Krishi Ashirvaad Yojana : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗಾಗಿ ವಿವಿಧ ಯೋಜನೆಗಳನ್ನು ನಡೆಸುತ್ತಿವೆ. ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವುದು ಈ ಯೋಜನೆಗಳ ಉದ್ದೇಶವಾಗಿದೆ. ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೆ ತಂದಿದೆ. ಅದೇ ರೀತಿ ಕೃಷಿ ಆಶೀರ್ವಾದ ಯೋಜನೆಯನ್ನು ಜಾರ್ಖಂಡ್ ಸರ್ಕಾರ ನಡೆಸುತ್ತಿದೆ. ಇದರಡಿ ರೈತರಿಗೆ ವಾರ್ಷಿಕ  5000 ರೂಪಾಯಿಗಳನ್ನು ನೀಡಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಕೃಷಿ ಆಶೀರ್ವಾದ ಯೋಜನೆ :
ಕೃಷಿ ಆಶೀರ್ವಾದ ಯೋಜನೆಯು ಜಾರ್ಖಂಡ್ ಸರ್ಕಾರವು ನಡೆಸುತ್ತಿರುವ ಯೋಜನೆಯಾಗಿದೆ. ಇದರಡಿ 5 ಎಕರೆ ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರಿಗೆ ಪ್ರತಿ ಎಕರೆಗೆ 5000 ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಖಾರಿಫ್ ಹಂಗಾಮಿನ ಕೃಷಿಗೆ ಮುನ್ನ ಈ  ಹಣವನ್ನು ರೈತರ ಖಾತೆಗೆ ವರ್ಗಾಯಿಸಲಾಗುವುದು. 5 ಎಕರೆ ಜಮೀನು ಹೊಂದಿರುವ ರೈತರು ಗರಿಷ್ಠ 25,000 ರೂ. ಪಡೆಯುತ್ತಾರೆ. ರಾಜ್ಯದಲ್ಲಿ ಪಿಎಂ ಕಿಸಾನ್ ನಿಧಿಯ ಲಾಭ ಪಡೆಯುವ ರೈತರಿಗೆ ಕನಿಷ್ಠ 11,000 ರೂ. ಮತ್ತು ಗರಿಷ್ಠ 31,000 ರೂ. ಸಿಗುತ್ತದೆ. 


ಇದನ್ನೂ ಓದಿ : PhonePe ಬಳಸಿ ಲೋನ್ ಪಾವತಿಸಲು ಈ ಸಿಂಪಲ್ ಟಿಪ್ಸ್ ಅನುಸರಿಸಿ


ಒಬ್ಬ ರೈತ ಒಂದು ಎಕರೆ ಅಥವಾ ಅದಕ್ಕಿಂತ ಕಡಿಮೆ ಜಮೀನು ಹೊಂದಿದ್ದರೆ, ಖಾರಿಫ್ ಹಂಗಾಮಿನ ಕಟಾವಿಗೆ ಮುಂಚಿತವಾಗಿ ಸರ್ಕಾರದಿಂದ 5000 ರೂ. ಪಡೆಯುತ್ತಾನೆ. ಪಿಎಂ ಕಿಸಾನ್ ಅಡಿಯಲ್ಲಿ ಈಗಾಗಲೇ ವಾರ್ಷಿಕ 6000 ರೂ.ಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಈ ಮೂಲಕ ವರ್ಷದಲ್ಲಿ ಒಟ್ಟು 11,000 ರೂ. ಪಡೆಯುವುದು ಸಾಧ್ಯವಾಗುತ್ತದೆ. ಅದೇ ರೀತಿ 5 ಎಕರೆ ಕೃಷಿ ಭೂಮಿ ಹೊಂದಿರುವ ರೈತನ ಖಾತೆಗೆ 25 ಸಾವಿರ ರೂ. ರಾಜ್ಯ ಸರ್ಕಾರದಿಂದ ಮತ್ತು ಆರು ಸಾವಿರ ಕೇಂದ್ರ ಸರ್ಕಾರದಿಂದ ಹೀಗೆ ಒಟ್ಟು 31 ಸಾವಿರ ರೂ. ಬಂದು ಸೇರುತ್ತದೆ. 


ಯೋಜನೆಗೆ ಸಂಬಂಧಿಸಿದ ಷರತ್ತುಗಳು : 
-  22 ಲಕ್ಷ 47 ಸಾವಿರ ರೈತರಿಗೆ ಸರ್ಕಾರದ ಈ ಯೋಜನೆಯ ಲಾಭವನ್ನು ನೀಡಲಾಗುವುದು.
- ಸಣ್ಣ ಮತ್ತು ಅತಿ ಸಣ್ಣ ರೈತರು ಮಾತ್ರ ಕೃಷಿ ಆಶೀರ್ವಾದ್ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಬಹುದು.
- 5 ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿಯನ್ನು ಸಾಗುವಳಿ ಮಾಡುವ ರೈತರಿಗೆ ಯೋಜನೆಯ ಲಾಭವನ್ನು ನೀಡಲಾಗುವುದು.


ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.