ನವದೆಹಲಿ : Extremely Poor Category : ಒಬ್ಬ ವ್ಯಕ್ತಿಯ ಸಂಪಾದನೆ  ದಿನಕ್ಕೆ 167 ರೂಪಾಯಿಗಳಿಗಿಂತ ಕಡಿಮೆಯಿದ್ದರೆ, ಇನ್ನು ಮುಂದೆ ಆತನನ್ನು  ಅವನನ್ನು ಅತ್ಯಂತ ಬಡವ ಎಂದು ಪರಿಗಣಿಸಲಾಗುತ್ತದೆ. ಇದು ವಿಶ್ವಬ್ಯಾಂಕ್‌ನ ಹೊಸ ಮಾನದಂಡವಾಗಿದೆ. ಈ ಹಿಂದೆ ದಿನಕ್ಕೆ 147 ರೂಪಾಯಿ ಗಳಿಸುವ ವ್ಯಕ್ತಿಯನ್ನು ಕಡು ಬಡವ ಎಂದು ಪರಿಗಣಿಸಲಾಗುತ್ತಿತ್ತು. ಹಣದುಬ್ಬರ, ಜೀವನ ವೆಚ್ಚದಲ್ಲಿ ಹೆಚ್ಚಳ, ತೀವ್ರ ಬಡತನ ರೇಖೆ ಸೇರಿದಂತೆ ಹಲವು ನಿಯತಾಂಕಗಳ ಆಧಾರದ ಮೇಲೆ ವಿಶ್ವ ಬ್ಯಾಂಕ್ ಕಾಲಕಾಲಕ್ಕೆ ಡೇಟಾವನ್ನು ಬದಲಾಯಿಸುತ್ತಲೇ ಇರುತ್ತದೆ.


COMMERCIAL BREAK
SCROLL TO CONTINUE READING

ಪ್ರಸ್ತುತ, 2015 ರ ಡೇಟಾದ ಆಧಾರದ ಮೇಲೆ ಮೌಲ್ಯಮಾಪನವನ್ನು ಮಾಡಲಾಗುತ್ತದೆ. ವಿಶ್ವ ಬ್ಯಾಂಕ್ ಈ ವರ್ಷದ ಅಂತ್ಯದ ವೇಳೆಗೆ ಈ ಹೊಸ ಮಾನದಂಡವನ್ನು ಜಾರಿಗೆ ತರಲಿದೆ. 2017 ರ ಬೆಲೆಗಳನ್ನು ಬಳಸಿಕೊಂಡು ಹೊಸ ಜಾಗತಿಕ ಬಡತನ ರೇಖೆಯನ್ನು ಹೊಂದಿಸಲಾಗಿದೆ. 


ಇದನ್ನೂ ಓದಿ : Gold Price Today : ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ ತಿಳಿಯಿರಿ


ಇದರರ್ಥ ದಿನಕ್ಕೆ 167ರೂಪಾಯಿಗಿಂತ ಕಡಿಮೆ ಆದಾಯ ಹೊಂದಿದ್ದರೆ ಆ ಕುಟುಂಬ  ಬಡತನದಲ್ಲಿ ವಾಸಿಸುತ್ತಿದೆ ಎಂದು ಪರಿಗಣಿಸಲಾಗುತ್ತದೆ. 2017 ರಲ್ಲಿ, ಜಾಗತಿಕವಾಗಿ ಕೇವಲ 700 ಮಿಲಿಯನ್ ಜನರು ಈ ಸ್ಥಿತಿಯಲ್ಲಿ ಬದುಕುತ್ತಿದ್ದರು. ಆದರೆ ಪ್ರಸ್ತುತ ಈ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.


ಬಿಪಿಎಲ್ ಸ್ಥಿತಿ ಕಡಿಮೆ : 


ಇನ್ನು ಭಾರತದ ಬಗ್ಗೆ ಹೇಳುವುದಾದರೆ 2011 ಕ್ಕೆ ಹೋಲಿಸಿದರೆ 2019 ರಲ್ಲಿ BPL ನ ಸ್ಥಿತಿಯಲ್ಲಿ 12.3% ರಷ್ಟು ಕಡಿಮೆಯಾಗಿದೆ. ಇದಕ್ಕೆ ಕಾರಣ ಗ್ರಾಮೀಣ ಬಡತನದ ಇಳಿಕೆ ಅಂದರೆ ಅಲ್ಲಿ ಆದಾಯ ಹೆಚ್ಚಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಡವರ ಸಂಖ್ಯೆಯು 2011 ರಲ್ಲಿ 22.5 ಪ್ರತಿಶತದಷ್ಟಿತ್ತು. 2019 ರಲ್ಲಿ ಇದು ಶೇಕಡಾ 10.2 ಕ್ಕೆ ಅಂದರೆ ಅರ್ಧದಷ್ಟು ಕಡಿಮೆಯಾಗಿದೆ. 


ಇದನ್ನೂ ಓದಿ : LPG Subsidy: ಉಚಿತ ಎಲ್ಪಿಜಿ ಸಿಲಿಂಡರ್ ನಿಯಮಗಳಲ್ಲಿ ಬದಲಾವಣೆ ಸಾಧ್ಯತೆ! ನೀವೂ ತಿಳಿದುಕೊಳ್ಳಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