PM Kisan: ಜೂನ್ 30ರೊಳಗೆ ಈ ಸ್ಕೀಮ್ ಗೆ ಅಪ್ಪ್ಲೈ ಮಾಡಿ ಡಬಲ್ ಲಾಭ ಪಡೆಯಿರಿ

PM Kisan News Update: ಕೆಲ ದಿನಗಳ ಹಿಂದೆಯಷ್ಟೇ  ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಸಮ್ಮನ್ ನಿಧಿ (PM Kisan Samman Nidhi)ಯೋಜನೆಯ 8 ನೇ ಕಂತನ್ನು  ದೇಶದ 9.5 ಕೋಟಿ ರೈತರ ಖಾತೆಗಳಿಗೆ ವರ್ಗಾಯಿಸಿದೆ.  

Written by - Nitin Tabib | Last Updated : May 28, 2021, 01:02 PM IST
  • ನೀವೂ ಕೂಡ PM ಕಿಸಾನ ಸಮ್ಮಾನ್ ನಿಧಿ ಯೋಜನೆಯ ಅಡಿ ಹೆಸರು ನೊಂದಾಯಿಸಿಲ್ಲವೇ?
  • ಜೂನ್ 30 ರೊಳಗೆ ಈ ಕೆಲಸ ಮಾಡಿ ಡಬಲ್ ಕಂತು ಒಂದೇ ಸಾರಿ ಪಡೆಯಿರಿ,
  • ಹೇಗೆ ಅಂತಿರಾ? ವಿವರಗಳಿಗಾಗಿ ಈ ಸುದ್ದಿ ಓದಿ.
PM Kisan: ಜೂನ್ 30ರೊಳಗೆ ಈ ಸ್ಕೀಮ್ ಗೆ ಅಪ್ಪ್ಲೈ ಮಾಡಿ ಡಬಲ್ ಲಾಭ ಪಡೆಯಿರಿ title=
PM Kisan Samman Nidhi 2021 (File Photo)

PM Kisan News Update: ಕೆಲ ದಿನಗಳ ಹಿಂದೆಯಷ್ಟೇ  ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi)ಯೋಜನೆಯ 8 ನೇ ಕಂತನ್ನು  ದೇಶದ 9.5 ಕೋಟಿ ರೈತರ ಖಾತೆಗಳಿಗೆ ವರ್ಗಾಯಿಸಿದೆ.

ಜೂನ್ 30ರೊಳಗೆ ನೋಂದಣಿ ಮಾಡಬಹುದು (Modi Farmer Scheme)
ಆದರೆ, ಈ ಯೋಜನೆಯಡಿ ತಮ್ಮ ಹೆಸರನ್ನು ನೋಂದಣಿ ಮಾಡದ ಇನ್ನೂ ಹಲವು ರೈತರಿದ್ದು, ಅವರಿಗೆ ಈ ಯೋಜನೆಯ (Scheme) ಲಾಭ ಇದುವರೆಗೆ ಸಿಕ್ಕಿಲ್ಲ. ಇಂತಹ ರೈತರಿಗೆ ಒಳ್ಳೆಯ ಸುದ್ದಿಯೊಂದು ಪ್ರಕಟವಾಗಿದೆ.  ಈ ರೈತರು ಒಂದು ವೇಳೆ ಜೂನ್ 30ರೊಳಗೆ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡರೆ ಮತ್ತು ಅದಕ್ಕೆ ಅನುಮತಿ ಸಿಕ್ಕರೆ, ಅವರಿಗೆ ಏಪ್ರಿಲ್ ನಿಂದ ಜುಲೈವರೆಗಿನ ಕಂತು ಜುಲೈತಿಂಗಳಲ್ಲಿ ಸಿಗಲಿದೆ. ಇದರ ಜೊತೆಗೆ ಆಗಸ್ಟ್ ತಿಂಗಳ ಕಂತಿನ ಹಣ ಕೂಡ ಅವರ ಖಾತೆಗೆ ಸೇರಲಿದೆ.

