New LPG connection: LPG ಮೇಲೆ ಸಬ್ಸಿಡಿ ಪಡೆಯುವ ಗ್ರಾಹಕರಿಗಾಗಿ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ಉಜ್ವಲ ಯೋಜನೆಯಡಿ, ಉಚಿತ ಎಲ್‌ಪಿಜಿ ಗ್ಯಾಸ್ ಸಂಪರ್ಕದ ಮೇಲೆ ಲಭ್ಯವಿರುವ ಸಬ್ಸಿಡಿ ನಿಯಮಗಳಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಆದ್ದರಿಂದ, ನೀವು ಕೂಡ ಉಜ್ವಲ ಯೋಜನೆಯಡಿ ಉಚಿತ LPG ಸಂಪರ್ಕವನ್ನು ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ, ಈ ಸುದ್ದಿಯನ್ನು ತಪ್ಪದೆ ಓದಿ.
LPG ಕನೆಕ್ಷನ್ ಮೇಲಿನ ಸಬ್ಸಿಡಿಯ ಸಂರಚನೆ ಬದಲಾಗುತ್ತಿದೆಯಾ?
ವರದಿಗಳ ಪ್ರಕಾರ, ಯೋಜನೆಯಡಿಯಲ್ಲಿ ಹೊಸ ಕನೆಕ್ಷನ್ ಗಳಿಗಾಗಿ ಅಸ್ತಿತ್ವದಲ್ಲಿರುವ ಸಬ್ಸಿಡಿಯ ರಚನೆಯಲ್ಲಿ ಬದಲಾವಣೆ ಸಾಧ್ಯತೆ ಇದೆ ಎನ್ನಲಾಗಿದೆ. ಪೆಟ್ರೋಲಿಯಂ ಸಚಿವಾಲಯವು ಎರಡು ಹೊಸ ಸಂರಚನೆಗಳ ಮೇಲೆ ತನ್ನ ಕಾರ್ಯವನ್ನು ಪ್ರಾರಂಭಿಸಿದೆ ಮತ್ತು ಅದನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಒಂದು ಕೋಟಿ ಹೊಸ ಅಡುಗೆ ಅನಿಲ ಸಂಪರ್ಕಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಆದರೆ ಇದೀಗ ಸರ್ಕಾರವು OMC ಗಳ ಪರವಾಗಿ ಮುಂಗಡ ಸಬ್ಸಿಡಿ ಪಾವತಿಯ ಸಂರಚನೆ ಬದಲಾಯಿಸಲಿದೆ ಎನ್ನಲಾಗಿದೆ.
ಮುಂಗಡ ಸಬ್ಸಿಡಿ ಪಾವತಿಯ ವಿಧಾನ ಬದಲಾಗಲಿದೆಯೇ?
ವರದಿಗಳ ಪ್ರಕಾರ ಇನ್ಮುಂದೆ ಕಂಪನಿಗಳು ತಾವು ಪಡೆಯುತ್ತಿದ್ದ 1600 ರೂ.ಗಳ ಅಡ್ವಾನ್ಸ್ ಅನ್ನು ಮುಂಗಡವಾಗಿ ಪಡೆದುಕೊಳ್ಳಲಿವೆ ಎನ್ನಲಾಗಿದೆ. ಪ್ರಸ್ತುತ ತೈಲೋತ್ಪಾದಕ ಕಂಪನಿಗಳು ಈ ಮುಂಗಡ ಹಣವನ್ನು ಇಎಂಐ ರೂಪದಲ್ಲಿ ಪಡೆದುಕೊಳ್ಳುತ್ತಿದ್ದವು. ಈ ವಿಷಯಕ್ಕೆ ಸಂಬಂಧಪಟ್ಟ ತಜ್ಞರು ಹೇಳುವ ಪ್ರಕಾರ ಸರ್ಕಾರವು ಯೋಜನೆಯಲ್ಲಿ ಉಳಿದ 1600 ರೂ.ಗಳ ಸಬ್ಸಿಡಿ ನೀಡುವುದನ್ನು ಮುಂದುವರೆಸಲಿದೆ ಎಂದಿದ್ದಾರೆ.
ಇದನ್ನೂ ಓದಿ-Sukanya Samriddhi ಯೋಜನೆಯಲ್ಲಿ ಸರ್ಕಾರದಿಂದ 5 ಪ್ರಮುಖ ಬದಲಾವಣೆಗಳು!
