Fake PAN Card Alert: ಪ್ರಸ್ತುತ ದೇಶಾದ್ಯಂತ ಹೆಚ್ಚು ಚರ್ಚೆಯಾಗುತ್ತಿರುವ ವಿಷಯ ಆಧಾರ್-ಪ್ಯಾನ್ ಲಿಂಕ್. ಎಲ್ಲಾ ರೀತಿಯ ಬ್ಯಾಂಕಿಂಗ್ ವ್ಯವಹಾರಗಳಿಗೆ ಪ್ಯಾನ್ ಅತ್ಯಗತ್ಯ ದಾಖಲೆ ಆಗಿದೆ. ಅಂತೆಯೇ, ಇದೀಗ ಪ್ಯಾನ್ ಜೊತೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕೂಡ ಅತ್ಯಾವಶ್ಯಕವಾಗಿದೆ. 1,000ರೂ. ಗಳ ದಂಡ ಪಾವತಿಯೊಂದಿಗೆ ಆಧಾರ್-ಪ್ಯಾನ್ ಲಿಂಕ್ ಮಾಡಲು ಇನ್ನೆರಡು ದಿನವಷ್ಟೇ ಬಾಕಿ ಉಳಿದಿದೆ. ಇಷ್ಟರೊಳಗೆ ಈ ಕೆಲಸವನ್ನು ಪೂರ್ಣಗೊಳಿಸದಿದ್ದರೆ ನೀವು ಹೆಚ್ಚಿನ ದಂಡವನ್ನು ಪಾವತಿಸಬೇಕಾಗಬಹುದು. ಈ ಎಲ್ಲದರ ಮಧ್ಯೆ ನೀವು ಬಳಸುತ್ತಿರುವ ಪ್ಯಾನ್ ಕಾರ್ಡ್ ಅಸಲಿಯೋ ಅಥವಾ ನಕಲಿಯೋ ಎಂಬುದನ್ನೂ ಸಹ ಅವಶ್ಯವಾಗಿ ಪರಿಶೀಲಿಸಿ. ಒಂದು ವೇಳೆ ಪಾನ್ ಕಾರ್ಡ್ ನಕಲಿ ಎಂದು ತಿಳಿದು ಬಂದರೆ ನಿಮ್ಮ ಕೆಲವು ಕೆಲಸಗಳಿಗೆ ಅಡಚಣೆ ಉಂಟಾಗಬಹುದು. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಈ ಹಿಂದೆಯೂ ಕೂಡ ಹಲವು ನಕಲಿ ಪ್ಯಾನ್ ಕಾರ್ಡ್ ಸಂಬಂಧಿತ ಹಲವು ಪ್ರಕರಣಗಳು ಮುನ್ನಲೆಗೆ ಬಂದಿವೆ. ನಕಲಿ ಪ್ಯಾನ್ ಕಾರ್ಡ್ ಎಂದರೆ ಅದರ ದಾಖಲೆ ಆದಾಯ ತೆರಿಗೆ ಇಲಾಖೆ ಬಳಿ ಇಲ್ಲದ ಪ್ಯಾನ್ ಕಾರ್ಡ್ ಗಳು. ಇದೀಗ ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಜೊತೆ ಲಿಂಕ್ ಆಗದೇ ಇದ್ದರೆ ಏಪ್ರಿಲ್ 01ರಿಂದ ಅದು ನಿಷ್ಪ್ರಯೋಜಕವಾಗುತ್ತದೆ. ಮಾತ್ರವಲ್ಲ, ನಿಮ್ಮ ಹಣಕಾಸಿನ ವಹಿವಾಟುಗಳು ಕೂಡ ಸ್ಥಗಿತಗೊಳ್ಳಬಹುದು. 


ಇದನ್ನೂ ಓದಿ- ಪ್ಯಾನ್‌ ಕಾರ್ಡ್‌ದಾರರೇ ಗಮನಿಸಿ ಮಾರ್ಚ್ 31ರವರೆಗೆ ಈ ಕೆಲಸ ಮಾಡದಿದ್ದರೆ ಭಾರೀ ನಷ್ಟ


