PhonePe ಬಳಸಿ ಲೋನ್ ಪಾವತಿಸಲು ಈ ಸಿಂಪಲ್ ಟಿಪ್ಸ್ ಅನುಸರಿಸಿ

How to pay your Loan EMI using PhonePe: ಭಾರತದ ಅತಿದೊಡ್ಡ ಪಾವತಿ ಅಪ್ಲಿಕೇಶನ್ ಆಗಿರುವ ಫೋನ್‌ಪೇ ಮೂಲಕ ಹಣವರ್ಗಾವಣೆ ಮಾತ್ರವಲ್ಲದೆ ಮೊಬೈಲ್ ರೀಚಾರ್ಜ್‌ಗಳು, ವಿದ್ಯುತ್ ಮತ್ತು ಇತರ ಯುಟಿಲಿಟಿ ಬಿಲ್‌ಗಳನ್ನು ಪಾವತಿಸುವುದು ಕೂಡ ತುಂಬಾ ಸುಲಭವಾಗಿದೆ. ಮಾತ್ರವಲ್ಲ, ಇದೇ ಫೋನ್‌ಪೇ ಬಳಸಿ ನೀವು ನಿಮ್ಮ ಸಾಲದ ಇಎಂಐ ಅನ್ನು ಸಹ ಸುಲಭವಾಗಿ ಪಾವತಿಸಬಹುದು ಎಂದು ನಿಮಗೆ ತಿಳಿದಿದೆಯೇ? 

Written by - Yashaswini V | Last Updated : Mar 30, 2023, 11:48 AM IST
  • ಈ ಡಿಜಿಟಲ್ ಪ್ರಪಂಚದಲ್ಲಿ ನೀವು ಯಾವುದೇ ಕೆಲಸಕ್ಕಾಗಿ ಬ್ಯಾಂಕ್‌ನಲ್ಲಿ ಗಂಟೆಗಟ್ಟಲೆ ಕಾದು ನಿಲ್ಲುವ ಅವಶ್ಯಕತೆ ಇಲ್ಲ.
  • ಬದಲಿಗೆ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಸಾಲದ ಇಎಂಐಗಳನ್ನು ಪಾವತಿಸುವುದು ತುಂಬಾ ಆರಾಮದಾಯಕ ಮತ್ತು ಪರಿಣಾಮಕಾರಿಯಾಗಿದೆ.
  • ಅದರಲ್ಲೂ ಅಪ್ಲಿಕೇಶನ್‌ಗಳ ಮೂಲಕ ತಮ್ಮ ಸಾಲದ ಪಾವತಿಸಲು ಬಯಸುವವರಿಗೆ ಫೋನ್‌ಪೇ ಅನುಕೂಲಕರವಾಗಿದೆ.
PhonePe ಬಳಸಿ ಲೋನ್ ಪಾವತಿಸಲು ಈ ಸಿಂಪಲ್ ಟಿಪ್ಸ್ ಅನುಸರಿಸಿ  title=
Pay Loan EMI By Using PhonePe

Pay Loan EMI By Using PhonePe: ಈ ಡಿಜಿಟಲ್ ಯುಗದಲ್ಲಿ ಭಾರತದ ಅತಿದೊಡ್ಡ ಪಾವತಿ ಅಪ್ಲಿಕೇಶನ್‌ಗಳಲ್ಲಿ ಒಂದಾಗಿರುವ ಫೋನ್‌ಪೇ ಹಣ ವರ್ಗಾವಣೆಯಿಂದ ರೀಚಾರ್ಜ್‌ಗಳು, ವಿದ್ಯುತ್ ಮತ್ತು ಇತರ ಯುಟಿಲಿಟಿ ಬಿಲ್‌ಗಳನ್ನು ಪಾವತಿಸುವವರೆಗೆ ಎಲ್ಲಾ ಕೆಲಸಗಳನ್ನು ಕ್ಷಣಾರ್ಧದಲ್ಲಿ ಪೂರ್ಣಗೊಳಿಸಲು ತುಂಬಾ ಪ್ರಯೋಜನಕಾರಿ.  ಇದೇ ಫೋನ್‌ಪೇ ಬಳಸಿ ನೀವು ನಿಮ್ಮ ಸಾಲದ ಇಎಂಐ ಅನ್ನು ಸಹ ಸುಲಭವಾಗಿ ಪಾವತಿಸಬಹುದು ಎಂದು ನಿಮಗೆ ತಿಳಿದಿದೆಯೇ? 