ಸರ್ಕಾರ ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುತ್ತದೆ
ಸರ್ಕಾರದ ವತಿಯಿಂದ ಉಜ್ವಲ ಯೋಜನೆಯಡಿ ಗ್ರಾಹಕರಿಗೆ 14.2 ಕೆಜಿಯ ಸಿಲಿಂಡರ್ ಮತ್ತು ಸ್ಟೌ ನೀಡಲಾಗುತ್ತದೆ. ಇದರ ಬೆಲೆ ಸುಮಾರು 3200 ರೂಪಾಯಿಗಳು ಮತ್ತು ಇದು ಸರ್ಕಾರದಿಂದ 1600 ರೂಪಾಯಿಗಳ ಸಬ್ಸಿಡಿಯನ್ನು ಪಡೆಯುತ್ತದೆ ಮತ್ತು ತೈಲ ಮಾರ್ಕೆಟಿಂಗ್ ಕಂಪನಿಗಳು (OMC ಗಳು) ಮುಂಗಡವಾಗಿ 1600 ರೂಪಾಯಿಗಳನ್ನು ಪಡೆದುಕೊಳ್ಳುತ್ತವೆ. ಪ್ರಸ್ತುತ OMC ಗಳು ಈ ಸಬ್ಸಿಡಿ ಮೊತ್ತವನ್ನು ರೀಫಿಲ್‌ಗಳಲ್ಲಿ EMI ರೂಪದಲ್ಲಿ ವಿಧಿಸುತ್ತವೆ.
ಇದನ್ನೂ ಓದಿ-BIS On Footwear: ಪಾದರಕ್ಷೆ ವ್ಯಾಪಾರಿಗಳಿಗೊಂದು ಭಾರಿ ನೆಮ್ಮದಿಯ ಸುದ್ದಿ ಘೋಷಿಸಿದ ಕೇಂದ್ರ ಸರ್ಕಾರ
ಉಜ್ವಲಾ ಯೋಜನೆಯಲ್ಲಿ ನೋಂದಾಯಿಸುವುದು ಹೇಗೆ?
>> ಉಜ್ವಲ ಯೋಜನೆಗೆ ಹೆಸರು ನೋಂದಾಯಿಸುವುದು ಅತ್ಯಂತ ಸುಲಭದ ಕೆಲಸವಾಗಿದೆ.
>> ಉಜ್ವಲಾ ಯೋಜನೆಯಡಿ, ಬಿಪಿಎಲ್ ಕುಟುಂಬದ ಮಹಿಳೆಯು ಗ್ಯಾಸ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಬಹುದು.
>> ಇದಕ್ಕಾಗಿ pmujjwalayojana.com ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು.
>> ಹೆಸರು ನೋಂದಾಯಿಸಲು, ನೀವು ಮೊದಲು ಫಾರ್ಮ್ ಅನ್ನು ಭರ್ತಿ ಮಾಡಬೇಕು ಮತ್ತು ಅದನ್ನು ಹತ್ತಿರದ ಎಲ್‌ಪಿಜಿ ವಿತರಕರ ಬಳಿ ಸಲ್ಲಿಸಬೇಕು.
>> ಈ ನಮೂನೆಯಲ್ಲಿ, ಅರ್ಜಿ ಸಲ್ಲಿಸಿದ ಮಹಿಳೆ ತನ್ನ ಸಂಪೂರ್ಣ ವಿಳಾಸ, ಜನ್ ಧನ್ ಬ್ಯಾಂಕ್ ಖಾತೆ ಮತ್ತು ಎಲ್ಲಾ ಕುಟುಂಬ ಸದಸ್ಯರ ಆಧಾರ್ ಸಂಖ್ಯೆಯನ್ನು ಸಹ ಒದಗಿಸಬೇಕು.
>> ನಂತರ, ಅದನ್ನು ಪ್ರೋಸೆಸ್ ಮಾಡಿದ ನಂತರ, ದೇಶದ ತೈಲ ಮಾರುಕಟ್ಟೆ ಕಂಪನಿಗಳು ಅರ್ಹ ಫಲಾನುಭವಿಗೆ LPG ಸಂಪರ್ಕವನ್ನು ಒದಗಿಸುತ್ತವೆ.
>> ಗ್ರಾಹಕರು EMI ಅನ್ನು ಆರಿಸಿಕೊಂಡರೆ, ನಂತರ EMI ಮೊತ್ತವನ್ನು ಸಿಲಿಂಡರ್‌ನಲ್ಲಿ ಬರುವ ಸಬ್ಸಿಡಿಗೆ ಅನುಗುಣವಾಗಿ ಹೊಂದಿಸಲಾಗುತ್ತದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