12 ನೇ ಕಂತು ಕೈ ಸೇರುವ ಮುನ್ನವೇ ಬದಲಾಯಿತು ಪಿಎಂ ಕಿಸಾನ್ ನಿಯಮ

ಪಿಎಂ ಕಿಸಾನ್ ನಿಧಿಯ 12 ನೇ ಕಂತು ಬರುವ ಮೊದಲು, ಸರ್ಕಾರವು  ಖಾತೆಯ ಸ್ಟೇಟಸ್ ಪರಿಶೀಲಿಸುವ ವಿಧಾನವನ್ನು ಬದಲಾಯಿಸಿದೆ. ಈಗ ನೋಂದಣಿ ಸಂಖ್ಯೆಯನ್ನು ಹೊರತುಪಡಿಸಿ, ಮೊಬೈಲ್ ಸಂಖ್ಯೆಯ ಮೂಲಕ ಸ ಕೂಡಾ ಸ್ಟೇಟಸ್ ಪರಿಶೀಲಿಸಬಹುದು.

Written by - Ranjitha R K | Last Updated : Aug 12, 2022, 09:20 AM IST
  • ಶೀಘ್ರದಲ್ಲೇ ರೈತರ ಖಾತೆಗೆ ಸೇರಲಿದೆ ಪಿಎಂ ಕಿಸಾನ್ 12 ನೇ ಕಂತು
  • ಈಗ ಬದಲಾಗಿದೆ ಖಾತೆ ಪರಿಶೀಲಿಸುವ ವಿಧಾನ
  • ಆರಂಭದಿಂದ ಇಲ್ಲಿಯವರೆಗೆ 9 ಬದಲಾವಣೆ
12 ನೇ ಕಂತು ಕೈ ಸೇರುವ ಮುನ್ನವೇ ಬದಲಾಯಿತು ಪಿಎಂ ಕಿಸಾನ್ ನಿಯಮ  title=
PM Kisan Update (file photo)

ಬೆಂಗಳೂರು : ಪಿಎಂ ಕಿಸಾನ್ ಸಮ್ಮಾನ್ ನಿಧಿಯ 12 ನೇ ಕಂತು ಶೀಘ್ರದಲ್ಲೇ ರೈತರ ಖಾತೆಗೆ ಬರಲಿದೆ. 10 ಕೋಟಿಗೂ ಹೆಚ್ಚು ರೈತರು ಈ ಕಂತಿನ ನಿರೀಕ್ಷೆಯಲ್ಲಿದ್ದಾರೆ. 12 ನೇ ಕಂತು ಖಾತೆ ಸೇರಲು ಇನ್ನೆಷ್ಟು ಸಮಯ ಕಾಯಬೇಕು ಎಂದು ತಿಳಿಯಬೇಕಾದರೆ ನಿಮ್ಮ ಖಾತೆಯ ಸ್ಟೇಟಸ್ ಪರಿಶೀಲಿಸಬೇಕು. ಆದರೆ ಇದೀಗ ಸ್ಟೇಟಸ್ ಪರಿಶೀಲಿಸುವ ವಿಧಾನವನ್ನು   ಸರ್ಕಾರ ಬದಲಾಯಿಸಿದೆ. 

ಆರಂಭದಿಂದ ಇಲ್ಲಿಯವರೆಗೆ 9 ಬದಲಾವಣೆ :
 ಈ ಮೊದಲು ಜಾರಿಗೆ ತಂದ ಬದಲಾವಣೆಯ ನಂತರ ಫಲಾನುಭವಿಯು ಮೊಬೈಲ್ ಸಂಖ್ಯೆಯಿಂದ  ಖಾತೆಯ ಸ್ಟೇಟಸ್ ನೋಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಬದಲಾದ ನಿಯಮದ ಪ್ರಕಾರ ಮತ್ತೆ  ಮೊಬೈಲ್ ಸಂಖ್ಯೆಯ ಸಹಾಯದಿಂದ ಸ್ಟೇಟಸ್ ತಿಳಿದುಕೊಳ್ಳಬಹುದು. ಇದಲ್ಲದೆ, ನಿಮ್ಮ ನೋಂದಣಿ ಸಂಖ್ಯೆಯ ಮೂಲಕ ಕೂಡಾ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ 9 ಬದಲಾವಣೆಗಳನ್ನು ಮಾಡಲಾಗಿದೆ. 

ಇದನ್ನೂ ಓದಿ : Gold Price Today : ನಿನ್ನೆ ಅಗ್ಗವಾಗಿದ್ದ ಬಂಗಾರದ ಬೆಲೆಯಲ್ಲಿ ಇಂದು ಎಷ್ಟು ಏರಿಕೆಯಾಗಿದೆ ?

