PM Kisan Yojana : ಒಂದೇ ಸಲ ಎರಡು ಕಂತಿನ ಹಣ ಪಡೆಯಲು ಶೀಘ್ರವೇ ಈ ಕೆಲಸ ಮಾಡಿ
PM Kisan Samman Yojana: ಕರೋನಾ ಸಾಂಕ್ರಾಮಿಕ ರೋಗದ ಮಧ್ಯೆಯೇ, ಭಾರತ ಸರ್ಕಾರ ಪಿಎಂ ಕಿಸಾನ್ ಯೋಜನೆಯ ಎಂಟನೇ ಕಂತಿನ ಹಣವನ್ನು ರೈತರ ಖಾತೆಗೆ ವರ್ಗಾಯಿಸಿದೆ. ಆದರೆ ಇನ್ನೂ ಅನೇಕ ರೈತರು ಈ ಯೋಜನೆಗೆ ತಮ್ಮನ್ನು ನೋಂದಾಯಿಸಿಕೊಂಡಿಲ್ಲ. ಯೋಜನೆಯ ದ್ವಿಗುಣ ಲಾಭವನ್ನು ಪಡೆಯಲು ಬಯಸುವುದಾದರೆ ಜೂನ್ 30 ರೊಳಗೆ ಈ ಯೋಜನೆಯಡಿಯಲ್ಲಿ ನಿಮ್ಮನ್ನು ನೋಂದಾಯಿಸಿಕೊಳ್ಳುವುದು ಅಗತ್ಯವಾಗಿದೆ.
ನವದೆಹಲಿ : PM Kisan Samman Yojana: ಕರೋನಾ ಸಾಂಕ್ರಾಮಿಕ (Coronavirus) ರೋಗದ ಮಧ್ಯೆಯೇ, ಭಾರತ ಸರ್ಕಾರ ಪಿಎಂ ಕಿಸಾನ್ ಯೋಜನೆಯ (PM Kisan Yojna) ಎಂಟನೇ ಕಂತಿನ ಹಣವನ್ನು ರೈತರ ಖಾತೆಗೆ ವರ್ಗಾಯಿಸಿದೆ. ಆದರೆ ಇನ್ನೂ ಅನೇಕ ರೈತರು ಈ ಯೋಜನೆಗೆ ತಮ್ಮನ್ನು ನೋಂದಾಯಿಸಿಕೊಂಡಿಲ್ಲ. ಹಾಗಾಗಿ ರೈತರಿಗೆ ಯೋಜನೆಯ ಲಾಭ ಪಡೆಯುವುದು ಸಾಧ್ಯವಾಗುತ್ತಿಲ್ಲ. ಯೋಜನೆಯ ದ್ವಿಗುಣ ಲಾಭವನ್ನು ಪಡೆಯಲು ಬಯಸುವುದಾದರೆ ಜೂನ್ 30 ರೊಳಗೆ ಈ ಯೋಜನೆಯಡಿಯಲ್ಲಿ ನಿಮ್ಮನ್ನು ನೋಂದಾಯಿಸಿಕೊಳ್ಳುವುದು ಅಗತ್ಯವಾಗಿದೆ. ಹಾಗದರೆ ಮಾತ್ರ ಮುಂದಿನ ಕಂತಿನ ಹಣ ನೇರವಾಗಿ ನಿಮ್ಮ ಖಾತೆಗೆ ವರ್ಗಾವಣೆಯಾಗುತ್ತದೆ.