ಹೌದು, ಈ ಡಿಜಿಟಲ್ ಪ್ರಪಂಚದಲ್ಲಿ ನೀವು ಯಾವುದೇ ಕೆಲಸಕ್ಕಾಗಿ ಬ್ಯಾಂಕ್‌ನಲ್ಲಿ ಗಂಟೆಗಟ್ಟಲೆ ಕಾದು ನಿಲ್ಲುವ ಅವಶ್ಯಕತೆ ಇಲ್ಲ. ಬದಲಿಗೆ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಸಾಲದ ಇಎಂಐಗಳನ್ನು ಪಾವತಿಸುವುದು ತುಂಬಾ ಆರಾಮದಾಯಕ ಮತ್ತು ಪರಿಣಾಮಕಾರಿಯಾಗಿದೆ. ಅದರಲ್ಲೂ ಅಪ್ಲಿಕೇಶನ್‌ಗಳ ಮೂಲಕ ತಮ್ಮ ಸಾಲದ ಪಾವತಿಸಲು ಬಯಸುವವರಿಗೆ ಫೋನ್‌ಪೇ ಅನುಕೂಲಕರವಾಗಿದೆ. ಕೆಲವು ತುಂಬಾ ಸರಳವಾದ ಹಂತಗಳನ್ನು ಅನುಸರಿಸುವ ಮೂಲಕ ನೀವು ಈ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಬಹುದಾಗಿದೆ. 

ಇದನ್ನೂ ಓದಿ- EPFO ಚಂದಾದಾರರಿ ಮತ್ತೊಂದು ಸಂತಸದ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ!

ಫೋನ್‌ಪೇ ಅಪ್ಲಿಕೇಶನ್‌ನಲ್ಲಿ ನಿಮ್ಮ ಸಾಲದ ಇಎಂಐ ಪಾವತಿಸಲು ಈ ಸರಳ ಹಂತಗಳನ್ನು ಅನುಸರಿಸಿ...
ವಾಸ್ತವವಾಗಿ, ಜನಪ್ರಿಯ ಆನ್ಲೈನ್ ಪಾವತಿ ಅಪ್ಲಿಕೇಶನ್ ಆಗಿರುವ ಫೋನ್‌ಪೇ ನಾಲ್ಕು ಸರಳ ಹಂತಗಳಲ್ಲಿ ಸಾಲದ ಇಎಂಐ ಅನ್ನು ಪಾವತಿಸಲು ಸಹಾಯಕವಾಗಿದೆ. 
>> ಮೊದಲಿಗೆ ನಿಮ್ಮ ಸ್ಮಾರ್ಟ್ಫೋನ್ ನಲ್ಲಿ ಫೋನ್‌ಪೇ ಅಪ್ಲಿಕೇಶನ್ ಅನ್ನು ತೆರೆಯಿರಿ. 
>> ಮುಖಪುಟದಲ್ಲಿ 'ರೀಚಾರ್ಜ್ ಮತ್ತು ಬಿಲ್‌ಗಳನ್ನು ಪಾವತಿಸಿ' ಎಂಬ ಆಯ್ಕೆಯನ್ನು ಆರಿಸಿ. 
>> ಇದರಲ್ಲಿ ಹಣಕಾಸು ಸೇವೆ ಮತ್ತು ತೆರಿಗೆಗಳ ಅಡಿಯಲ್ಲಿ 'ಸಾಲ ಮರುಪಾವತಿ' ಆಯ್ಕೆ ಗೋಚರಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. 
>> ಎರಡನೇ ಹಂತದಲ್ಲಿ, ನಿಮ್ಮ ಲೋನ್ ಬಿಲ್ಲರ್ ಅನ್ನು ಆಯ್ಕೆ ಮಾಡಿ (ಉದಾಹರಣೆಗೆ, ನೀವು ಸಾಲವನ್ನು ತೆಗೆದುಕೊಂಡಿರುವ ಬ್ಯಾಂಕ್).
>> ನಿಮ್ಮ ಲೋನ್ ಬಿಲ್ಲರ್ ಅನ್ನು ಆಯ್ಕೆ ಮಾಡಿದ ನಂತರ, ನಿಮ್ಮ ಲೋನ್ ಖಾತೆ ಸಂಖ್ಯೆಯನ್ನು ನಮೂದಿಸಿ ಮತ್ತು ದೃಢೀಕರಿಸು ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
>> ಈಗ, ನಿಮ್ಮ ಆದ್ಯತೆಯ ಪಾವತಿ ಮೋಡ್‌ನೊಂದಿಗೆ ಪಾವತಿಯನ್ನು ಪೂರ್ಣಗೊಳಿಸಿ

ಇದನ್ನೂ ಓದಿ- ನಿಮ್ಮ ಆಧಾರ್ ತಪ್ಪಾದ ಪ್ಯಾನ್ ಕಾರ್ಡ್‌ಗೆ ಲಿಂಕ್ ಆಗಿದ್ಯಾ? ಈ ರೀತಿ ಸರಿಪಡಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News