು.ಪಿಎಂ ಕಿಸಾನ್ ಯೋಜನೆಗೆ ಅಗತ್ಯವಿರುವ ದಾಖಲೆಗಳಲ್ಲಿ ಪೌರತ್ವ ಪ್ರಮಾಣಪತ್ರ, ಭೂ ದಾಖಲೆಗಳು, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರಗಳು ಸೇರಿವೆ.


ಇದನ್ನೂ ಓದಿ : ದುಬಾರಿಯಾಗಲಿದೆ Zomato ಮತ್ತು Swiggy ಆಹಾರ


ಪಿಎಂ ಕಿಸಾನ್ ನೋಂದಣಿ ಮಾಡುವುದು ಹೇಗೆ? :
1.ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಮೊದಲು ಅದರ ಅಧಿಕೃತ ವೆಬ್‌ಸೈಟ್ https://pmkisan.gov.in/
ಗೆ ಹೋಗಬೇಕು.
2.ನಂತರ ಮುಖಪುಟದಲ್ಲಿ ಮೂಲೆಯಲ್ಲಿರುವ new Farmer Registration ಮೇಲೆ ಕ್ಲಿಕ್ ಮಾಡಬೇಕು. 
3.ಅದರ ಮೇಲೆ ಕ್ಲಿಕ್ ಮಾಡಿದ ನಂತರ ಹೊಸ ವಿಂಡೋ ತೆರೆಯುತ್ತದೆ.
4.ಈ ಪುಟದಲ್ಲಿ ನಿಮಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನೀವು ಭರ್ತಿ ಮಾಡಬೇಕು.
5.ನಂತರ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು get OTP   ಬಟನ್ ಕ್ಲಿಕ್ ಮಾಡಿ. 
6. ಈಗ ಸ್ವಲ್ಪ ಸಮಯದ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. 
7.ಈ OTP ಅನ್ನು ನಮೂದಿಸಿದಾಗ, ಹೊಸ ಪುಟವು ತೆರೆಯುತ್ತದೆ.
8.ಈ ಪುಟದಲ್ಲಿ ನೀವು ಎಲ್ಲಾ ಮಾಹಿತಿಯನ್ನು ಒಮ್ಮೆ ನಮೂದಿಸಬೇಕು. 9. ನಂತರ ನಿಮ್ಮ ಎಲ್ಲಾ ಪ್ರಮುಖ ದಾಖಲೆಗಳ ಸಾಫ್ಟ್ ಕಾಪಿಯನ್ನು ಅಪ್‌ಲೋಡ್ ಮಾಡಿ ಮತ್ತು ಸೇವ್ ಬಟನ್ ಕ್ಲಿಕ್ ಮಾಡಿ.


ಅಲ್ಲದೆ, ಅಧಿಕೃತ ಇಮೇಲ್ ಐಡಿ pmkisan-ict@gov.in ಅನ್ನು ಸಂಪರ್ಕಿಸಬಹುದು.ನೀವು PM ಕಿಸಾನ್ ಯೋಜನೆ ಸಹಾಯವಾಣಿ ಸಂಖ್ಯೆ - 155261 ಅಥವಾ 1800115526 (ಟೋಲ್ ಫ್ರೀ) ಅಥವಾ 011-23381092 ಅನ್ನು ಕೂಡಾ ಸಂಪರ್ಕಿಸಬಹುದು.


ಇದನ್ನೂ ಓದಿ : ಸರ್ಕಾರಿ ನೌಕರರ ವೇತನ ಪದ್ದತಿಯಲ್ಲಿಯೇ ಬದಲಾವಣೆ ! ಮೂಲ ವೇತನದಲ್ಲಿಯೇ ಭಾರೀ ಹೆಚ್ಚಳ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.