ರೈತರಿಗೆ ಈ ರೀತಿ ಡಬಲ್ ಲಾಭ ಸಿಗಲಿದೆ (Farmer Double Income)
ಹೀಗಿರುವಾಗ ಯಾವುದೇ ಓರ್ವ ಹೊಸ ರೈತ ಈ ಯೋಜನೆಗೆ ತನ್ನ ಹೆಸರನ್ನು ನೊಂದಾಯಿಸಿದರೆ ಮತ್ತು ಸರ್ಕಾರ ಅವನ ಖಾತೆಗೆ ನೇರವಾಗಿ ಎರಡು ಕಂತುಗಳ ಹಣ ವರ್ಗಾಯಿಸಿದರೆ, ಆ ರೈತನಿಗೆ ಡಬಲ್ ಲಾಭ ಸಿಗಲಿದೆ. ಏಕೆಂದರೆ ಜೂನ್ 30 ರೊಳಗೆ ಅವರು ಅರ್ಜಿ ಸಲ್ಲಿಸಿದರೆ ಏಪ್ರಿಲ್ ನಿಂದ ಜುಲೈವರೆಗಿನ ಕಂತು ಜುಲೈ ನಲ್ಲಿ ಸಿಗಲಿದೆ. ಇದರ ಜೊತೆಗೆ ಆಗಸ್ಟ್ ನಲ್ಲಿ 9ನೇ ಕಂತಿನ ಹಣ ಕೂಡ ಅವರ ಖಾತೆಗೆ ಸೇರಲಿದೆ. ಒಟ್ಟಾರೆ ಹೇಳುವುದಾದರೆ ಈ ವರ್ಷದ ಒಟ್ಟು ಎರಡು ಕಂತುಗಳ ಹಣ ಅವರ ಖಾತೆಗೆ ಬರಲಿದೆ.

ಇದುವರೆಗೆ 1.15 ಲಕ್ಷ ಕೋಟಿ ರೂ. ವರ್ಗಾಯಿಸಲಾಗಿದೆ (PM Kisan Samman Nidhi Yojana)
PM ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸರ್ಕಾರವು 2000 ರೂಗಳನ್ನು ರೈತರ ಖಾತೆಗೆ ವರ್ಷಕ್ಕೆ ಮೂರು ಬಾರಿ ವರ್ಗಾಯಿಸುತ್ತದೆ. ಅಂದರೆ, ಒಂದು ವರ್ಷದಲ್ಲಿ ಒಟ್ಟು 6000 ರೂಪಾಯಿಗಳನ್ನು ರೈತರ ಖಾತೆಗೆ ಸೇರಿಸಲಾಗುತ್ತದೆ. 2019 ರ ಮಧ್ಯಂತರ ಬಜೆಟ್‌ನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, 2018 ರ ಡಿಸೆಂಬರ್‌ ನಲ್ಲಿ ರೈತರ ಖಾತೆಗೆ  ಮೊದಲ ಕಂತನ್ನು ಸೇರಿಸಿ ಹಣ ವರ್ಗಾಯಿಸಲಾಗಿದೆ. ಈ ಯೋಜನೆಯಡಿ ಇದುವರೆಗೆ 1.15 ಲಕ್ಷ ಕೋಟಿ ರೂಪಾಯಿಗಳನ್ನು ಕೃಷಿ ಕುಟುಂಬಗಳಿಗೆ ವರ್ಗಾಯಿಸಲಾಗಿದೆ.

