Fact Check: ಜುಲೈ ತಿಂಗಳಿನಿಂದ DA-DR ಸಿಗಲಿದೆ! ಸರ್ಕಾರಿ ನೌಕರರು ಓದಲೇ ಬೇಕಾದ ಸುದ್ದಿ ಇದು
Fact Check - ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿರುವ ಈ ಸುದ್ದಿಯ ಕುರಿತು ಹೇಳಿಕೆ ನೀಡಿರುವ ಪ್ರೆಸ್ ಇನ್ಫಾರ್ಮಶನ್ ಬ್ಯೂರೋ (PIB), ಈ ಕುರಿತಾದ ಪತ್ರ ಸಂಪೂರ್ಣ ಫೇಕ್ ಆಗಿದೆ ಎಂದು ಹೇಳಿದೆ.
ನವದೆಹಲಿ: Fact Check - ಸಾಮಾಜಿಕ ಮಾಧ್ಯಮಗಳಲ್ಲಿ ಪತ್ರವೊಂದು ಭಾರಿ ವೈರಲ್ ಆಗುತ್ತಿದೆ. ವಾಸ್ತವದಲ್ಲಿ ಕೇಂದ್ರ ಸರ್ಕಾರ, ಸರ್ಕಾರಿ ನೌಕರರ ತುಟ್ಟಿಭತ್ಯೆ (Dearness Allowance) ಹಾಗೂ ನಿವೃತ್ತ ನೌಕರರ DR (Dearness Relief)ಗೆ ಸಂಬಂಧಿಸಿದಂತೆ ಪ್ರಸ್ತುತ ಯಾವುದೇ ಘೋಷಣೆಯನ್ನು ಮಾಡಿಲ್ಲ. ಹಣಕಾಸು ಕಾರ್ಯದರ್ಶಿTV ಸೋಮನಾಥನ್ ಅವರ ಕೈಬರಹವಿರುವ ಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಪತ್ರದಲ್ಲಿ ಕೇಂದ್ರ ಸರ್ಕಾರ, ನೌಕರರ ಹಾಗೂ ಪಿಂಚಣಿದಾರರ DA ಹಾಗೂ DR ಅನ್ನು ಜುಲೈ 2021ರಿಂದ ಮತ್ತೆ ಆರಂಭಿಸಲಿದೆ ಎನ್ನಲಾಗಿದೆ.
7th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ : ಇಂದು 'DA-DR' ಹೆಚ್ಚಳ ಸಾಧ್ಯತೆ!
ಮೂರು ಕಂತುಗಳು ಬಾಕಿ ಇವೆ
ಕೇಂದ್ರ ಸರ್ಕಾರಿ ನೌಕರರಿಗೆ ಇನ್ನೂ ಮೂರು ಕಂತುಗಳ ಡಿಎ ಬರುವುದು ಬಾಕಿ ಉಳಿದಿದೆ. ಕರೋನಾ ಸಾಂಕ್ರಾಮಿಕದಿಂದಾಗಿ, ಸರ್ಕಾರವು ಡಿಎ ಅನ್ನು ಸ್ಥಗಿತಗೊಳಿಸಿತ್ತು. ಇದರೊಂದಿಗೆ, ಪಿಂಚಣಿದಾರರ ಡಿಆರ್ ಕಂತುಗಳನ್ನು ಸಹ ಪಾವತಿಸಲಾಗಿಲ್ಲ. ನೌಕರರು ಮತ್ತು ಪಿಂಚಣಿದಾರರ ಡಿಎ ಮತ್ತು ಡಿಆರ್ ನ 2020 ರ ಜನವರಿ 1, 2020, ಜುಲೈ 1 ಮತ್ತು 2021 ರ ಜನವರಿ ಕಂತುಗಳು ಬಾಕಿ ಉಳಿದಿವೆ.
ಇದನ್ನೂ ಓದಿ-Mutual Fund Investment: ಮ್ಯೂಚವಲ್ ಫಂಡ್ ಹೂಡಿಕೆಗೂ ಮುನ್ನ ಈ 5 ಸಂಗತಿಗಳು ನಿಮಗೆ ತಿಳಿದಿರಲಿ, ಲಾಭ ನಿಮ್ಮದಾಗಲಿದೆ
ಕೊರೊನಾ ಕಾರಣ ಕಂತುಗಳನ್ನು ನಿಲ್ಲಿಸಲಾಗಿದೆ
ಕರೋನಾದ ಕಾರಣ, ಜನವರಿ 1, 2020, ಜುಲೈ 1, 2020 ಮತ್ತು ಜನವರಿ 1, 2021ರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ (Dearness Allowance) ಕಂತುಗಳನ್ನು ನಿಷೇಧಿಸಲಾಗಿದೆ. ಕೇಂದ್ರ ಸರ್ಕಾರಿ ನೌಕರರು ಪ್ರಸ್ತುತ 17% ಡಿಎ ಪಡೆಯುತ್ತಿದ್ದಾರೆ. ಜೂನ್ 2021 ರವರೆಗೆ 50 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು 61 ಲಕ್ಷ ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಹೆಚ್ಚಳವನ್ನು ನಿಲ್ಲಿಸಲು ಕೇಂದ್ರ ಹಣಕಾಸು ಸಚಿವಾಲಯ ಸೂಚಿಸಿದೆ.
ಇದನ್ನೂ ಓದಿ- PAN Card ಡೌನ್‌ಲೋಡ್ ಮಾಡುವುದು ಹೇಗೆ? ಕೇವಲ 10 ನಿಮಿಷಗಳಲ್ಲಿ ಈ ರೀತಿ ಪಡೆಯಿರಿ ನಿಮ್ಮ ಪ್ಯಾನ್ ಕಾರ್ಡ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