ಸಹಕಾರ ಸಂಘಗಳಿಂದ ಪಡೆದ ಸಾಲವನ್ನು ರೈತರು ಮರುಪಾವತಿಸಬೇಕಾಗಿಲ್ಲ!
ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ರೈತರ ಬೆಳೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಆಗಿರುವ ನಷ್ಟದ ಅಂದಾಜು ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ನವದೆಹಲಿ : ರೈತರ ಸಬಲೀಕರಣಕ್ಕಾಗಿ ವಿವಿಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರದ ಮೋದಿ ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರನ್ನು ಆರ್ಥಿಕವಾಗಿ ಸದೃಢವಾಗಿಸುವ ನಿಟ್ಟಿನಲ್ಲಿ ಸರ್ಕಾರಗಳು ಶ್ರಮಿಸುತ್ತಿವೆ. ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಯೋಜನೆಯ 13ನೇ ಕಂತು ಕಳೆದ ಫೆ.27ರಂದು ರೈತರ ಖಾತೆ ಸೇರಿದೆ. ಇನ್ನು ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ರೈತರ ಬೆಳೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಆಗಿರುವ ನಷ್ಟದ ಅಂದಾಜು ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ರೈತರಿಗೆ ಬಿಗ್ ರಿಲೀಫ್ :
ಮಳೆ ಮತ್ತು ಆಲಿಕಲ್ಲು ಮಳೆಯಿಂದ ಬೆಳೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಪಡೆದಿರುವ ಸಾಲ ಮರುಪಾವತಿಗೆ ತಡೆ ನೀಡುವುದಾಗಿ ಪಂಜಾಬ್ ಸಿಎಂ ಭಗವಂತ ಮಾನ್ ಘೋಷಿಸಿದ್ದಾರೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರ ಕೈಗೊಂಡಿರುವ ಈ ಕ್ರಮವು ರೈತರಿಗೆ ಹೆಚ್ಚಿನ ಪರಿಹಾರವನ್ನು ನೀಡಿದೆ. . ನಷ್ಟದಿಂದ ಚೇತರಿಸಿಕೊಂಡ ನಂತರ ರೈತರು ಈ ಹಣವನ್ನು ಪಾವತಿಸಬಹುದು ಎಂದು ಮಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದರಿಂದ ಹೆಚ್ಚಿನ ಸಂಖ್ಯೆಯ ರೈತರು ಸುಸ್ತಿದಾರರಾಗುವುಡು ತಪ್ಪಿದಂತಾಗುತ್ತದೆ. ಮಾತ್ರವಲ್ಲ ಮುಂದಿನ ಬೆಳೆ ಹಂಗಾಮಿಗೆ ಸಾಲ ಪಡೆಯಲು ಆ ರೈತರು ಅರ್ಹರಾಗಿ ಉಳಿಯುತ್ತಾರೆ.
ಇದನ್ನೂ ಓದಿ : EPFO Update: ಬಂತು ಗುಡ್ ನ್ಯೂಸ್...! ಬಡ್ಡಿ ದರ ಹೆಚ್ಚಿಸುತ್ತಿದೆಯಾ ಇಪಿಎಫ್ಓ? ಈ ದಿನ ಖಾತೆಗೆ ಬರಲಿದೆ ಹಣ
ಸೊಸೈಟಿಗಳು ರೈತರಿಗೆ ಸಾಲ ನೀಡುತ್ತವೆ :
ರಾಜ್ಯ ಸಹಕಾರ ಸಂಘಗಳು ರೈತರಿಗೆ ಅಲ್ಪಾವಧಿ ಬೆಳೆ ಸಾಲದ ರೂಪದಲ್ಲಿ ಸಾಲ ನೀಡುತ್ತವೆ. ಇತ್ತೀಚಿಗೆ ಸುರಿದ ಮಳೆಯಿಂದಾಗಿ ಸಂಭವಿಸಿದ ಹಾನಿಯನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಒಂದು ವಾರದೊಳಗೆ ಪರಿಶೀಲನಾ ಕಾರ್ಯವನ್ನು ಪೂರ್ಣಗೊಳಿಸುವಂತೆ ಆದೇಶಿಸಿದ್ದಾರೆ.
ಮೊಗಾ, ಮುಕ್ತಸರ್, ಬಟಿಂಡಾ ಮತ್ತು ಪಟಿಯಾಲ ಜಿಲ್ಲೆಗಳಲ್ಲಿ ಮಳೆ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಮಾನ್ ಭೇಟಿ ನೀಡಿದರು. ಆಲಿಕಲ್ಲು ಮಳೆ ಮತ್ತು ಗಾಳಿ ಮಳೆಗೆ ರಾಜ್ಯದ ಹಲವೆಡೆ ಗೋಧಿ ಮತ್ತು ಇತರ ಬೆಳೆ ನಾಶವಾಗಿತ್ತು.
ಇದನ್ನೂ ಓದಿ : New Honda Activa: ಹೊಚ್ಚ ಹೊಸ 125 ಸಿಸಿ ಆಕ್ಟೀವಾ ಬಿಡುಗಡೆ ಮಾಡಿದೆ Honda, ಬೆಲೆ ಜಸ್ಟ್ 88 ಸಾವಿರ ಮಾತ್ರ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.