BSNL ತನ್ನ ಬಳಕೆದಾರರಿಗಾಗಿ ವಿಶೇಷ ಸ್ವಾತಂತ್ರ್ಯ ದಿನದ ಕೊಡುಗೆಯನ್ನು ಹೊತ್ತು ತಂದಿದೆ. ಈ ಕೊಡುಗೆಯ ಅಡಿಯಲ್ಲಿ, ಬಳಕೆದಾರರು ಸಾಮಾನ್ಯ ದರಕ್ಕಿಂತ ಕಡಿಮೆ ವೆಚ್ಚದಲ್ಲಿ 75 ದಿನಗಳ ಬ್ರಾಡ್‌ಬ್ಯಾಂಡ್ ಸೇವೆಯನ್ನು ಪಡೆಯುತ್ತಾರೆ. ಟೆಲಿಕಾಂ ಟಾಕ್ ವರದಿಯ ಪ್ರಕಾರ, BSNL ನ ಈ ಕೊಡುಗೆಯು 275 ರೂಗಳಿಗೆ 75 ದಿನಗಳವರೆಗೆ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆಯನ್ನು ಒದಗಿಸುತ್ತದೆ. ಕಂಪನಿಯ ಸ್ವಾತಂತ್ರ್ಯ ದಿನಾಚರಣೆ 2022 ಆಫರ್ 449, 599 ಮತ್ತು 999 ಪ್ಲಾನ್‌ಗಳಲ್ಲಿ ಲಭ್ಯವಿದೆ. ಈ ಕೊಡುಗೆ ಮತ್ತು ಯೋಜನೆಯಲ್ಲಿ ಲಭ್ಯವಿರುವ ಇತರ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ರಿಯಾಯಿತಿಯ ಬಳಿಕ ರೂ. 599ರ ಯೋಜನೆ ರೂ 275 ಕ್ಕೆ
ಈ ಕೊಡುಗೆಗಳ ಅಡಿಯಲ್ಲಿ, ಕಂಪನಿಯು ರೂ 499 ಮತ್ತು ರೂ 599 ಪ್ಲಾನ್‌ ಗಳನ್ನೂ ರೂ 275 ಗೆ ಚಂದಾದಾರರಾಗಲು ಅವಕಾಶವನ್ನು ನೀಡುತ್ತಿದೆ. 75 ದಿನಗಳ ನಂತರ ನೀವು ಮತ್ತೆ  ಈ ಯೋಜನೆಗಳಿಗೆ ನಿಯಮಿತ ಸುಂಕವನ್ನು ಪಾವತಿಸಬೇಕು. ರೂ 999 ರ ಬ್ರಾಡ್‌ಬ್ಯಾಂಡ್ ಯೋಜನೆಯ ಕುರಿತು ಹೇಳುವುದಾದರೆ, ಆಫರ್ ಅಡಿಯಲ್ಲಿ ನೀವು ಅದನ್ನು ರೂ 775ಕ್ಕೆ ಪಡೆದುಕೊಳ್ಳಬಹುದು. ಇಲ್ಲಿ ವಿಶೇಷತೆ ಎಂದರೆ, ರಿಯಾಯಿತಿಯ ಬಳಿಕವೂ ಕೂಡ ಕಂಪನಿಯು ಈ ಯೋಜನೆಗಳಲ್ಲಿ ಲಭ್ಯವಿರುವ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.


ಇದನ್ನೂ ಓದಿ-ಹಿರಿಯ ನಾಗರಿಕರಿಗೆ ರೈಲು ಪ್ರಯಾಣದಲ್ಲಿ ಮತ್ತೆ ಸಿಗಲಿದೆ ರಿಯಾಯಿತಿ .! ಆದರೆ ನಿಯಮದಲ್ಲಿ ಸ್ವಲ್ಪ ಬದಲಾವಣೆ


