EPFO Interest Rates: ನೌಕರ ವರ್ಗದ ಜನರಿಗೆ ಒಂದು ಮಹತ್ವದ ಅಪ್ಡೇಟ್ ಪ್ರಕಟಗೊಂಡಿದೆ. ನೀವೂ ಒಂದು ನೌಕರಿ ಮಾಡುತ್ತಿದ್ದು, ನಿಮ್ಮ ಪಿಎಫ್ ಖಾತೆಗೆ ನಿರಂತರವಾಗಿ ಕೊಡುಗೆಯನ್ನು ನೀಡಿ, PF ಬಡ್ಡಿಗಾಗಿ ಕಾಯುತ್ತಿದ್ದರೆ, ನಿಮ್ಮ ಖಾತೆಗೆ ಶೀಘ್ರದಲ್ಲೇ ಭಾರೀ ಮೊತ್ತ ವರ್ಗಾವಣೆಯಾಗಲಿದೆ.ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಸಭೆ ಸೋಮವಾರ ಆರಂಭವಾಗಿದ್ದು, ಈ ಸಭೆ 2 ದಿನಗಳ ಕಾಲ ನಡೆಯಲಿದೆ. ಈ ಸಭೆಯಲ್ಲಿ ಬಡ್ಡಿದರಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎನ್ನಲಾಗುತ್ತಿದೆ. EPFO ತನ್ನ ಎರಡು ದಿನಗಳ ಸಭೆಯಲ್ಲಿ 2022-23 ರ ಉದ್ಯೋಗಿಗಳ ಭವಿಷ್ಯ ನಿಧಿಯ ಮೇಲಿನ ಬಡ್ಡಿ ದರವನ್ನು ಘೋಷಿಸುವ ಸಾಧ್ಯತೆ ಇದೆ.
ಪ್ರಸ್ತುತ 8.1 ರಷ್ಟು ಬಡ್ಡಿ ಸಿಗುತ್ತಿದೆ
ಮಾರ್ಚ್ 2022 ರಲ್ಲಿ, EPFO ತನ್ನ ಸುಮಾರು ಐದು ಕೋಟಿ ಚಂದಾದಾರರಿಗೆ EPF ಮೇಲಿನ 2021-22 ರ ಬಡ್ಡಿದರವನ್ನು ನಾಲ್ಕು ದಶಕಗಳಲ್ಲಿಯೇ ಅತಿ ಕಡಿಮೆ ಎನ್ನಲಾಗುವ ಶೇಕಡಾ 8.1 ಕ್ಕೆ ಇಳಿಸಿದೆ. ಈ ದರವು 1977-78ರ ನಂತರ ಇಪಿಎಫ್ ಠೇವಣಿ ಮೇಲೆ ನೀಡಲಾಗುವ ಅತ್ಯಂತ ಕನಿಷ್ಠ ಬಡ್ಡಿದರವಾಗಿದೆ. 2020-21 ರಲ್ಲಿ, ಈ ದರವು ಶೇಕಡಾ 8.5 ರಷ್ಟಿತ್ತು.
ಸೋಮವಾರ ಮಧ್ಯಾಹ್ನದಿಂದ ಸಭೆ ಆರಂಭವಾಗಿದೆ
2022-23ರ ಇಪಿಎಫ್ ಮೇಲಿನ ಬಡ್ಡಿದರದ ಕುರಿತು ಸೋಮವಾರ ಮಧ್ಯಾಹ್ನದಿಂದ ಆರಂಭಗೊಂಡಿರುವ ಎರಡು ದಿನಗಳ ಸಭೆಯಲ್ಲಿ, ನೌಕರರ ಭವಿಷ್ಯ ನಿಧಿ ಸಂಘಟನೆಯ ಅಪೆಕ್ಸ್ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು (CBT) ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಇಪಿಎಫ್ಓ ಮೂಲವೊಂದು ವರದಿ ಮಾಡಿದೆ.
ಇದನ್ನೂ ಓದಿ-New Honda Activa: ಹೊಚ್ಚ ಹೊಸ 125 ಸಿಸಿ ಆಕ್ಟೀವಾ ಬಿಡುಗಡೆ ಮಾಡಿದೆ Honda, ಬೆಲೆ ಜಸ್ಟ್ 88 ಸಾವಿರ ಮಾತ್ರ!
ಹೆಚ್ಚಿನ ಪಿಂಚಣಿ ಸೌಲಭ್ಯವೂ ಲಭ್ಯವಿದೆ
ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸಲು ನಾಲ್ಕು ತಿಂಗಳ ಕಾಲಾವಕಾಶ ನೀಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಮೇಲೆ ಇಪಿಎಫ್‌ಒ ಯಾವ ಕ್ರಮ ಕೈಗೊಂಡಿದೆ? ಈ ಬಗ್ಗೆಯೂ ಸಭೆಯಲ್ಲಿ ಚರ್ಚೆಯಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. EPFO ತನ್ನ ಚಂದಾದಾರರಿಗೆ ಮೇ 3, 2023 ರವರೆಗೆ ಸಮಯಾವಕಾಶವನ್ನು ಕೋರಿದೆ.
ಇದನ್ನೂ ಓದಿ-DA Hike ಬಳಿಕ ಇದೀಗ ಸರ್ಕಾರಿ ನೌಕರರಿಗೆ ಮತ್ತೊಂದು ಭತ್ಯೆ ಶೇ.30ಕ್ಕೆ ತಲುಪುವುದು ಆಲ್ಮೋಸ್ಟ್ ಕನ್ಫರ್ಮ್!
ದರಗಳು 7 ತಿಂಗಳಲ್ಲೇ ಅತ್ಯಂತ ಕಡಿಮೆ ಮಟ್ಟದಲ್ಲಿವೆ
ಮಾರ್ಚ್ 2020 ರಲ್ಲಿ, ಇಪಿಎಫ್‌ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಏಳು ತಿಂಗಳ ಕನಿಷ್ಠ ಅಂದರೆ ಶೇಕಡಾ 8.5 ಕ್ಕೆ ಇಳಿಸಿದೆ. 2018-19ಕ್ಕೆ ಇದು ಶೇ. 8.65 ರಷ್ಟಿತ್ತು ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.