Farmer Schemes by Government: ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ರೈತರ ಅನುಕೂಲಕ್ಕಾಗಿ ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಹಲವು ಯೋಜನೆಗಳನ್ನು ಆರಂಭಿಸಿದೆ ಮತ್ತು ಅವುಗಳಿಂದ ರೈತರಿಗೆ ಅನುಕೂಲ ಕೂಡ ಆಗಿದೆ. ಇದೇ ವೇಳೆ ಇದೀಗ ಮತ್ತೆ ಸರ್ಕಾರ ರೈತರಿಗೆ ಸಾಲ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಗಳನ್ನು ಹೇಳಿದೆ. ನೀರಾವರಿ ಯೋಜನೆಗಳು ಮತ್ತು ಇತರ ಮೂಲಸೌಕರ್ಯಗಳನ್ನು ಒಳಗೊಂಡಂತೆ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ದೀರ್ಘಾವಧಿಯ ಸಾಲಗಳನ್ನು ಒದಗಿಸುವತ್ತ ಗಮನಹರಿಸುವಂತೆ ಸಹಕಾರ ಸಚಿವ ಅಮಿತ್ ಶಾ ಅವರು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳಿಗೆ (ಎಆರ್‌ಡಿಬಿ) ಸಲಹೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಸಾಲ ನೀಡುವುದರ ಮೇಲೆ ಗಮನ ಕೇಂದ್ರೀಕರಿಸಿ
ದೇಶದಲ್ಲಿ ನೀರಾವರಿ ಭೂಮಿ ಹೆಚ್ಚಿಸುವ ಉದ್ದೇಶದಿಂದ ಸಹಕಾರಿ ಬ್ಯಾಂಕ್‌ಗಳು ಸಾಲ ನೀಡುವತ್ತ ಗಮನಹರಿಸಬೇಕು ಎಂದು ಅಮಿತ್ ಶಾ ಹೇಳಿದ್ದಾರೆ. ಸಣ್ಣ ರೈತರು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಸಹಕಾರಿ ಬ್ಯಾಂಕ್‌ಗಳು ಸಣ್ಣ ಹಿಡುವಳಿದಾರರೊಂದಿಗೆ ಸಹಕಾರ ಮನೋಭಾವದೊಂದಿಗೆ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ಯೋಚಿಸಬೇಕು ಎಂದು ಶಾ ಹೇಳಿದ್ದಾರೆ.


ಇದನ್ನೂ ಓದಿ-Aviation Turbine Fuel: ಇಂಧನ ಬೆಲೆಯಲ್ಲಿ ಭಾರೀ ಇಳಿಕೆ: ಶೇ 2.2 ಅಗ್ಗವಾದ ತೈಲ

ಅಂಕಿಅಂಶಗಳು ಏನು ಹೇಳುತ್ತವೆ
ಭಾರತವು 49.4 ಮಿಲಿಯನ್ ಎಕರೆ ಕೃಷಿ ಭೂಮಿಯನ್ನು ಹೊಂದಿದ್ದು, ಇದು ಅಮೆರಿಕದ ನಂತರ ಅತಿ ಹೆಚ್ಚು ಭೂಮಿಯಾಗಿದೆ ಎಂದು ಅವರು ಹೇಳಿದ್ದಾರೆ. ಇಡೀ ಕೃಷಿ ಭೂಮಿಗೆ ನೀರುಣಿಸಿದರೆ ಭಾರತ ಇಡೀ ಜಗತ್ತಿಗೆ ಅನ್ನ ನೀಡಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಶಾ, "ನೀವು ಕಳೆದ 90 ವರ್ಷಗಳಲ್ಲಿ ಸಹಕಾರಿ ಸಂಸ್ಥೆಗಳ ಮೂಲಕ ನೀಡಲಾಗಿರುವ ದೀರ್ಘಾವಧಿಯ ಸಾಲದ ಅವಲೋಕನ ನಡೆಸಿದರೆ  ಮತ್ತು ಅದು ಹೇಗೆ ಕಡಿಮೆಯಾಗಿದೆ ಎಂಬುದನ್ನು ಗಮನಿಸಿದರೆ, ಸಾಲ ನೀಡುವಿಕೆ ಪ್ರಮಾಣ ಹೆಚ್ಚಾಗಿಲ್ಲ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ" ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-ದೇಶದಲ್ಲಿ ಈರುಳ್ಳಿ ಕೊರತೆ ನೀಗಲು ಕೇಂದ್ರ ಸರ್ಕಾರದಿಂದ ಭರ್ಜರಿ ಪ್ಲ್ಯಾನ್‌


ಇವುಗಳ ಬಗ್ಗೆಯೂ ಗಮನ ಹರಿಸಬೇಕು
ದೀರ್ಘಾವಧಿ ಸಾಲದಲ್ಲಿ ಹಲವು ಅಡೆತಡೆಗಳಿದ್ದು, ಸಹಕಾರ ಮನೋಭಾವದಿಂದ ಈ ಅಡೆತಡೆಗಳನ್ನು ನಿವಾರಿಸುವ ಸಮಯ ಇದೀಗ ಬಂದಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಸಹಕಾರಿ ಬ್ಯಾಂಕ್‌ಗಳು ಕೇವಲ ಬ್ಯಾಂಕ್‌ಗಳಾಗಿ ಕಾರ್ಯನಿರ್ವಹಿಸದೆ ನೀರಾವರಿಯಂತಹ ಕೃಷಿ ಮೂಲಸೌಕರ್ಯಗಳ ಸ್ಥಾಪನೆಯಂತಹ ಇತರ ಸಹಕಾರಿ ಚಟುವಟಿಕೆಗಳತ್ತ ಗಮನ ಹರಿಸಬೇಕು ಎಂದು ಶಾ ಹೇಳಿದ್ದಾರೆ.


ಇದನ್ನೂ  ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.