ಯೋಜನೆಯಲ್ಲಿ ಲಭ್ಯವಿರುವ ಪ್ರಯೋಜನಗಳು
ಕಂಪನಿಯು ತನ್ನ ರೂ 449 ಯೋಜನೆಯಲ್ಲಿ 30Mbps ಇಂಟರ್ನೆಟ್ ವೇಗವನ್ನು ನೀಡುತ್ತಿದೆ. ಯೋಜನೆಯಲ್ಲಿ ನೀವು ಒಟ್ಟು 3300GB (3.3TB) ಡೇಟಾವನ್ನು ಪಡೆಯುತ್ತೀರಿ. ಡೇಟಾ ಮಿತಿ ಮುಗಿದ ನಂತರ, ಯೋಜನೆಯಲ್ಲಿ ಲಭ್ಯವಿರುವ ಇಂಟರ್ನೆಟ್ ವೇಗವನ್ನು 2Mbps ಗೆ ಇಳಿಕೆಯಾಗುತ್ತದೆ. ಇದೇ ರೀತಿ ಕಂಪನಿಯು ತನ್ನ ರೂ 599 ಯೋಜನೆಯಲ್ಲಿ 60Mbps ವೇಗದಲ್ಲಿ 3.3TB ಡೇಟಾವನ್ನು ನೀಡುತ್ತಿದೆ. ರೂ 999 ಯೋಜನೆಯಲ್ಲಿ  ನೀವು 150Mbps ವೇಗದಲ್ಲಿ 2TB ಡೇಟಾವನ್ನು ಪಡೆಯುತ್ತೀರಿ. ಡಿಸ್ನಿ + ಹಾಟ್‌ಸ್ಟಾರ್ ಮತ್ತು ಸೋನಿ ಲಿವ್ ಹೊರತುಪಡಿಸಿ, ನೀವು ಯೋಜನೆಯಲ್ಲಿ ಅನೇಕ ಇತರ ಜನಪ್ರಿಯ OTT ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಸಹ ಪಡೆಯಬಹುದು. ಆದರೆ, ಕಂಪನಿಯ ಈ ಅದ್ಭುತ ಕೊಡುಗೆ ಹೊಸ ಬಳಕೆದಾರರಿಗಾಗಿ ಮಾತ್ರ ಸೀಮಿತವಾಗಿವೆ.


ಇದನ್ನೂ ಓದಿ-12 ನೇ ಕಂತು ಕೈ ಸೇರುವ ಮುನ್ನವೇ ಬದಲಾಯಿತು ಪಿಎಂ ಕಿಸಾನ್ ನಿಯಮ

2022 ರೂ ಯೋಜನೆಯನ್ನು ಪ್ರಾರಂಭಿಸಲಾಗಿದೆ
ಇತ್ತೀಚೆಗಷ್ಟೇ BSNL ತನ್ನ ರೂ 2022 ರೀಚಾರ್ಜ್ ಯೋಜನೆಯನ್ನು ಪ್ರಾರಂಭಿಸಿದೆ. ಕಂಪನಿಯ ಈ ಯೋಜನೆಯು 300 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ, ನೀವು ಪ್ರತಿ ತಿಂಗಳು ಇಂಟರ್ನೆಟ್ ಬಳಕೆಗಾಗಿ 75 GB ಡೇಟಾವನ್ನು ಪಡೆಯುತ್ತೀರಿ. ಯೋಜನೆಯಲ್ಲಿ ಲಭ್ಯವಿರುವ ಡೇಟಾವನ್ನು ಮೊದಲ 60 ದಿನಗಳವರೆಗೆ ಬಳಸಬಹುದು. ಯೋಜನೆಯಲ್ಲಿ, ಕಂಪನಿಯು ಅನಿಯಮಿತ ಕರೆಯೊಂದಿಗೆ ನಿತ್ಯ 100 ಉಚಿತ SMS ಅನ್ನು ಸಹ ನೀಡುತ್ತಿದೆ. ಈ ಯೋಜನೆಯು ಆಗಸ್ಟ್ 31 ರವರೆಗೆ ಲಭ್ಯವಿರಲಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.