ಹಿಂದಿನ ವ್ಯವಸ್ಥೆ ಹೇಗಿತ್ತು? :
ಹಿಂದೆ ಇದ್ದ ನೀತಿಯ ಪ್ರಕಾರ ಯೋಜನೆಗೆ ನೋಂದಣಿಯಾದ ನಂತರ  ಖಾತೆಯ ಸ್ಟೇಟಸ್ ಅನ್ನು ಖುದ್ದು ಪರಿಶೀಲಿಸಬಹುದಾಗಿತ್ತು. ಅಂದರೆ ಖಾತೆಗೆ ಎಷ್ಟು ಕಂತು ಬಂದಿದೆ, ಯಾವ ಖಾತೆಯಲ್ಲಿ ಹಣ ಜಮೆಯಾಗಿದೆ ಇತ್ಯಾದಿಗಳನ್ನೂ ತಿಳಿದುಕೊಳ್ಳಬಹುದಾಗಿತ್ತು. ಈ ಹಿಂದೆ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಅಥವಾ ಖಾತೆ ಸಂಖ್ಯೆಯನ್ನು ನಮೂದಿಸುವ ಮೂಲಕ ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಸ್ಥಿತಿಯನ್ನು ಪರಿಶೀಲಿಸಬಹುದಾಗಿತ್ತು. ಆದರೆ ಅದಕ್ಕೆ ತಡೆ ನೀಡಲಾಯಿತು. ಮೊದಲು ಆಧಾರ್ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯೊಂದಿಗೆ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದಾಗಿತ್ತು. ಆದರೆ ಈಗ ಈ ಪ್ರಕ್ರಿಯೆಗೆ  ಖಾತೆ ಸಂಖ್ಯೆ ಬದಲು ಮೊಬೈಲ್ ಸಂಖ್ಯೆ ಹಾಗೂ ನೋಂದಣಿ ಸಂಖ್ಯೆಯನ್ನು ಕಡ್ಡಾಯಗೊಳಿಸಲಾಗಿದೆ.

ಸ್ಟೇಟಸ್ ಪರಿಶೀಲಿಸುವುದು ಹೇಗೆ?
1.ಮೊದಲಿಗೆ ಪಿಎಂ ಕಿಸಾನ್ ವೆಬ್‌ಸೈಟ್ www.pmkisan.gov.inಗೆ  ಭೇಟಿ ನೀಡಿ 
2.  ಇಲ್ಲಿ ಫಾರ್ಮ್ಸ್ ಕಾರ್ನರ್‌ಗೆ ಹೋಗುವ ಮೂಲಕ, Beneficiary Status ಮೇಲೆ ಕ್ಲಿಕ್ ಮಾಡಿ. 
3. ನಂತರ ತೆರೆಯುವ ವೆಬ್‌ಪುಟದಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ. 
ಮೊಬೈಲ್ ಸಂಖ್ಯೆಯನ್ನು ಸಹ ನಮೂದಿಸಬಹುದು. 
4. ಇದರ ನಂತರ, ಎಂಟರ್ ಇಮೇಜ್ ಟೆಕ್ಸ್ಟ್‌ನ ಮುಂದೆ ನೀಡಿರುವ ಬಾಕ್ಸ್‌ನಲ್ಲಿ ಇಮೇಜ್ ಕೋಡ್ ಅನ್ನು ನಮೂದಿಸಿ  Get data ಮೇಲೆ ಕ್ಲಿಕ್ ಮಾಡಿ.
5. ಈಗ ನೀವು ಎಡಭಾಗದಲ್ಲಿ ನೋ ಯುವರ್ ರಿಜಿಸ್ಟ್ರೇಶನ್ ನಂಬರ್ ಲಿಂಕ್ ಕಾಣಿಸುತ್ತದೆ. 
6. ಇಲ್ಲಿ PM ಕಿಸಾನ್ ಖಾತೆಯೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ Get Mobile OTP ಕ್ಲಿಕ್ ಮಾಡಿ. 
7. ನೀಡಿರುವ ಬಾಕ್ಸ್‌ನಲ್ಲಿ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನಮೂದಿಸಿ Get Details ಮೇಲೆ  ಕ್ಲಿಕ್ ಮಾಡಿ.

 ಇದನ್ನೂ ಓದಿ : Car On EMI: ತಿಂಗಳಿಗೆ ಕೇವಲ ರೂ.10 ಸಾವಿರ ಪಾವತಿಸಿ, ಮಾರುತಿ ಕಂಪನಿಯ ಈ ಹೊಚ್ಚ ಹೊಸ ಕಾರನ್ನು ಮನೆಗೆ ಕೊಂಡೊಯ್ಯಿರಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News