ಏನಿದು ಪ್ಯಾನ್ ಕಾರ್ಡ್? 
ಆದಾಯ ತೆರಿಗೆ ಇಲಾಖೆಯು 10 ಅಂಕಿಗಳ ಗುರುತಿನ ಸಂಖ್ಯೆಯನ್ನು ನೀಡುತ್ತದೆ. ಅದುವೇ ಪ್ಯಾನ್ ಕಾರ್ಡ್. ಎಲ್ಲಾ ರೀತಿಯ ಬ್ಯಾಂಕಿಂಗ್ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಅತ್ಯಮೂಲ್ಯವಾದ ದಾಖಲೆಯಾಗಿದೆ. ಅಂತೆಯೇ, ನಕಲಿ ಪ್ಯಾನ್ ಕಾರ್ಡ್‌ನಲ್ಲಿ ಯಾವುದೇ ವಹಿವಾಟು ಮಾಡುವುದು ಸಹ ಅಪರಾಧ. ಹಾಗಾಗಿ, ನಕಲಿ ಪ್ಯಾನ್ ಕಾರ್ಡ್‌ನಲ್ಲಿ ಯಾವುದೇ ವಹಿವಾಟು ಮಾಡುವ ಮೊದಲು , ನಿಮ್ಮ ಪ್ಯಾನ್ ಕಾರ್ಡ್  ಅಸಲಿಯೋ/ನಕಲಿಯೋ ಎಂದು ತಪ್ಪದೇ ಪರಿಶೀಲಿಸಿ. ಇದಕ್ಕಾಗಿ ನೀವು ಹೆಚ್ಚು ಕಷ್ಟಪಡುವ ಅಗತ್ಯವಿಲ್ಲ. ಕೇವಲ ಒಂದೇ ಒಂದು ನಿಮಿಷದಲ್ಲಿ ನಿಮ್ಮ ಬಳಿಯಿರುವ ಪ್ಯಾನ್ ಅಸಲಿಯೋ/ನಕಲಿಯೋ ಎಂದು ಪತ್ತೆಹಚ್ಚಬಹುದು.


ಇದನ್ನೂ ಓದಿ- ಪ್ಯಾನ್ ಆಧಾರ್ ಕಾರ್ಡ್ ಇದ್ದರೆ ಸರ್ಕಾರದ ಕಡೆಯಿಂದ ಸಿಗುವುದು ಈ ಪ್ರಯೋಜನ


ನಿಮ್ಮ ಪ್ಯಾನ್ ಕಾರ್ಡ್ ಅಸಲಿಯೋ/ನಕಲಿಯೋ? ಒಂದೇ ನಿಮಿಷದಲ್ಲಿ ಪರಿಶೀಲಿಸಿ:- 
>> ಮೊದಲನೆಯದಾಗಿ, ನೀವು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ (ಪ್ಯಾನ್ ಕಾರ್ಡ್ ಇ-ಫೈಲಿಂಗ್) ಪೋರ್ಟಲ್‌ಗೆ ಹೋಗಬೇಕು.
>> ಇಲ್ಲಿ ನೀವು ನೇರ ಮೇಲ್ಭಾಗದಲ್ಲಿರುವ 'ನಿಮ್ಮ ಪ್ಯಾನ್ ವಿವರಗಳನ್ನು ಪರಿಶೀಲಿಸಿ' ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
>> ಇದರ ನಂತರ, ಬಳಕೆದಾರರು ಪ್ಯಾನ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ (ಪ್ಯಾನ್ ಕಾರ್ಡ್ ವಿವರಗಳನ್ನು ಹೇಗೆ ಪರಿಶೀಲಿಸುವುದು).
>> ಇದರಲ್ಲಿ, ನಿಮಗೆ ಪ್ಯಾನ್ ಸಂಖ್ಯೆ, ಪ್ಯಾನ್ ಕಾರ್ಡ್ ಹೊಂದಿರುವವರ ಪೂರ್ಣ ಹೆಸರು, ಹುಟ್ಟಿದ ದಿನಾಂಕ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.
>> ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಭರ್ತಿ ಮಾಡಿದ ಮಾಹಿತಿಯು ನಿಮ್ಮ ಪ್ಯಾನ್ ಕಾರ್ಡ್‌ಗೆ ಹೊಂದಿಕೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬ ಸಂದೇಶವು ಪೋರ್ಟಲ್‌ನಲ್ಲಿ ಗೋಚರಿಸುತ್ತದೆ.
>> ಈ ಮೂಲಕ ನೀವು ಪ್ಯಾನ್ ಕಾರ್ಡ್‌ನ ಸತ್ಯಾಸತ್ಯತೆಯನ್ನು ಸುಲಭವಾಗಿ ಪತ್ತೆ ಹಚ್ಚಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.