ಕಂತುಗಳ ವಿವರ ಇಲ್ಲಿದೆ
ಸರ್ಕಾರದ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಮೊದಲ ಕಂತು ಡಿಸೆಂಬರ್ 1 ರಿಂದ ಮಾರ್ಚ್ 31ರ ನಡುವೆ ವರ್ಗಾಗಿಸಲಾಗುತ್ತದೆ, ಎರಡನೇ ಕಂತು ಏಪ್ರಿಲ್ 1 ರಿಂದ ಜುಲೈ 31 ರೊಳಗೆ ವರ್ಗಾಯಿಸಲಾಗುತ್ತದೆ ಮತ್ತು ಈ ಯೋಜನೆಯ ಮೂರನೇ ಕಂತು ಆಗಸ್ಟ್ 1 ರಿಂದ ನವೆಂಬರ್ 30 ರೊಳಗೆ ಪಾವತಿಸಲಾಗುತ್ತದೆ. ಈ ಎಲ್ಲ ಕಂತುಗಳು ಈ ಯೋಜನೆಯ ಅಡಿ ನೋಂದಣಿ ಮಾಡಿಕೊಂಡ ಎಲ್ಲ ರೈತರ ಖಾತೆ ಸೇರುತ್ತದೆ ಹಾಗೂ ಈ ಯೋಜನೆಗೆ ಹೊಸದಾಗಿ ಸೇರಿಕೊಂಡವರ ಖಾತೆಗೂ ಕೂಡ ಸೇರುತ್ತದೆ.

ಇದನ್ನೂ ಓದಿ-Petrol-Diesel Price : ವಾಹನ ಸವಾರರಿಗೆ ಬಿಗ್ ರಿಲೀಫ್ : ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಮುಕ್ತಿ!

ದೂರು ನೀಡಲು ಸಚಿವಾಲಯವನ್ನು ಸಂಪರ್ಕಿಸಿ (PM Kisan Samman Nidhi Helpline Numbers)
ಒಂದು ವೇಳೆ ನೀವೂ ಕೂಡ ಈ ಯೋಜನೆಯ ಅಡಿ ನಿಮ್ಮ ಹೆಸರನ್ನು ನೊಂದಾಯಿಸಿದ್ದು, ನಿಮ್ಮ ಖಾತೆಗೆ ಹಣ ಇದುವರೆಗೂ ವರ್ಗಾವಣೆಗೊಂಡಿಲ್ಲ ಎಂದಾದಲ್ಲಿ ಹೆಲ್ಪ್ ಲೈನ್ ನಂಬರ್ ಅಥವಾ ಇ-ಮೇಲ್ ಮಾಡುವ ಮೂಲಕ ದೂರು ಸಲ್ಲಿಸಬಹುದಾಗಿದೆ.

ಇದನ್ನೂ ಓದಿ-TV, Fridge, AC ಬೆಲೆಗಳು ಮತ್ತೆ ಏರಿಕೆ! ಯಾವಾಗ, ಎಷ್ಟು ಹೆಚ್ಚಾಗಲಿದೆ ಎಂದು ತಿಳಿಯಿರಿ

>>ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ: 18001155266
>>ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ: 155261
>>ಪಿಎಂ ಕಿಸಾನ್ ಲ್ಯಾಂಡ್‌ಲೈನ್ ಸಂಖ್ಯೆಗಳು: 011—23381092, 23382401
>>ಪಿಎಂ ಕಿಸಾನ್ ಅವರ ಹೊಸ ಸಹಾಯವಾಣಿ: 011-24300606
>>ಪಿಎಂ ಕಿಸಾನ್ ಮತ್ತೊಂದು ಸಹಾಯವಾಣಿ ಹೊಂದಿದ್ದಾರೆ: 0120-6025109
>>ಇಮೇಲ್ ID: pmkisan-ict@gov.in

ಇದನ್ನೂ ಓದಿ-Aadhar Card ನಲ್ಲಿದ್ದ 'ಮೊಬೈಲ್ ನಂಬರ್' ಬಂದ್ ಆಗಿದೆಯಾ? ಹೊಸ ನಂಬರ್ ಅಪ್ಡೇಟ್  ಮಾಡುವುದು ಹೇಗೆ ಇಲ್ಲಿದೆ ನೋಡಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News