ಜೂನ್ 30ರೊಳಗೆ ನೋಂದಾಯಿಸಿಕೊಳ್ಳಿ :
ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ (PM Kisan Samman Yojana) ನೋಂದಾಯಿಸಿಕೊಳ್ಳುವ ಲ್ಲಾ ಅರ್ಹತೆಯಿದ್ದರೆ, ತಕ್ಷಣ ನಿಮ್ಮನ್ನು ಈ ಯೋಜನೆಯಡಿ ನೋಂದಾಯಿಸಿಕೊಳ್ಳಿ. ಜೂನ್ 30ರೊಳಗೆ ಈ ಯೋಜನೆಯಡಿ ನೊಂದಾಯಿಸಿಕೊಂಡರೆ, ನಿಮ್ಮ ಖಾತೆಗೆ 4,000 ರೂಪಾಯಿಗಳು, ಜಮೆಯಾಗುತ್ತದೆ. ಅಂದರೆ ಎಂಟನೇ ಮತ್ತು ಒಂಬತ್ತನೇ ಕಂತಿನ ಹಣವನ್ನು ಒಟ್ಟಿಗೆ ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ. ಇಲ್ಲಿಯವರೆಗೆ ಯಾವ ರೈತರಿಗೆ (Farmers) ಒಂದು ಕಂತಿನ ಹಣವೂ ಬಂದಿಲ್ಲ ರೈತರಿಗೆ ಮಾತ್ರ ಈ ಲಾಭ ಸಿಗಲಿದೆ. ಆದರೆ ಯೋಜನೆಯಡಿ ನೀವು ನೋಂದಾಯಿಸಿಕೊಂಡಿರದಿದ್ದರೆ ಈ ಲಾಭದಿಂದ ವಂಚಿತರಾಗುತ್ತೀರಿ.
ಇದನ್ನೂ ಓದಿ : Post Office: ಪೋಸ್ಟ್ ಆಫೀಸ್ನೊಂದಿಗೆ ಕೇವಲ ₹5000 ಹೂಡಿಕೆ ಮಾಡಿ ಬುಸಿನೆಸ್ಸ್ ಪ್ರಾರಂಭಿಸಿ
3 ಕಂತುಗಳಲ್ಲಿ ಸಿಗಲಿದೆ 6 ಸಾವಿರ ರೂ. :
ಪ್ರಧಾನಿ ಕಿಸಾನ್ ಸಮ್ಮನ್ ನಿಧಿ (PM Kisan) ಅಡಿಯಲ್ಲಿ ಕೇಂದ್ರ ಸರ್ಕಾರ 2 ಸಾವಿರ ರೂಪಾಯಿಗಳಂತೆ, 3 ಕಂತುಗಳಲ್ಲಿ ರೈತರ ಖಾತೆಗೆ ಹಣ ವರ್ಗಾಯಿಸುತ್ತದೆ. ಇಲ್ಲಿಯವರೆಗೆ ಸರ್ಕಾರ ಟ್ಟು 8 ಕಂತುಗಳ ಹಣವನ್ನು ರೈತರ ಖಾತೆಗೆ ವರ್ಗಾಯಿಸಿದೆ. ಈ ಯೋಜನೆಯಲ್ಲಿ ನೋಂದಣಿ ಮಾಡಬೇಕಾದರೆ, ರೈತರು ಮೊದಲು ಪಿಎಂ ಕಿಸಾನ್ ಸಮ್ಮನ್ ಯೋಜನೆಯ ಅಧಿಕೃತ ವೆಬ್ಸೈಟ್ pmkisan.gov.in ಗೆ ಭೇಟಿ ನೀಡಬೇಕಾಗುತ್ತದೆ.
ಯಾವಾಗ ಬರಲಿದೆ ಮುಂದಿನ ಕಂತು ? :
ಜೂನ್ 30 ರೊಳಗೆ ಈ ಯೋಜನೆಯಡಿ ನೋಂದಾಯಿಸಿಕೊಂಡ ರೈತರ ಖಾತೆಗೆ ಎಂಟನೇ ಕಂತಿನ ಹಣವನ್ನು ಜುಲೈ ತಿಂಗಳಲ್ಲಿ ವರ್ಗಾಯಿಸಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಆಗಸ್ಟ್ ತಿಂಗಳಲ್ಲಿ ಸರ್ಕಾರ ಪಾವತಿಸುತ್ತದೆ.
ಇದನ್ನೂ ಓದಿ : Bank privatization : ಎರಡು ಬ್ಯಾಂಕುಗಳ ಖಾಸಗೀಕರಣ ..! ನೌಕರರಿಗಾಗಿ ಸಿದ್ದವಾಗುತ್ತಿದೆ ವಿಆರ್ ಎಸ್ ಪ್ಲಾನ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